ಸ್ಕಿಲ್‌ ಬೇಸ್ಡ್‌ ಟೀಚಿಂಗ್..ಮಕ್ಕಳನ್ನು ಸೆಳೆಯುತ್ತಿರುವ ಮಂಗಸೂಳಿಯ ಸರ್ಕಾರಿ ಶಾಲೆ

ಸ್ಕಿಲ್‌ ಬೇಸ್ಡ್‌ ಟೀಚಿಂಗ್..ಮಕ್ಕಳನ್ನು ಸೆಳೆಯುತ್ತಿರುವ ಮಂಗಸೂಳಿಯ ಸರ್ಕಾರಿ ಶಾಲೆ

ಸ್ಕಿಲ್‌ ಬೇಸ್ಡ್‌ ಟೀಚಿಂಗ್..ಮಕ್ಕಳನ್ನು ಸೆಳೆಯುತ್ತಿರುವ ಮಂಗಸೂಳಿಯ ಸರ್ಕಾರಿ ಶಾಲೆ

ಕಾಗವಾಡ: ಸರ್ಕಾರಿ ಶಾಲೆ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಕಲಿಕೆಗೆ ಪೂರಕ ಸೌಕರ್ಯ ಇರುವುದಿಲ್ಲ ಎಂಬುದು ವಿದ್ಯಾರ್ಥಿಗಳು ಮತ್ತು ಪಾಲಕರ ದೂರು.

ಆದರೆ, ಗಡಿಗ್ರಾಮವಾದ ಕಾಗವಾಡ ತಾಲ್ಲೂಕಿನ ಮಂಗಸೂಳಿಯ ಮಲ್ಲಪ್ಪ ಮಗದುಮ್ಮ ಕರ್ನಾಟಕ ಪಬ್ಲಿಕ್‌ ಶಾಲೆ ಇದಕ್ಕೆ ಅಪವಾದ ಎಂಬಂತಿದೆ. ಇಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಗಿಬೀಳುತ್ತಾರೆ. ಇಲ್ಲಿ ಒಂದೇ ಆವರಣದಲ್ಲಿ ಕನ್ನಡ, ಮರಾಠಿ ಮತ್ತು ಉರ್ದು ಮೂರು ಮಾಧ್ಯಮಗಳು ಇರುವುದು ವಿಶೇಷ.

1978ರಲ್ಲಿ ಮಲ್ಲಪ್ಪ ರಾಮಪ್ಪ ಮಗದುಮ್ಮ ಎಂಬುವವರು, ತಮ್ಮೂರಿನ ಬಡ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂಟು ಎಕರೆ ಜಮೀನು ಮತ್ತು ₹40 ಸಾವಿರ ದೇಣಿಗೆ ನೀಡಿದ್ದರು. ಹಾಗಾಗಿ ಅವರ ಹೆಸರನ್ನೇ ಶಾಲೆಗೆ ನಾಮಕರಣ ಮಾಡಲಾಗಿದೆ.

ಸದಾ ಭಾಷಾ ದ್ವೇಷಕ್ಕೆ ಸಾಕ್ಷಿಯಾದ ಊರು ಮಂಗಸೂಳಿ. ಆದರೆ, ಇಲ್ಲಿನ ಶಾಲೆ ಮಾತ್ರ ಭಾಷಾ ಸಾಮರಸ್ಯದೊಂದಿಗೆ ಬೆಳೆಯುತ್ತ ಸಾಗಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ.

ಇಲ್ಲಿ ಪಠ್ಯಕ್ರಮ ಬೋಧಿಸುವ ಜತೆಗೆ, ಬ್ಯೂಟಿಷಿಯನ್ ತರಬೇತಿ ನೀಡಲಾಗುತ್ತಿದೆ. ಸ್ಪೋಕನ್‌ ಇಂಗ್ಲಿಷ್‌, ಕಂಪ್ಯೂಟರ್‌ ಕಲಿಕೆ, ಕೌಶಲ ಅಭಿವೃದ್ಧಿ ಕಲಿಕೆ, ಆಟೊಮೊಬೈಲ್‌ ಬೇಸಿಕ್‌ ಕಲಿಸಲಾಗುತ್ತಿದೆ. ರೋಬೋಟಿಕ್‌ ಲ್ಯಾಬ್‌ ಕೂಡ ಇಲ್ಲಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 40 ಶಿಕ್ಷಕರು ಇವೆಲ್ಲ ಪರಿಣಾಮಕಾರಿಯಾಗಿ ಪಾಠ ಬೋಧಿಸುತ್ತಾರೆ.

ಕಳೆದ ವರ್ಷ ಈ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಳು. ಶಿಕ್ಷಣ ರಂಗದಲ್ಲಿ ಮಾಡುತ್ತಿರುವ ಸಾಧನೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತ ಸಾಗಿದೆ. ಕಳೆದ ಮೂರು ವರ್ಷಗಳ ಹಿಂದೆ 300 ವಿದ್ಯಾರ್ಥಿಗಳು ಇದ್ದರು. ಈಗ ಪಟಸಂಖ್ಯೆ 450ಕ್ಕೆ ಏರಿಕೆಯಾಗಿದೆ.

ವಿಶಾಲವಾದ ಎಂಟು ಎಕರೆ ವಿಸ್ತೀರ್ಣದ ಶಾಲೆಯಲ್ಲಿ ಸುಸಜ್ಜಿತವಾದ ತರಗತಿ ಕೊಠಡಿಗಳು ಹಾಗೂ ಶೌಚಗೃಹ ನಿರ್ಮಿಸಲಾಗಿದೆ. ಶಾಸಕ ರಾಜು ಕಾಗೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು, ತಲಾ ಎರಡು ಕೊಠಡಿ ಮಂಜೂರು ಮಾಡಿಸಿದ್ದಾರೆ.

ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು, ಎಲ್ಲ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವ್ಯಾಯಾಮ ಸಾಮಗ್ರಿ ನೀಡಿದ್ದಾರೆ.

ಶಾಲಾ ಆವರಣದಲ್ಲಿ ಕುಳಿತುಕೊಳ್ಳಲು ಕಲ್ಲಿನ ಮೇಜುಗಳ ವ್ಯವಸ್ಥೆ ಇದೆ. ನೆರಳಿಗಾಗಿ ಸಸಿಗಳನ್ನು ನೆಡಲಾಗಿದೆ. ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಿಸಲಾಗಿದೆ. ಪ್ರತಿ ಶಾಲಾ ಕೊಠಡಿಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಪ್ರೊಜೆಕ್ಟರ್‌ ವ್ಯವಸ್ಥೆಯೂ ಇದ್ದು, ಮಕ್ಕಳಿಗೆ ಆಧುನಿಕ ಪದ್ಧತಿಯಡಿ ಶಿಕ್ಷಣ ನೀಡಲಾಗುತ್ತಿದೆ.

ಗಡಿಭಾಗದ ಸರ್ಕಾರಿ ಶಾಲೆಯೊಂದು ಎಲೆಮರೆ ಕಾಯಿಯಂತೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಸ್‌.ಎಸ್. ಶೇಡಶ್ಯಾಳೆ, ಪ್ರಭಾರ ಮುಖ್ಯಶಿಕ್ಷಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-21-1951986614

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ