ಕುಣಿಗಲ್ ಎಪಿಎಂಸಿ ವಾರದ ಸಂತೆಗೆ ಮಾತ್ರ ಮೀಸಲು, ಅಭಿವೃದ್ಧಿ ಇಲ್ಲ

ಕುಣಿಗಲ್ ಎಪಿಎಂಸಿ ವಾರದ ಸಂತೆಗೆ ಮಾತ್ರ ಮೀಸಲು, ಅಭಿವೃದ್ಧಿ ಇಲ್ಲ

ಕುಣಿಗಲ್ ಎಪಿಎಂಸಿ ವಾರದ ಸಂತೆಗೆ ಮಾತ್ರ ಮೀಸಲು, ಅಭಿವೃದ್ಧಿ ಇಲ್ಲ

ಕುಣಿಗಲ್: ಚುನಾಯಿತ ಜನಪ್ರತಿನಿಧಿಗಳ ಆಡಳಿತವಿಲ್ಲದ ಸಂಸ್ಥೆಯು ಅಭಿವೃದ್ಧಿ ಇಲ್ಲದೆ ಸೊರಗುತ್ತಿರುವುದಕ್ಕೆ 65 ವರ್ಷದ ಐತಿಹ್ಯ ಹೊಂದಿರುವ ಪಟ್ಟಣದ ಎಪಿಎಂಸಿ ನೈಜ ನಿದರ್ಶನವಾಗಿದೆ.

ಆರಂಭದಲ್ಲಿ ಪಟ್ಟಣದ ಕೋಟೆ ಪ್ರದೇಶದ ಗರೀಬ್ ನವಾಜ್ ಮಂಜೀಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಪಿಎಂಸಿಗೆ ಅಂದಾನಯ್ಯ, ಮಾಯಣ್ಣಗೌಡ ಶಾಸಕರಾಗಿದ್ದ ಸಮಯದಲ್ಲಿ (1982) 16 ಎಕರೆ ಜಾಗ ನೀಡಲಾಗಿತ್ತು. ಅಲ್ಲಿ ಕಚೇರಿ, ಮಾರುಕಟ್ಟೆ ಪ್ರಾಂಗಣ, ಗೋದಾಮು ಸೇರಿದಂತೆ ವರ್ತಕರ ಮಳಿಗೆಗಳು ಪ್ರಾರಂಭವಾದವು.

ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ವರ್ತಕರಿಲ್ಲದ ಕಾರಣ ಯಾವುದೇ ಚಟುವಟಿಕೆ ನಡೆಯದಿದ್ದರೂ, ಬುಧವಾರ ಮಾತ್ರ ತೆಂಗಿನಕಾಯಿ, ಬಾಳೆಕಾಯಿ ವಹಿವಾಟು ನಡೆದಿದೆ. ಶ್ರಾವಣದಲ್ಲೂ ತೆಂಗಿನಕಾಯಿ, ಬಾಳೆ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ತೆಂಗಿನಕಾಯಿ ಖರೀದಿಗಾಗಿ ಹೊರಜಿಲ್ಲೆ, ಹೊರರಾಜ್ಯದ ವ್ಯಾಪಾರಿಗಳು ಇಲ್ಲಿಗೆ ಬರುವುದು ರೈತರಿಗೆ ವರದಾನವಾಗಿದೆ.

ಹಲವು ವರ್ಷಗಳ ಹಿಂದೆ ಕುರಿ– ಮೇಕೆ ಸಂತೆ ಆರಂಭಿಸಲಾಗಿದೆ. ನಿರ್ವಹಣೆಯ ಹೊಣೆ ಹೊತ್ತವರು ನಿಭಾಯಿಸುತ್ತಿಲ್ಲ. ಆದರೂ ಪ್ರತಿ ಬುಧವಾರ ಸಂತೆ ಜೋರಾಗಿ ನಡೆದಿದೆ. ಸಮಿತಿ ಆಡಳಿತಕ್ಕೆ ಮಾತ್ರ ಒಂದು ರೂಪಾಯಿ ಆದಾಯ ದೊರಕದಾಗಿದೆ.

ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಮೂಲಸೌಕರ್ಯ ಮರೀಚಿಕೆಯಾಗಿದ್ದು, ಶೌಚಾಲಯಗಳ ನಿರ್ವಹಣೆ ಕೊರತೆಯಿಂದ ಸಮಸ್ಯೆ ಉಲ್ಭಣಿಸಿದೆ. ಆರಂಭದಲ್ಲೇ ಶುರುವಾಗಿದ್ದ ಕ್ಯಾಂಟೀನ್‌, ಹಾಪ್‌ಕಾಮ್ಸ್‌ ಇದೀಗ ಸ್ಥಗಿತಗೊಂಡಿವೆ. ಈ ಮಳಿಗೆಗಳು ಶಿಥಿಲಾವಸ್ಥೆಯಲ್ಲಿವೆ.

ಕ್ಯಾಂಟೀನ್‌ ಇಲ್ಲದಿರುವುದರಿಂದ ರಾಗಿ ಖರೀದಿ ಸಮಯದಲ್ಲಿ ಶಾಸಕ ಎಚ್‌.ಡಿ.ರಂಗನಾಥ್‌ ಮೂರು ವರ್ಷಗಳಿಂದಲೂ ರೈತರಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡುತ್ತಿದ್ದಾರೆ.

ಕೇಂದ್ರ– ರಾಜ್ಯ ಸರ್ಕಾರದ ನೀತಿಗಳಿಂದ ಎಪಿಎಂಸಿ ಶೋಚನೀಯ ಸ್ಥಿತಿಗೆ ತಲುಪಿದೆ. ಪ್ರಾಂಗಣದಲ್ಲಿ ಅವೈಜ್ಞಾನಿಕವಾಗಿ ಕುರಿ ಶೆಡ್ ನಿರ್ಮಿಸಲಾಗಿದೆ. ವೇಯ್‌ ಬ್ರಿಡ್ಜ್ ನಿರ್ಮಾಣಕ್ಕೆ ಅವಕಾಶವಿದ್ದರೂ, ನಿರ್ಮಿಸಿಲ್ಲ ಎನ್ನುತ್ತಾರೆ ಎಪಿಎಂಸಿ ಮಾಜಿ ನಿರ್ದೇಶಕ ರಂಗಣ್ಣಗೌಡ.

ಎಪಿಎಂಸಿಗೆ ಸೇರಿದ ಎರಡೂವರೆ ಎಕರೆ ಜಮೀನು ಅತಿಕ್ರಮಗೊಂಡಿದೆ. ತೆರವುಗೊಳಿಸುವ ಜೊತೆಗೆ ಹಳೆ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಮುಖ್ಯರಸ್ತೆ, ಬೇಗೂರು ರಸ್ತೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಮಳಿಗೆ ನಿರ್ಮಿಸಿ ಬಾಡಿಗೆಗೆ ನೀಡುವ ಮೂಲಕ ಆದಾಯ ಪಡೆದುಕೊಳ್ಳಬಹುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸಂತೆಪೇಟೆ ಸುರೇಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-17-255896469

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ