ಚಿಕ್ಕನಾಯಕನಹಳ್ಳಿ: ಕಟ್ಟಡದ ಪಿಲ್ಲರ್ ಬಿದ್ದು ಆಟ ಆಡುತ್ತಿದ್ದ ವಿದ್ಯಾರ್ಥಿ ಸಾವು

ಚಿಕ್ಕನಾಯಕನಹಳ್ಳಿ: ಕಟ್ಟಡದ ಪಿಲ್ಲರ್ ಬಿದ್ದು ಆಟ ಆಡುತ್ತಿದ್ದ ವಿದ್ಯಾರ್ಥಿ ಸಾವು

ಚಿಕ್ಕನಾಯಕನಹಳ್ಳಿ: ಕಟ್ಟಡದ ಪಿಲ್ಲರ್ ಬಿದ್ದು ಆಟ ಆಡುತ್ತಿದ್ದ ವಿದ್ಯಾರ್ಥಿ ಸಾವು

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗೀಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಟ ಆಡುತ್ತಿದ್ದ ವಿದ್ಯಾರ್ಥಿ ಮೇಲೆ ಕಟ್ಟಡದ ಪಿಲ್ಲರ್ ಬಿದ್ದು ವಿದ್ಯಾರ್ಥಿ ಧನುಷ್ (12) ಸಾವನ್ನಪ್ಪಿದ್ದಾನೆ.

ಮತ್ತಿಘಟ್ಟ ಗ್ರಾಮದ ಆನಂದ್ ಹಾಗೂ ಪಾರ್ವತಿ ದಂಪತಿಯ ಪುತ್ರ ಧನುಷ್‌ ಬೆಳಗೀಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ.

ಡೈರಿ ಮುಂಭಾಗದ ಪಿಲ್ಲರ್ ಈ ಮೊದಲೇ ಬಿರುಕು ಬಿಟ್ಟಿತ್ತು. ಇದನ್ನು ಸರಿ ಪಡಿಸದೆ ಹಾಗೆ ಬಿಡಲಾಗಿತ್ತು. ಕಳಪೆ ಕಾಮಗಾರಿಯೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ