ಯಲಬುರ್ಗಾ ತಾಲ್ಲೂಕು ನಿರ್ಲಕ್ಷ್ಯ, ರೈತರ ಆಕ್ರೋಶ

ಯಲಬುರ್ಗಾ ತಾಲ್ಲೂಕು ನಿರ್ಲಕ್ಷ್ಯ, ರೈತರ ಆಕ್ರೋಶ

ಯಲಬುರ್ಗಾ ತಾಲ್ಲೂಕು ನಿರ್ಲಕ್ಷ್ಯ, ರೈತರ ಆಕ್ರೋಶ

ಯಲಬುರ್ಗಾ: ರಾಜ್ಯ ಸರ್ಕಾರವು ಬರಪೀಡಿತ ತಾಲ್ಲೂಕುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಕನೂರು ತಾಲ್ಲೂಕನ್ನು ಆಯ್ಕೆ ಮಾಡಿ, ಯಲಬುರ್ಗಾ ತಾಲ್ಲೂಕನ್ನು ನಿರ್ಲಕ್ಷಿಸಲಾಗಿದೆ. ಇದು ತಾಲ್ಲೂಕಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಅನೇಕ ರೈತ ಮುಖಂಡರು ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನಿಡಿದ್ದಾರೆ.

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ತೇವಾಂಶದ ಕೊರತೆ ಉಂಟಾಗಿತ್ತು. ಉತ್ತಮ ಮಳೆ ಬೀಳಬಹುದೆಂಬ ಆಶಾಭಾವನೆಯಿಂದ ರೈತರು ತಮ್ಮ ಜಮೀನಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯಕೈಗೊಂಡಿದ್ದರು. ಮಳೆಯ ನಿರೀಕ್ಷೆಯಲ್ಲಿ ಶೇ 70ಕ್ಕೂ ಅಧಿಕ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದರು. ಮಳೆಯ ಅಭಾವದಿಂದಾಗಿ ಶೇ 30ರಷ್ಟು ರೈತರು ಬಿತ್ತನೆ ಮಾಡಿರಲಿಲ್ಲ. ಅಂದರೆ ಒಟ್ಟು 70,952 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ತೇವಾಂಶದ ಕೊರತೆಯ ಕಾರಣದಿಂದ 49,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗದೇ ಉಳಿದಿತ್ತು. ಜೂನ್-ಜುಲೈನಲ್ಲಿ 182 ಎಂಎಂ ಆಗಬೇಕಾಗಿದ್ದ ಮಳೆ ಕೇವಲ 122 ಎಂಎಂ ಮಾತ್ರ ಸುರಿದಿದೆ. ಈ ಕೊರತೆಯೇ ತಾಲ್ಲೂಕಿನ ಬರದ ಛಾಯೆ ಮೂಡುವಂತೆ ಮಾಡಿತ್ತು. ಈ ಬಗ್ಗೆ ಕೃಷಿ ಇಲಾಖೆ ಹಾಗೂ ಸರ್ಕಾರದ ಬರ ವೀಕ್ಷಣಾ ತಂಡದ ಸಮೀಕ್ಷಾ ವರದಿಯಲ್ಲಿಯೂ ಬರಪೀಡಿತ ಪ್ರದೇಶ ಎಂದು ಘೋಷಣೆಗೆ ಇರಬೇಕಾದ ಎಲ್ಲ ಅಂಶಗಳು ಕಾಣಿಸಿಕೊಂಡಿದ್ದರೂ ಘೋಷಿಸದೇ ಕೈಬಿಟ್ಟಿದ್ದು ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನ ಹಾಗೂ ರೈತರ ಮೇಲೆ ಕಾಳಜಿ ಇಲ್ಲದಿರುವುದು ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಯಲಬುರ್ಗಾ ತಾಲ್ಲೂಕಿನಲ್ಲಿ ಶೇ 32.5ರಷ್ಟು ಮಳೆಯ ಕೊರತೆಯಿಂದಾಗಿಯೇ ಉತ್ತಮ ಬೆಳೆ ಬಂದಿಲ್ಲ. ಬೆಳೆಗಳು ಗೇಣುದ್ದ ಇರುವಾಗಲೇ ಒಣಗಿವೆ. ಈ ಬಗ್ಗೆ ಕೈಗೊಂಡಿರುವ ವೈಜ್ಞಾನಿಕ ಸಮೀಕ್ಷೆಯಿಂದ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸ್ಯಾಟ್‍ಲೈಟ್ ಆಧಾರಿತ ಸಮೀಕ್ಷೆಯಲ್ಲಿ ಪ್ರತಿಯೊಂದು ಬೆಳೆಯ ಸ್ವರೂಪ, ಮಣ್ಣಿನ ತೇವಾಂಶದ ಪ್ರಮಾಣ, ಪ್ರದೇಶದಲ್ಲಿನ ಕೆರೆ, ಹಳ್ಳ ಹಾಗೂ ಇನ್ನಿತರ ನೀರಿನ ಮೂಲದ ಅಂಶಗಳನ್ನು ಕೂಡಾ ವಿವಿಧ ಹಂತದಲ್ಲಿ ಪರಿಶೀಲನೆ ಮಾಡಿಯೇ ವರದಿ ತಯಾರಿಸಲಾಗಿದೆ. ಮೊದಲ ಹಂತದಲ್ಲಿಯೇ ಘೋಷಣೆಯಾಗಬೇಕಿತ್ತು. 2ನೇ ಹಂತದಲ್ಲಿ ಯಲಬುರ್ಗಾ ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.

ಸಾಲ ಮಾಡಿ, ಬಿತ್ತನೆ ಕಾರ್ಯಕೈಗೊಂಡಿದ್ದ ರೈತರಿಗೆ ಎರಡು ರೀತಿಯಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಸಾಲ ಮಾಡಿ, ಬೀಜ ಗೊಬ್ಬರ ಖರೀದಿಸಿದ್ದು ಹಾಗೂ ಕೃಷಿ ಚಟುವಟಿಕೆಗಾಗಿ ಮಾಡಿದ್ದ ಖರ್ಚು ಮತ್ತು ಬೆಳೆ ಒಣಗಿ ನಾಶವಾಗಿದೆ. ಹೀಗೆ ತಾಲ್ಲೂಕಿನ ರೈತರ ಬವಣೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಾಣಿಸದೇ ಹೋಗಿದ್ದು, ನೋವಿನ ಸಂಗತಿಯಾಗಿದೆ ಎಂದು ರೈತ ಮುಖಂಡ ಶರಣಪ್ಪ ದಾನಕೈ, ಸಮಾಜಿಕ ಕಾರ್ಯಕರ್ತರ ಬಸವರಾಜ ಬೊಮ್ಮನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-35-1096571817

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ