ಚಿಕ್ಕನಾಯಕನಹಳ್ಳಿಯಲ್ಲಿ ಬೀದಿನಾಯಿ ಉಪಟಳ: ಮನೆಯಿಂದ ಹೊರಬರಲು ಜನ ಹಿಂದೇಟು

ಚಿಕ್ಕನಾಯಕನಹಳ್ಳಿಯಲ್ಲಿ ಬೀದಿನಾಯಿ ಉಪಟಳ: ಮನೆಯಿಂದ ಹೊರಬರಲು ಜನ ಹಿಂದೇಟು

ಚಿಕ್ಕನಾಯಕನಹಳ್ಳಿಯಲ್ಲಿ ಬೀದಿನಾಯಿ ಉಪಟಳ: ಮನೆಯಿಂದ ಹೊರಬರಲು ಜನ ಹಿಂದೇಟು

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಿದೆ. ಜನರು ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ಪ್ರಮುಖ ಬೀದಿ, ಬಡಾವಣೆಗಳಲ್ಲಿ ಶ್ವಾನಗಳ ಹಿಂಡು ಸಂಚರಿಸುತ್ತಿದ್ದು, ಮನೆ ಬಾಗಿಲು ತೆರೆಯುವುದೇ ದುಸ್ತರವಾಗಿದೆ. ಮಹಿಳೆಯರು ಆತಂಕದಿಂದಲೇ ಓಡಾಡುತ್ತಿದ್ದು, ಯಾವಾಗ ದಾಳಿ ನಡೆಸುತ್ತವೆಯೋ ಎಂಬ ಭೀತಿ ದ್ವಿಚಕ್ರ ವಾಹನ ಸವಾರರು, ಶಾಲಾ ಮಕ್ಕಳು, ವೃದ್ಧರನ್ನು ಕಾಡುತ್ತಿದೆ.

ಮಗುವೊಂದರ ಮೇಲೆ ನಾಯಿಗಳು ಈಚೆಗೆ ನಡೆಸಿದ ದಾಳಿ ಪಟ್ಟಣಿಗರನ್ನು ಮತ್ತಷ್ಟು ಭೀತರನ್ನಾಗಿಸಿದೆ. ಇದರ ಬೆನ್ನಿಗೆ ಎಚ್ಚೆತ್ತುಕೊಂಡ ಉಪವಿಭಾಗಾಧಿಕಾರಿ, ಆಡಳಿತಾಧಿಕಾರಿ ಸಪ್ತಶ್ರೀ ತಕ್ಷಣವೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಪಟ್ಟಣದಲ್ಲಿ ಕನಿಷ್ಠ 2 ಸಾವಿರ ಬೀದಿನಾಯಿಗಳಿವೆ. ಇವುಗಳ ಸಂಖ್ಯೆ ಹೆಚ್ಚಾಗಲು ಆಡಳಿತವು ಕಾಲಕಾಲಕ್ಕೆ ಸಂತಾನೋತ್ಪತ್ತಿಗೆ ಕಡಿವಾಣ ಹಾಕದಿರುವುದೇ ಪ್ರಮುಖ ಕಾರಣವಾಗಿದೆ. ಬೀದಿ ನಾಯಿಗಳನ್ನು ನಿಯಂತ್ರಿಸುವುದು ಪುರಸಭೆಯ ಆದ್ಯ ಕರ್ತವ್ಯ. ಆದರೆ ಈ ವಿಚಾರದಲ್ಲಿ ಅಸಹಾಯಕವಾಗಿದೆ.

ಬೀದಿ ನಾಯಿಗಳನ್ನು ಹಿಡಿಯಲು ಪುರಸಭೆ ಎರಡು ಬಾರಿ ಟೆಂಡರ್ ಕರೆದಿತ್ತು. ಆದರೆ ಯಾರೂ ಭಾಗವಹಿಸಿಲ್ಲ ಎಂಬ ಕಾರಣಕ್ಕೆ ಪ್ರಕ್ರಿಯೆಯನ್ನು ಅಲ್ಲಿಗೆ ಸ್ಥಗಿತಗೊಳಿಸಿತು. ಪರ್ಯಾಯ ಮಾರ್ಗ ಹುಡುಕದೆ ಕೈಚೆಲ್ಲಿ ಕುಳಿತಿದ್ದೇ ಸಮಸ್ಯೆಯ ಉಲ್ಭಣಕ್ಕೆ ಕಾರಣ.

ಪ್ರತಿ ವರ್ಷವೂ ಈ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ಇಂತಹ ಗಂಭೀರ ಸನ್ನಿವೇಶ ಉದ್ಭವಿಸುತ್ತಿರಲ್ಲಿಲ್ಲ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ಸಾರ್ವಜನಿಕರು, ಮಕ್ಕಳ ರಕ್ಷಣೆಗಾಗಿ ಮಿತಿಮೀರಿರುವ ನಾಯಿಗಳನ್ನು ಪಟ್ಟಣದ ಜನವಸತಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸುವ ಕಟ್ಟುನಿಟ್ಟಿನ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-17-1766224419

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ