
ರಾಯಚೂರು: ಬಾವಿಯಲ್ಲಿ ಯುವತಿ ಶವ ಪತ್ತೆ; ಅತ್ಯಾಚಾರ, ಕೊಲೆ ಶಂಕೆ
ಸಿರವಾರ (ರಾಯಚೂರು ಜಿಲ್ಲೆ): ತಾಲ್ಲೂಕಿನ ಹೊಕ್ರಾಣಿಯ ಬಾವಿಯಲ್ಲಿ ಗುರುವಾರ ಇದೇ ಗ್ರಾಮದ ಅಶ್ವಿನಿ ತಿಮ್ಮಾರೆಡ್ಡಿ (22) ಶವ ಪತ್ತೆಯಾಗಿದೆ.
ದುಷ್ಕರ್ಮಿಗಳು ಯುವತಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿರುವ ಶಂಕೆ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪದವಿ ಮುಗಿಸಿದ್ದ ಅಶ್ವಿನಿಯ ನಿಶ್ಚಿತಾರ್ಥವಾಗಿತ್ತು. ಬುಧವಾರ ಸಂಜೆ ಬಯಲು ಶೌಚಕ್ಕೆ ಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.
ಕುಟುಂಬದವರು ಹುಡುಕಾಟ ನಡೆಸಿದಾಗ ಗುರುವಾರ ಬೆಳಿಗ್ಗೆ ಬಾವಿಯಲ್ಲಿ ಶವ ಪತ್ತೆಯಾಗಿದೆ. ಸಿರವಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.