
'ಕರ್ವಾಲೊ' ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆ ಆಯೋಜನೆ
ಚಿಕ್ಕಬಳ್ಳಾಪುರ: ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವು ತೇಜಸ್ವಿ ಅವರ 88ನೇ ಜನ್ಮದಿನದ ಪ್ರಯುಕ್ತ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಿಗಳು ‘ಕರ್ವಾಲೊ’ ಕಾದಂಬರಿಯ ಯಾವುದೇ ಒಂದು ಸನ್ನಿವೇಶ, ಪಾತ್ರ, ಸಂಭಾಷಣೆ, ಭಾವನೆ ಅಥವಾ ದೃಶ್ಯವನ್ನು ಆಧರಿಸಿ ಡಿಜಿಟಲ್ ಚಿತ್ರ ರಚಿಸಬೇಕು. ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ ₹ 20,000, ದ್ವಿತೀಯ ಬಹುಮಾನ ₹ 10,000, ತೃತೀಯ ಬಹುಮಾನ ₹ 5,000 ಹಾಗೂ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.
ಚಿತ್ರಗಳನ್ನು ಸಲ್ಲಿಸಲು ಆ.29 ಕೊನೆ ದಿನ. ಸೆ.5 ರಂದು ವಿಜೇತರ ಹೆಸರನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುವುದು. 8 ರಂದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆಯುವ ತೇಜಸ್ವಿ ಅವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಮಾಹಿತಿಗೆ 9663098873, 9449309067 ಅಥವಾ kpptrust.r@gmail.com ಸಂಪರ್ಕಿಸಬಹುದು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-16-1642109869