ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಮಳೆ ಕೊರತೆ

ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಮಳೆ ಕೊರತೆ

ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಮಳೆ ಕೊರತೆ

ಬೆಳಗಾವಿ: ‘ಬರ’ದ ಮಧ್ಯೆಯೂ, ಜಿಲ್ಲೆಯಲ್ಲಿ ಜುಲೈನಲ್ಲಿ ಸುರಿದ ಮಳೆ ರೈತರಲ್ಲಿ ತುಸು ಆಶಾಭಾವ ಮೂಡಿಸಿತ್ತು. ಇಳುವರಿ ಕಡಿಮೆಯಾದರೂ ಒಂದಿಷ್ಟು ಫಸಲು ಕೈಸೇರುವ ನಿರೀಕ್ಷೆ ಮೊಳಕೆಯೊಡೆದಿತ್ತು. ಆದರೆ, ಆಗಸ್ಟ್‌ನಲ್ಲಿ ಮತ್ತೆ ಕೈಕೊಟ್ಟ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿದೆ. ಖಾನಾಪುರ ಹೊರತುಪಡಿಸಿದರೆ, 14 ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದೆ.

ಸಪ್ತ ನದಿಗಳು ಹರಿದಿರುವ ಬೆಳಗಾವಿ ಜಿಲ್ಲೆಯಲ್ಲಿ ‘ಬರ’ದ ಕಾರ್ಮೋಡ ಕವಿದಿದೆ. 7.38 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಉದ್ದು, ಹೆಸರು, ಗೋವಿನಜೋಳ ಮತ್ತಿತರ ಬೆಳೆಗಳು ಮಳೆ ಇಲ್ಲದೆ ಕಮರುತ್ತಿವೆ. ಅತ್ತ ಮಳೆಯೂ ಇಲ್ಲ. ಇತ್ತ ಜಿಲ್ಲೆಯ ಯಾವೊಂದು ತಾಲ್ಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸದ್ದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.

ಈ ಮುಂಗಾರು ಹಂಗಾಮಿನಲ್ಲಿ(ಜೂನ್‌ 1ರಿಂದ ಈವರೆಗೆ) 46.5 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 41.4 ಸೆಂ.ಮೀ ಸುರಿದಿದೆ. ಶೇ 11ರಷ್ಟು ಮಳೆ ಕೊರತೆಯಾಗಿದೆ.

ಅದರಲ್ಲೂ ಜೂನ್‌ನಲ್ಲಿ 14.6 ಸೆಂ.ಮೀ ವಾಡಿಕೆ ಮಳೆ ಪೈಕಿ, 10.4 ಸೆಂ.ಮೀ ಮಾತ್ರ ಮಳೆಯಾಗಿತ್ತು. ಶೇ 29ರಷ್ಟು ಮಳೆ ಕೊರತೆಯಾಗಿ ಕೃಷಿಕರು ತೀರಾ ಸಂಕಷ್ಟದಲ್ಲಿ ಇದ್ದರು.

ಆದರೆ, ಜುಲೈನಲ್ಲಿ 19.1 ಸೆಂ.ಮೀ ವಾಡಿಕೆ ಮಳೆ ಪೈಕಿ, 21.3 ಸೆಂ.ಮೀ(ಶೇ 12ರಷ್ಟು ಹೆಚ್ಚು) ಮಳೆಯಾಗಿದ್ದರಿಂದ ತುಸು ನಿರಾಳವಾಗಿದ್ದರು. ಆದರೆ, ಆಗಸ್ಟ್‌ನಲ್ಲಿ ಮತ್ತೆ ಶೇ 24ರಷ್ಟು ಮಳೆ ಕೊರತೆಯಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈ ತಿಂಗಳ 1ರಿಂದ 27ರ ಅವಧಿಯಲ್ಲಿ 12.8 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 9.7 ಸೆಂ.ಮೀ ಮಾತ್ರ ಮಳೆ ಸುರಿದಿದೆ. ಖಾನಾಪುರ ತಾಲ್ಲೂಕಿನಲ್ಲಿ 39 ಸೆಂ.ಮೀ ಮಳೆ ಪೈಕಿ, 42.2 ಸೆಂ.ಮೀ(ಶೇ 8ರಷ್ಟು ಹೆಚ್ಚು) ಮಳೆಯಾಗಿದೆ. ಇದನ್ನು ಹೊರತುಪಡಿಸಿ, ಎಲ್ಲ ತಾಲ್ಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ.

ಎಲ್ಲೆಲ್ಲಿ ಎಷ್ಟು ಕೊರತೆ?

ಆಗಸ್ಟ್‌ನಲ್ಲಿ ಅಥಣಿಯಲ್ಲಿ ಶೇ 50, ಬೈಲಹೊಂಗಲದಲ್ಲಿ ಶೇ 58, ಬೆಳಗಾವಿಯಲ್ಲಿ ಶೇ 46, ಚಿಕ್ಕೋಡಿಯಲ್ಲಿ ಶೇ 47, ಗೋಕಾಕದಲ್ಲಿ ಶೇ 46, ಹುಕ್ಕೇರಿಯಲ್ಲಿ ಶೇ 13, ರಾಮದುರ್ಗದಲ್ಲಿ ಶೇ 46, ರಾಯಬಾಗದಲ್ಲಿ ಶೇ 35, ಸವದತ್ತಿಯಲ್ಲಿ ಶೇ 33, ಚನ್ನಮ್ಮನ ಕಿತ್ತೂರಿನಲ್ಲಿ ಶೇ 49, ನಿಪ್ಪಾಣಿಯಲ್ಲಿ ಶೇ 43, ಕಾಗವಾಡದಲ್ಲಿ ಶೇ 32, ಮೂಡಲಗಿಯಲ್ಲಿ ಶೇ 43, ಯರಗಟ್ಟಿಯಲ್ಲಿ ಶೇ 50ರಷ್ಟು ಮಳೆ ಕೊರತೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-21-2682313

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ