
ಹೊಸಪೇಟೆ: ತುಂಗಭದ್ರಾ ನದಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ಕಾಲುವೆಗಳ ಜತೆಗೆ ನದಿಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಇಲ್ಲಿನ ತುಂಗಭದ್ರಾ ಮಂಡಳಿ ಕಚೇರಿ ಬಳಿ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನದಿಗೆ ನೀರು ಹರಿಸುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಸದ್ಯ ಜಲಾಶಯದಲ್ಲಿ 94 ಟಿಎಂಸಿ ನೀರಿದೆ, ಕಾಲುವೆ ಜತೆಗೆ ನದಿ ಪಾತ್ರದ ರೈತರ ಹಿತವನ್ನು ಸಹ ಕಾಪಾಡಬೇಕು ಎಂದು ರೈತರು ಒತ್ತಾಯಿಸಿದರು.
ಮಾಜಿ ಶಾಸಕರಾದ ಬಸವರಾಜ ದಡೇಸುಗೂರು, ಸೋಮಲಿಂಗಪ್ಪ, ಮುಖಂಡರಾದ, ಅಶೋಕ್ ಭೂಪಾಲ್, ಉಪ್ಪಳ ಚನ್ನಬಸವನಗೌಡ, ಗೋಪಾಲರೆಡ್ಡಿ ಮುಕುಂದ್ ಇತರರು ಪಾಲ್ಗೊಂಡಿದ್ದರು.