ವಿಜಯಪುರ | ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ: ಜನರ ಆತಂಕ

ವಿಜಯಪುರ | ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ: ಜನರ ಆತಂಕ

ವಿಜಯಪುರ | ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ: ಜನರ ಆತಂಕ

ದೇವರಹಿಪ್ಪರಗಿ: ಮಳೆಯ ಅಭಾವದ ನಡುವೆ ಜಿಲ್ಲೆಯಾದ್ಯಂತ ಬಹುತೇಕ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಈಗ ಕುಡಿಯುವ ನೀರು ಪೂರೈಕೆಗೆ ಆಧಾರವಾದ ಶುದ್ಧ ನೀರಿನ ಘಟಕಗಳು ಸಹ ಕಾರ್ಯನಿರ್ವಹಿಸದೇ ಬಂದಾಗಿದ್ದು, ಗ್ರಾಮೀಣ ಜನತೆಗೆ ಜೀವಜಲ ದೊರಕದಂತಾಗಿದೆ.

ತಾಲ್ಲೂಕು ವ್ಯಾಪ್ತಿಯ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯ 40 ಶುದ್ಧ ನೀರಿನ ಘಟಕಗಳ ಪೈಕಿ ದೇವರಹಿಪ್ಪರಗಿ (ಹೊಸನಗರ), ಬಮ್ಮನಜೋಗಿ, ಮುಳಸಾವಳಗಿ ತಾಂಡಾ, ಸಾತಿಹಾಳ ಮತ್ತು ತಾಂಡಾ, ಇಬ್ರಾಹಿಂಪೂರ ಸಹಿತ ಹಲವು ಗ್ರಾಮಗಳಿಗೆ ಆಧಾರವಾಗಿದ್ದ 25 ಶುದ್ಧ ನೀರಿನ ಘಟಕಗಳು ಹಲವು ತಿಂಗಳು, ವರ್ಷಗಳಿಂದ ಕಾರ್ಯ ನಿರ್ವಹಿಸದೇ ಇವೆ. ಈ ಬಗ್ಗೆ ಪಂಚಾಯಿತಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡತನ ಪ್ರದರ್ಶಿಸುತ್ತಿವೆ.

ಈ ಕುರಿತು ಬಮ್ಮನಜೋಗಿ ಗ್ರಾಮದ ಯುವರೈತ ವಿಠ್ಠಲ ಯಂಕಂಚಿ ಮಾತನಾಡಿ, ‘ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಜಾನೆಯಲ್ಲಿ ₹1 ಕೋಟಿ ಇದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬರಗಾಲ ಬಿದ್ದು ಜನ ಜಾನುವಾರುಗಳು ನೀರು ಸಿಗದೆ ಒದ್ದಾಡುತ್ತಿದ್ದರು ಯಾವುದೇ ಒಬ್ಬ ಪಿಡಿಒ, ತಾ. ಪಂ.ಇಒ ಕುಡಿಯುವ ನೀರಿನ ಕುರಿತು ಧ್ವನಿ ಎತ್ತಿಲ್ಲ ಹಾಗೂ ಸಮಸ್ಯೆ ಬಗೆಹರಿಸಿಲ್ಲ. ಇದಕ್ಕೆ ನಮ್ಮ ಜಿಲ್ಲೆ ಹೊರತಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಗಾಲದಿಂದ ತತ್ತರಿಸಿದ ಜನತೆಗೆ ಹಾಗೂ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲ ಆಗುವಂತೆ ತಾಲೂಕಿನ ಕೆರೆಗಳನ್ನು ಕಾಲುವೆಗಳ ಮೂಲಕ ತುಂಬಿಸುತ್ತಿರುವುದು ಸಂತೋಷದ ವಿಷಯ. ಆದರೆ ಕೆಲವೊಂದು ಗ್ರಾಮಗಳಿಗೆ ಕುಡಿಯುವ ನೀರಿನ ಬಾವಿಗಳು ಕೆರೆಯ ಜಾಗದಲ್ಲಿಯೇ ನಿರ್ಮಿಸಿರುವುದರಿಂದ ಕೆರೆಯ ನೀರು ಬಾವಿಯೊಳಗೆ ಇಂಗುವ ಮೂಲಕವೊ ಅಥವಾ ಬಸಿಯುವ ಮೂಲಕವೋ ಹೋಗಿ ಸೇರುತ್ತಿವೆ.

‘ಶಾಲೆಯ ಮಕ್ಕಳಿಗೂ ಸಹ ಇವೇ ನೀರು ಗತಿಯಾಗಿವೆ. ಹಾಗಾಗಿ ಕೂಡಲೇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಬಾವಿಯೊಳಗಿನ ನೀರನ್ನು ಶುದ್ದಿಕರಿಸಿ ಜನರಿಗೆ ತಲುಪುವ ವ್ಯವಸ್ಥೆ ಮಾಡಿದ್ದು, ಈಗ ಅವುಗಳೆಲ್ಲ ನಿಂತು ಹೋಗಿವೆ’ ಎನ್ನುತ್ತಾರೆ ಬಮ್ಮನಜೋಗಿ ಗ್ರಾಮದ ಚಂದ್ರಾಮ ನಂದಗೇರಿ’ ಬಸವರಾಜ ಹೊಸಮನಿ.

ಗ್ರಾಮೀಣ ಜನತೆ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ಬಲಿ ಯಾಗಬಾರದು ಎಂದು ಹಿಂದಿನ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತು. ಆದರೆ ಇಂದು ತಾಲ್ಲೂಕಿನ ಬಹುತೇಕ ಘಟಕಗಳು ಚಾಲನೆಯಲ್ಲಿ ಇರುವು ದಕ್ಕಿಂತ ಹೆಚ್ಚಾಗಿ ಬಂದಾಗಿವೆ ಸರ್ಕಾರದ ಹಣ ಅನಗತ್ಯ ಖರ್ಚು ಮಾಡುವುದು ಸರಿಯಲ್ಲ. ಕೂಡಲೇ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರು ಪೂರೈಸುವ ಘಟಕಗಳನ್ನು ಸರಿಪಡಿಸಿ ವ್ಯವಸ್ಥೆ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಸೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-26-1485504589

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ