ಭಾಲ್ಕಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ಚಿತ್ತಾಕರ್ಷಕ ರಾಖಿಗಳು

ಭಾಲ್ಕಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ಚಿತ್ತಾಕರ್ಷಕ ರಾಖಿಗಳು

ಭಾಲ್ಕಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ಚಿತ್ತಾಕರ್ಷಕ ರಾಖಿಗಳು

ಭಾಲ್ಕಿ: ಸಹೋದರತೆ, ಭ್ರಾತೃತ್ವದ ಸಂಕೇತದ ರಕ್ಷಾ ಬಂಧನ ಹಬ್ಬಕ್ಕೆ ಒಂದೇ ದಿನ ಬಾಕಿ ಇದ್ದು, ಮಾರುಕಟ್ಟೆಯಲ್ಲಿ ಬಗೆ ಬಗೆಯ ರಾಖಿಗಳು ರಾರಾಜಿಸುತ್ತಿವೆ. ಹೆಣ್ಣು ಮಕ್ಕಳು ತಮ್ಮ ಪ್ರೀತಿಯ ಸಹೋದರರಿಗೆ ಕಟ್ಟಲು ರಾಖಿ ಖರೀದಿ ಜೋರು ಮಾಡುತ್ತಿದ್ದಾರೆ.

ರಕ್ಷಾ ಬಂಧನ ಹಬ್ಬದ ಮೆರುಗು ಹೆಚ್ಚಿಸಲು ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದಲ್ಲಿರುವ ಚಿತ್ತಾಕರ್ಷಕ, ಫ್ಯಾನ್ಸಿ ರಾಖಿಗಳು ಮಹಿಳೆಯರನ್ನು ಸೆಳೆಯುತ್ತಿವೆ. ನಗರದ ಮಹಾತ್ಮ ಗಾಂಧಿ ವೃತ್ತದ ಸುತ್ತಮುತ್ತ ಸೇರಿದಂತೆ ಬಹುತೇಕ ಜನರಲ್ ಸ್ಟೋರ್, ಕಿರಾಣಿ ಅಂಗಡಿಗಳು ಮತ್ತು ತಳ್ಳುಬಂಡಿಗಳಲ್ಲಿ ರಾಖಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಮಾರುಕಟ್ಟೆ ಪ್ರದೇಶದಲ್ಲಿ ಕಾಲಿಟ್ಟರೆ ಸಾಕು ನೂರಾರು ಬಗೆಯ ರಾಖಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಕಾಲಕ್ಕೆ ತಕ್ಕಂತೆ ರಾಖಿಗಳ ವಿನ್ಯಾಸವೂ ಬದಲಾಗಿದೆ.

ಅಂಗಡಿಗಳಲ್ಲಿ ವಿವಿಧ ಬಣ್ಣಗಳ ನೂಲಿನ, ರುದ್ರಾಕ್ಷಿ, ಮುತ್ತಿನಹಾರ, ಶ್ರೀ, ಶಿವ, ಗಣೇಶ, ರಾಧಾ–ಕೃಷ್ಣ, ಜೈ ಶ್ರೀ ರಾಮ್ ಎಂದು ಬರೆದಿರುವ ತನಿಷ್ಕ್ ಸ್ಟೋನ್ ಇರುವ, ಛೋಟಾ ಭೀಮ್, ರೇಷ್ಮೆದಾರ, ಮುತ್ತಿನ ರಾಖಿ, ಕಸೂತಿ, ಮಣಿ ಜೋಡಣೆ, ಕ್ರಿಸ್ಟಲ್‌, ಸ್ಟೋನ್ಸ್‌ ಸೇರಿದಂತೆ ವಿವಿಧ ಬಗೆಯ ರಾಖಿಗಳು ಲಭ್ಯ ಇವೆ.

‘ನಮ್ಮ ಅಂಗಡಿಗಳಲ್ಲಿ ಸುಮಾರು ₹ 5 ಯಿಂದ ಪ್ರಾರಂಭವಾಗಿ ₹ 500 ವರೆಗಿನ ಬಗೆಬಗೆಯ ರಾಖಿಗಳು ಲಭ್ಯವಿದೆ. ನೂಲು, ತನಿಷ್ಕ್, ಜೈ ಶ್ರೀ ರಾಮ್ ಮತ್ತು ಶಿವನ ಚಿತ್ರವಿರುವ ರಾಖಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗುರುವಾರ ಹೆಚ್ಚಿನ ರಾಖಿಗಳ ಮಾರಾಟದ ನಿರೀಕ್ಷೆ ಇದೆ. ಮಹಿಳೆಯರು ತಮ್ಮ ಸಹೋದರರಿಗಾಗಿ ರಾಖಿಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಿದ್ದಾರೆ’ ಎಂದು ಬಾಲಾಜಿ ವಾಕುಡೆ, ಆದರ್ಶ ತಪಸ್ಯಾಳೆ ಸೇರಿದಂತೆ ವಿವಿಧ ಅಂಗಡಿಗಳ ಮಾಲೀಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-33-466875927

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ