ವಿಜಯನಗರ | ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಭತ್ತ ನಾಟಿ

ವಿಜಯನಗರ | ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಭತ್ತ ನಾಟಿ

ವಿಜಯನಗರ | ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಭತ್ತ ನಾಟಿ

ಮರಿಯಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಅತಿ ದೊಡ್ಡ ಕೆರೆ ಹಾಗೂ ಪಟ್ಟಣ ಭಾಗದ ಜೀವನಾಡಿ ಕೆರೆ ಡಣಾಯಕನಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕ ಹಾಗೂ ನಿರೀಕ್ಷೆಯ ನಡುವೆಯೇ ನೂರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿಗೆ ಮುಂದಾಗಿದ್ದಾರೆ.

1200 ಎಕರೆಗೆ ನೀರುಣಿಸುವ ಡಣಾಯಕನಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿದರೆ, ರೈತರು ಪ್ರತಿ ವರ್ಷ ಎರಡು ಬೆಳೆಯ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ, ಕಬ್ಬು ಬೆಳೆಯುತ್ತಾರೆ. ಆದರೆ ಈ ಬಾರಿ ಮೊದಲ ಬೆಳೆ ಬೆಳೆದಿಲ್ಲ.

ಕೆರೆಯಲ್ಲಿ ಉಳಿದ ಅಲ್ಪ ಪ್ರಮಾಣದ ನೀರು, ಇನ್ನು ಎರಡು ತಿಂಗಳು ಇರುವ 500ಎಕರೆ ಕಬ್ಬು, ತಲಾ 100ಎಕರೆ ಜೋಳ, ಮುಸುಕಿನ ಜೋಳದ ಬೆಳೆಗೆ ನೀರುಣಿಸಬೇಕಿದೆ. ಸದ್ಯ ಬಿತ್ತನೆಯಾಗದೆ ಉಳಿದ ಪ್ರದೇಶದಲ್ಲಿ ಭರದಿಂದ ಭತ್ತ ನಾಟಿಯಲ್ಲಿ ತೊಡಗಿರುವುದು ಭಾನು ವಾರ ಕಂಡು ಬಂದಿತು.

ತುಂಗಭ್ರಾ ಜಲಾಶಯದ ಹಿನ್ನೀರು ಬಳಸಿಕೊಂಡು ಏತನೀರಾವರಿ ಮೂಲಕ ಡಣಾಯಕನಕೆರೆಗೆ ನೀರು ತುಂಬಿಸಲಾಗುತ್ತದೆ. ಜಲಾಶಯದ ಮಟ್ಟ 1619ಅಡಿ ತಲುಪುತ್ತಿದ್ದಂತೆ ಬಾವಿಗೆ ನೀರು ಹರಿದು ಬರಲಿದೆ. ಇದಕ್ಕಾಗಿ 114-ಡಣಾಪುರ ಗ್ರಾಮದ ಹತ್ತಿರ ಹಿನ್ನೀರಿನ ಬಳಿಯ ಪಂಪೌಹೌಸ್‍ನಿಂದ ಸುಮಾರು 5ಕಿ.ಮೀ ದೂರ ಪೈಪ್‍ಲೈನ್ ಮೂಲಕ ನೀರು ಹರಿಸಿ ತುಂಬಿಸಲಾಗುತ್ತದೆ.

ಸದ್ಯ 1000ಕ್ಕೂ ಅಧಿಕ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ನಡೆದಿದ್ದು, 288ಎಂಸಿಎಫ್‍ಟಿ (0.288ಟಿಎಂಸಿ) ಸಾಮಥ್ರ್ಯದ ಡಣಾಯಕನಕೆರೆಯಲ್ಲಿ ಇರುವ ನೀರು, ಕಬ್ಬಿನ ಜೊತೆಗೆ ಭತ್ತಕ್ಕಾಗುವುದು ಕಷ್ಟ. ಹಾಗಾಗಿ ಮಳೆ ಹಾಗೂ ಜಲಾಶಯದ ಹಿನ್ನೀರನ್ನು ನಂಬಿದ್ದು, ನಿರೀಕ್ಷೆ ಹಾಗೂ ಆತಂಕದಲ್ಲಿಯೇ ನಾಟಿಗೆ ಮುಂದಾಗಿದ್ದೇವೆ ಎನ್ನುತ್ತಾರೆ ಮಾಗಾಣಿ ರೈತರಾದ ಸುಣಗಾರ ದುರುಗಪ್ಪ, ಅಂಜಿನಪ್ಪ, ಮಡಿವಾಳರ ಹುಲುಗಪ್ಪ, ಪ್ರಶಾಂತ್.

ರೈತರ ಆಕ್ರೋಶ: ಡಣಾಯಕನಕೆರೆಗೆ 114-ಡಣಾಪುರ ಗ್ರಾಮದ ಹತ್ತಿರ ಜಲಾಶಯದ ಹಿನ್ನೀರಿನ ಬಳಿ ನಿರ್ಮಿ ಸಿದ ಪಂಪೌಹೌಸ್‍ನ 500 ಕೆವಿ ವಿದ್ಯುತ್ ಪರಿವರ್ತಕದಲ್ಲಿನ ತಾಮ್ರದ ತಂತಿ ಹಾಗೂ ಕಾಯಿಲ್‍ಗಳನ್ನು ಕಳ್ಳರು ಫೆಬ್ರುವರಿ ತಿಂಗಳಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳತನವಾದ ವಿದ್ಯುತ್ ಪರಿವರ್ತಕ ಬದಲಾಯಿಸಿ, ಪರ್ಯಾಯ ವ್ಯವಸ್ಥೆ ಮಾಡಿ, ಆದಷ್ಟು ಬೇಗ ರೈತರ ಹೊಲಗದ್ದೆಗಳಿಗೆ ನೀರು ಹಾಯಿಸುವ ಕಾರ್ಯ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆ ಎಇರಾಜೇಶ್ ಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಸಾಕಷ್ಟು ಬಾರಿ ಟಿಸಿ ಬದಲಾಯಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮಕೈಗೊಳ್ಳದಿರುವ ಅಸಮಾಧಾನ ತಂದಿದೆ’ ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಈ.ಶೇಷಪ್ಪ.

ಡಣಾಯಕನಕೆರೆ ಏತನೀರಾವರಿಯ ಯೋಜನೆಯ ಪಂಪ್‍ಹೌಸ್‍ನ ವಿದ್ಯುತ್ ಪರಿವರ್ತಕವನ್ನು ಕೂಡಲೇ ಬದಲಾಯಿಸಿ, ಹೊಸ ಪರಿವರ್ತಕವನ್ನು ಅಳವಡಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ಶೀಘ್ರ ಕ್ರಮಕೈಗೊಳ್ಳಲಿದ್ದಾರೆ ಕೆ.ನೇಮರಾಜ ನಾಯ್ಕ, ಶಾಸಕ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-25-308913297

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ