
ಕುಡಿದ ಅಮಲಿನಲ್ಲಿ ತಲವಾರು ಝಳಪಿಸಿ ಬೆದರಿಕೆ; ರೌಡಿ ಶೀಟರ್ ಸಹಿತ ಇಬ್ಬರ ಬಂಧನ
ಉಳ್ಳಾಲ (ದಕ್ಷಿಣ ಕನ್ನಡ): ಮದ್ಯ ಸೇವಿಸಿದ ಅಮಲಿನಲ್ಲಿ ರೌಡಿಶೀಟರ್ ಒಬ್ಬ ಉಳ್ಳಾಲ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ಸಾರ್ವಜನಿಕರಿಗೆ ಬೆದರಿಸಿದ್ದು, ಈ ಸಂಬಂಧ ರೌಡಿಶೀಟರ್ ಹಾಗೂ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ರೌಡಿಶೀಟರ್ ಮೊಹಮ್ಮದ್ ಶಾಕೀರ್ (31) ಹಾಗೂ ಉಳ್ಳಾಲ ಮಂಚಿಲ ನಿವಾಸಿ ಅಷ್ಪಾಕ್ (28 ) ಬಂಧಿತ ಆರೋಪಿಗಳು.
ಮೊಹಮ್ಮದ್ ಶಾಕೀರ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಅಷ್ಪಾಕ್ ರಿಕ್ಷಾ ಚಾಲಕ. ಆರೋಪಿ ಶಾಕೀರ್ ಮಧ್ಯ ರಾತ್ರಿ 12ರಿಂದ 12.20ರ ನಡುವೆ ರಸ್ತೆ ಪಕ್ಕ ನಿಂತಿದ್ದ ಸಾರ್ವಜನಿಕರಿಗೆ ತಲವಾರು ತೋರಿಸಿ ಬೆದರಿಸಿದ್ದ. ಆರೋಪಿಗಳ ವಿರುದ್ಧ ಸಶಸ್ತ್ರ ಕಾಯ್ದೆ ಹಾಗೂ ಇತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.