ಪಾಕ್ ತ್ರಿಪಕ್ಷೀಯ ಸೇನಾ ಒಪ್ಪಂದ: ಭಾರತಕ್ಕೆ ರಾಜತಾಂತ್ರಿಕ ಸವಾಲು ಎದುರಾಗಲಿದೆಯೇ?

ಪಾಕ್ ತ್ರಿಪಕ್ಷೀಯ ಸೇನಾ ಒಪ್ಪಂದ: ಭಾರತಕ್ಕೆ ರಾಜತಾಂತ್ರಿಕ ಸವಾಲು ಎದುರಾಗಲಿದೆಯೇ?

ಪಾಕ್ ತ್ರಿಪಕ್ಷೀಯ ಸೇನಾ ಒಪ್ಪಂದ: ಭಾರತಕ್ಕೆ ರಾಜತಾಂತ್ರಿಕ ಸವಾಲು ಎದುರಾಗಲಿದೆಯೇ?

ನವದೆಹಲಿ: ಭವಿಷ್ಯದಲ್ಲಿ ಭಾರತದ ಯಾವುದೇ ಸೇನಾ ಕ್ರಮವನ್ನು ತಡೆಯಲು ಪಾಕಿಸ್ತಾನ ಮಾಸ್ಟರ್‌ ಪ್ಲಾನ್ ರೂಪಿಸಿದ್ದು ಇದಕ್ಕೆ ಟರ್ಕಿ ಮತ್ತು ಸೌದಿ ಅರೇಬಿಯಾ ದೇಶಗಳು ಸಾಥ್ ನೀಡಿವೆ.

ಮೂರು ದಿನಗಳ ಹಿಂದೆ ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾ ನಡುವೆ 'ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ' ಅಸ್ತಿತ್ವಕ್ಕೆ ಬಂದಿದೆ, ಭವಿಷ್ಯದಲ್ಲಿ ಉಪಖಂಡದಲ್ಲಿ ಸಶಸ್ತ್ರ ಸಂಘರ್ಷ ಸಂಭವಿಸಿದಾಗ ಮೂರು ದೇಶಗಳ ಪೈಕಿ ಯಾವುದೇ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೂ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಒಪ್ಪಂದದಲ್ಲಿ ಹೇಳಲಾಗಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಈ ಒಪ್ಪಂದ ‘ಸಂಪೂರ್ಣವಾಗಿ ಆತ್ಮರಕ್ಷಣೆಯ ಸ್ವರೂಪದ್ದು‘ ಎಂದು ಬಣ್ಣಿಸಿದ್ದಾರೆ. ಆದಗ್ಯಾ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ನಿಕಟ ಸಂಬಂಧವಿರುವಾಗ ಸೌದಿ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತಕ್ಕೆ ಅಸಮಾಧಾನ ತಂದಿದೆ.

ಭಾರತ ಮತ್ತು ಸೌದಿ ಅರೇಬಿಯಾ ನಡುವೆ ತೈಲ, ಭದ್ರತೆ, ಹೂಡಿಕೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಒಳಗೊಂಡ ಕಾರ್ಯತಂತ್ರದ ಸಹಭಾಗಿತ್ವವಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ಸುಮಾರು ₹3.5 ಲಕ್ಷ ಕೋಟಿ ಇದೆ. ಶೇ 14 ರಷ್ಟು ಕಚ್ಚಾ ತೈಲವನ್ನು ಸೌದಿ ಅರೇಬಿಯಾ ಭಾರತಕ್ಕೆ ಪೂರೈಕೆ ಮಾಡುತ್ತದೆ. 

ಇನ್ನೊಂದೆಡೆ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನಗಳು ಈ ಒಪ್ಪಂದಕ್ಕೂ ಮುನ್ನ ದ್ವಿಪಕ್ಷೀಯ ಭದ್ರತಾ ಒಪ್ಪಂದವನ್ನು ಜಾರಿಗೆ ತಂದಿದ್ದವು. ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳ ನಡುವೆ, ಪಾಕಿಸ್ತಾನ ಅಂದಾಜು 8,000 ಸೈನಿಕರು ಮತ್ತು ‘ಜೆಎಫ್-17 ಥಂಡರ್' ಮಾದರಿಯ 16 ಯುದ್ಧ ವಿಮಾನಗಳನ್ನು ಸೌದಿ ಅರೇಬಿಯಾಗೆ ಕಳುಹಿಸಿತ್ತು. ಕಳೆದ ವರ್ಷ ಎರಡು ಸ್ಕ್ವಾಡ್ರನ್ ಡ್ರೋನ್‌ಗಳು ಮತ್ತು ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಸೌದಿಗೆ ವರ್ಗಾಯಿಸಿತ್ತು. ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಸೌದಿ ಅರೇಬಿಯಾ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನ ಸೌದಿಗೆ ಸೇನಾ ನೆರವು ನೀಡಿತ್ತು.

ಸೌದಿ-ಪಾಕ್ ಸಂಬಂಧ ಹೊಸದೇನಲ್ಲ. ದಶಕಗಳಿಂದ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುತ್ತಿದೆ. 2018ರಿಂದ ಕೋಟ್ಯಂತರ ಡಾಲರ್ ಸಾಲ ಮತ್ತು ತೈಲ ಪಾವತಿ ವಿನಾಯಿತಿಗಳನ್ನು ನೀಡುತ್ತಾ ಬಂದಿದೆ. ಸೇನಾ ವಿಷಯದಲ್ಲೂ, 1965, 1971ರ ಯುದ್ಧಗಳು ಮತ್ತು 1999ರ ಕಾರ್ಗಿಲ್ ಸಂಘರ್ಷದ ವೇಳೆಯೂ ಸೌದಿ, ಪಾಕಿಸ್ತಾನಕ್ಕೆ ಧನಸಹಾಯ ಮತ್ತು ರಾಜತಾಂತ್ರಿಕ ಬೆಂಬಲ ನೀಡಿತ್ತು.

1960 ರಿಂದಲೂ ಪಾಕಿಸ್ತಾನದ ಪಡೆಗಳು ಸೌದಿ ಅರೇಬಿಯಾದ ಮಿಲಿಟರಿಯಲ್ಲಿ ಸಕ್ರಿಯವಾಗಿವೆ. 1991ರ ಗಲ್ಫ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ 13,000 ಸೈನಿಕರನ್ನು ಸೌದಿಯಲ್ಲಿ ನಿಯೋಜಿಸಲಾಗಿತ್ತು. ಅಲ್ಲದೆ, ಪಾಕಿಸ್ತಾನವು 8,000ಕ್ಕೂ ಹೆಚ್ಚು ಸೌದಿ ಸೈನಿಕರಿಗೆ ತರಬೇತಿ ನೀಡಿದೆ. 

ಶಸ್ತ್ರಾಸ್ತ್ರ ಆಮದಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಟರ್ಕಿ ನಡುವೆ ಸಂಬಂಧ ಇದೆ. ಅತ್ಯಾಧುನಿಕ ಡ್ರೋನ್‌ಗಳು, ಯುದ್ಧನೌಕೆಗಳು ಮತ್ತು ಎಫ್-16 ಯುದ್ಧ ವಿಮಾನಗಳ ಆಧುನಿಕೀಕರಣಕ್ಕೆ ಟರ್ಕಿಯಿಂದ ಪಾಕಿಸ್ತಾನ ನೆರವು ಪಡೆಯುತ್ತಿದೆ.

ಟರ್ಕಿಯ ಅತ್ಯಾಧುನಿಕ ಡ್ರೋನ್‌ಗಳನ್ನು ಪಾಕಿಸ್ತಾನ ಯಾವಾಗಲೂ ಖರೀದಿಸುತ್ತ ಬಂದಿದೆ. ಈ ಡ್ರೋನ್‌ಗಳನ್ನು ಸ್ಥಳೀಯವಾಗಿ ತಯಾರಿಸುವತ್ತ ಪಾಕ್‌ ಹೆಜ್ಜೆ ಇಟ್ಟಿದ್ದು ಇದಕ್ಕೆ ಟರ್ಕಿ ತಾಂತ್ರಿಕ ಸಹಾಯ ಮಾಡುತ್ತಿದೆ. ಅಲ್ಲದೇ, ಜೆಟ್ ವಿಮಾನಗಳ ನಿರ್ಮಾಣದಲ್ಲೂ ಪಾಕಿಸ್ತಾನ ಆಸಕ್ತಿ ತೋರಿಸಿದ್ದು ಇದಕ್ಕೂ ಟರ್ಕಿ ನೆರವು ನೀಡುತ್ತಿದೆ. 

ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಟರ್ಕಿಷ್ ಡ್ರೋನ್‌ಗಳನ್ನು ಬಳಸಿದ ನಂತರ, ಭಾರತವು ಟರ್ಕಿಯ ಮೇಲೆ ಹಲವು ನಿರ್ಬಂಧ ಹಾಕಿತ್ತು. ಆಜಿಯೊ ಮತ್ತು ಮಿಂತ್ರಾ ಇ–ಕಾಮರ್ಸ್‌ ಅಪ್ಲಿಕೇಶನ್‌ಗಳು ಟರ್ಕಿಷ್ ಬ್ರ್ಯಾಂಡ್‌ಗಳನ್ನು ತೆಗೆದುಹಾಕಿದ್ದವು. ನಂತರದ ದಿನಗಳಲ್ಲಿ ಭಾರತದಿಂದ ಟರ್ಕಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಶೇ 38 ರಷ್ಟು ಕುಸಿದಿತ್ತು.

ಭಾರತದ ಮುಂದಿರುವ ಹಾದಿ...

ಭಾರತ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಈ ಒಪ್ಪಂದವು ನ್ಯಾಟೊದ ಜಂಟಿ ರಕ್ಷಣಾ ವಿಧಿಯಂತೆಯೇ ಇದೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್ ಹೇಳಿರುವುದು ಭಾರತಕ್ಕೆ ಆತಂಕಕಾರಿ ವಿಷಯವಾಗಿದೆ.

ಸದ್ಯದ ಮಟ್ಟಿಗೆ, ಈ ಒಪ್ಪಂದವು ನಿರ್ದಿಷ್ಟ ಸೇನಾ ಕಮಾಂಡ್, ಜಂಟಿ ರಕ್ಷಣಾ ಕಾರ್ಯಾಚರಣೆಯ ಸ್ಪಷ್ಟ ನಿಯಮಾವಳಿಗಳನ್ನು ಹೊಂದಿಲ್ಲದಿರುವುದರಿಂದ ಇದು ನ್ಯಾಟೊ ಮಟ್ಟದ ಮೈತ್ರಿಕೂಟವಲ್ಲ ಎಂಬುದು ಭಾರತಕ್ಕೆ ಕೊಂಚ ಸಮಾಧಾನ ತಂದಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ