ಬಿಎಫ್‌ಸಿ ಜೊತೆಗೆ ಒಪ್ಪಂದ ಮುಂದುವರೆಸಿದ ಮಿಡ್‌ಫೀಲ್ಡರ್ ಸೋಹಮ್

ಬಿಎಫ್‌ಸಿ ಜೊತೆಗೆ ಒಪ್ಪಂದ ಮುಂದುವರೆಸಿದ ಮಿಡ್‌ಫೀಲ್ಡರ್  ಸೋಹಮ್

ಬಿಎಫ್‌ಸಿ ಜೊತೆಗೆ ಒಪ್ಪಂದ ಮುಂದುವರೆಸಿದ ಮಿಡ್‌ಫೀಲ್ಡರ್ ಸೋಹಮ್

ಬೆಂಗಳೂರು: ಮಿಡ್‌ಫೀಲ್ಡರ್ ಸೋಹಮ್ ವರ್ಷ್ಣೇಯ ಅವರು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ಜೊತೆಗಿನ ತಮ್ಮ ಒಪ್ಪಂದವನ್ನು 2028–29ರ ಋತುವಿನ ಅಂತ್ಯದವರೆಗೆ ವಿಸ್ತರಿಸಿಕೊಂಡಿದ್ದಾರೆ.

22 ವರ್ಷದ ಸೋಹಮ್ 2025–26ರ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಎಂಟು ಪಂದ್ಯಗಳಲ್ಲಿ ಆಡಿದ್ದರು. 2024–25ರ ಸಾಲಿನಲ್ಲಿ ಬೆಂಗಳೂರು ಎಫ್‌ಸಿಯ ರಿಸರ್ವ್ ತಂಡಕ್ಕೆ ಬಡ್ತಿ ಪಡೆದ ಅವರು 24 ಪಂದ್ಯಗಳಲ್ಲಿ 14 ಗೋಲು ಮತ್ತು 12 ಗೋಲುಗಳಿಗೆ ನೆರವಾಗುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು. ಅದಕ್ಕಾಗಿ ‘ಬಿಎಫ್‌ಸಿ ಬಿ ತಂಡದ ವರ್ಷದ ಶ್ರೇಷ್ಠ ಆಟಗಾರ’ ಗೌರವ ಲಭಿಸಿತ್ತು.

ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದ ಮೂಲಕ ಸೋಹಮ್ ಐಎಸ್‌ಎಲ್‌ಗೆ 2025ರಲ್ಲಿ ಪದಾರ್ಪಣೆ ಮಾಡಿದ್ದರು. ಬಳಿಕ, ಸೆಪ್ಟೆಂಬರ್ 2025ರಲ್ಲಿ ಕತಾರ್‌ನಲ್ಲಿ ನಡೆದ ಎಎಫ್‌ಸಿ 23 ವರ್ಷದೊಳಗಿನವರ ಏಷ್ಯನ್ ಕಪ್ ಕ್ವಾಲಿಫೈಯರ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-43-2058081091

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ