ಬಿಜೆಪಿ ನೂತನ ಉಸ್ತುವಾರಿಗಳ ನೇಮಕ: ಉ.ಪ್ರದೇಶ, ಗುಜರಾತ್‌ ಚುನಾವಣೆ ಕಣದ ಲೆಕ್ಕಾಚಾರ

ಬಿಜೆಪಿ ನೂತನ ಉಸ್ತುವಾರಿಗಳ ನೇಮಕ: ಉ.ಪ್ರದೇಶ, ಗುಜರಾತ್‌ ಚುನಾವಣೆ ಕಣದ ಲೆಕ್ಕಾಚಾರ

ಬಿಜೆಪಿ ನೂತನ ಉಸ್ತುವಾರಿಗಳ ನೇಮಕ: ಉ.ಪ್ರದೇಶ, ಗುಜರಾತ್‌ ಚುನಾವಣೆ ಕಣದ ಲೆಕ್ಕಾಚಾರ

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಿಗೆ ನೂತನ ರಾಜ್ಯ ಉಸ್ತುವಾರಿ ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿ ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

2027ರಲ್ಲಿ ಈ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಉತ್ತರ ಪ್ರದೇಶದ ರಾಜ್ಯ ಉಸ್ತುವಾರಿ ಹೊಣೆಯನ್ನು ರಾಜ್ಯಸಭಾ ಸಂಸದ ವಿನೋದ್ ತಾವ್ಡೆ ಅವರಿಗೆ ನೀಡಲಾಗಿದೆ. ಜಗದೀಶ್ ಈಶ್ವರಭಾಯಿ ಪಟೇಲ್ ಅವರಿಗೆ ಸಹ-ಉಸ್ತುವಾರಿ ಹೊಣೆ ನೀಡಲಾಗಿದೆ.

ರಾಜ್ಯಸಭಾ ಸಂಸದ ಸತೀಶ್ ಪೂನಿಯಾ ಅವರು ಪಂಜಾಬ್ ಹಾಗೂ ರಾಜ್ಯಸಭಾ ಸಂಸದ ತರುಣ್ ಚುಗ್ ಅವರು ಗುಜರಾತ್‌ನ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

ಈ ಹೊಸ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ಇತರ ರಾಜ್ಯಗಳ ಉಸ್ತುವಾರಿಗಳ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಬಿಜೆಪಿ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ