ದೇವರ ಸಮಗ್ರ ಸ್ವರೂಪವನ್ನು ತಿಳಿದುಕೊಳ್ಳಬೇಕು: ಸತ್ಯಾತ್ಮತೀರ್ಥಶ್ರೀ

ದೇವರ ಸಮಗ್ರ ಸ್ವರೂಪವನ್ನು ತಿಳಿದುಕೊಳ್ಳಬೇಕು: ಸತ್ಯಾತ್ಮತೀರ್ಥಶ್ರೀ

ದೇವರ ಸಮಗ್ರ ಸ್ವರೂಪವನ್ನು ತಿಳಿದುಕೊಳ್ಳಬೇಕು: ಸತ್ಯಾತ್ಮತೀರ್ಥಶ್ರೀ

ಧಾರವಾಡ: ‘ಭಗವಂತನ ಅನುಗ್ರಹ ಮತ್ತು ಮಂದಹಾಸದ ಸಂಕೇತ ಪುಷ್ಪ. ತಾನೇ ಅರಳಿಸಿದ ಪುಷ್ಪಗಳಿಂದ ಪೂಜೆಗೊಳ್ಳುತ್ತಿರುವ ಭಗವಂತನ ಕೃಪೆಗೆ ಸಮಸ್ತರು ಪಾತ್ರರಾಗಬೇಕು’ ಎಂದು ಉತ್ತರಾದಿ ಮಠದ ಸತ್ಯಾತ್ಮತೀರ್ಥಶ್ರೀ ಹೇಳಿದರು.

ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ 31ನೇ ಚಾತುರ್ಮಾಸ್ಯದಲ್ಲಿ ಅವರು ಮಾತನಾಡಿದರು. ಸೂರ್ಯ, ಚಂದ್ರ, ಮಳೆ, ನೀರು, ಪುಷ್ಪ ಹೀಗೆ ಎಲ್ಲವೂ ಭಗವಂತನ ಆಧೀನ. ಪುಷ್ಪಗಳ ಸಮರ್ಪಣೆ ಸ್ವೀಕರಿಸುವ ದೇವರಿಗೆ ನಾವು ಅಹಿಂಸಾ, ಇಂದ್ರಿಯ ನಿಗ್ರಹ, ದಯಾ, ಕ್ಷಮಾ, ಜ್ಞಾನ, ತಪಸ್ಸು, ಧ್ಯಾನ, ಸತ್ಯ ಪುಷ್ಪ ಹೀಗೆ ಎಂಟು ಪುಷ್ಪಗಳನ್ನು ನಿತ್ಯ ಜೀವನದಲ್ಲಿ ಸಾಧನೆಯ ಮೂಲಕ ಅರ್ಪಿಸಿ, ಭಗವಂತನ ಅನಂತ ಕೃಪೆಗೆ ಪಾತ್ರರಾಗಬೇಕು' ಎಂದರು.

‘ದೇವರ ಸಮಗ್ರ ಸ್ವರೂಪವನ್ನು ತಿಳಿದುಕೊಳ್ಳಬೇಕು. ವಿಶ್ವರೂಪವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಎಲ್ಲಾ ವಿಷಯಗಳನ್ನು ಚಿಂತನ, ಮಂಥನ ಮಾಡಬೇಕು. ದೇಹವನ್ನು ಶುದ್ಧ ಮಾಡಿಕೊಂಡು ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕು. ಪರಮಾತ್ಮನ ಮಹಿಮೆಯನ್ನು ತಿಳಿಯಬೇಕು. ಶಂಖದಲ್ಲಿ ಲಕ್ಷ್ಮೀದೇವಿ ಇದ್ದು ಹಯಗ್ರೀವ ದೇವರು ಶಂಖ ಧಾರಣ ಮಾಡಿದ್ದಾರೆ. ವಾಕ್ ಶಕ್ತಿಯಾದ ಹಯಗ್ರೀವ ದೇವರನ್ನು ಧ್ಯಾನಿಸಬೇಕು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-24-242718979

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ