ಹೊಳಲ್ಕೇರೆ: ಚಿಕ್ಕನಕಟ್ಟೆ ಸಮೀಪವಿದೆ ರಾಘವೇಂದ್ರ ಸ್ವಾಮಿ ಬೃಂದಾವನ

ಹೊಳಲ್ಕೇರೆ: ಚಿಕ್ಕನಕಟ್ಟೆ ಸಮೀಪವಿದೆ ರಾಘವೇಂದ್ರ ಸ್ವಾಮಿ ಬೃಂದಾವನ

ಹೊಳಲ್ಕೇರೆ: ಚಿಕ್ಕನಕಟ್ಟೆ ಸಮೀಪವಿದೆ ರಾಘವೇಂದ್ರ ಸ್ವಾಮಿ ಬೃಂದಾವನ

ಹೊಳಲ್ಕೇರೆ: ತಾಲ್ಲೂಕಿನ ಚಿಕ್ಕನಕಟ್ಟೆ ಸಮೀಪ ಇರುವ ರಾಘವೇಂದ್ರ ಸ್ವಾಮಿಯ ಪುಟ್ಟ ಬೃಂದಾವನ ಸ್ಥಳೀಯರ ಅಚ್ಚುಮೆಚ್ಚಿನ ತಾಣವಾಗಿದೆ. ಚಿಕ್ಕನಕಟ್ಟೆ ಸಮೀಪ ಮೂರು ಹಳ್ಳಗಳು ಸೇರಿ ತ್ರಿವೇಣಿ ಸಂಗಮ ಇದ್ದು, ದಡದಲ್ಲಿ ಸಂಗಮೇಶ್ವರ ದೇವಸ್ಥಾನ ಇದೆ.

ಮಲ್ಲಾಡಿಹಳ್ಳಿ ಕಡೆಯಿಂದ ಬರುವ ಹಿರೇಹಳ್ಳ ಹರಿದ್ರಾವತಿ, ಶಿವಪುರ ಕಡೆಯಿಂದ ಬರುವ ಮಾಗಡಿಹಳ್ಳ ಹಾಗೂ ಮತ್ತೊಂದು ಇಲ್ಲೇ ಹತ್ತಿರದಿಂದ ಹರಿಯುವ ಒಂದು ಸಣ್ಣ ಹಳ್ಳಗಳ ಸಂಗಮವಾಗುವ ಈ ಪವಿತ್ರ ಸ್ಥಳದ ಹತ್ತಿರದಲ್ಲೇ ರಾಘವೇಂದ್ರ ಸ್ವಾಮಿ ಬೃಂದಾವನ ನಿರ್ಮಿಸಲಾಗಿದೆ. ತಾಲ್ಲೂಕಿನಲ್ಲಿ ಇರುವ ರಾಘವೇಂದ್ರ ಸ್ವಾಮಿಯ ಏಕೈಕ ಬೃಂದಾವನ ಇದು.

‌ಎಲ್ಲಾ ಊರಿನ ದೇವರುಗಳನ್ನು ಈ ಹಳ್ಳದಲ್ಲಿ ಪ್ರತಿವರ್ಷ ಗಂಗಾ ಪೂಜೆಗೆ ಹಾಗೂ ಹೊಳೆ ಪೂಜೆಗೆ ಕರೆದುಕೊಂಡು ಬರುತ್ತಾರೆ. ಇದೊಂದು ಪವಿತ್ರ ಜಾಗ. ಇಲ್ಲಿ ದೇವಾಲಯ ನಿರ್ಮಿಸಲು ಸೂಕ್ತಸ್ಥಳ ಎಂದು ತೀರ್ಮಾನಿಸಿ ಬೃಂದಾವನ ನಿರ್ಮಿಸಲಾಯಿತು. ಬೃಂದಾವನ ನಿರ್ಮಾಣಕ್ಕೆ ಮೈಸೂರಿನಿಂದ ಶಿಲೆಗಳನ್ನು ತಂದು ಜೋಡಿಸಲಾಗಿದೆ. ರಾಘವೇಂದ್ರ ಸ್ವಾಮಿಗಳಿಗೆ ಅಪಾರ ಭಕ್ತರಿದ್ದು, ನಿತ್ಯವೂ ಇಲ್ಲಿಗೆ ಬಂದು ಹೋಗುತ್ತಾರೆ. ಚಿಕ್ಕನಕಟ್ಟೆ ಗ್ರಾಮಸ್ಥರು ಕೂಡ ರಾಘವೇಂದ್ರ ಸ್ವಾಮಿಗೆ ನಡೆದುಕೊಳ್ಳುತ್ತಾರೆ. ಎಲ್ಲಾ ಮನೆಗಳಲ್ಲೂ ಅವರ ಫೋಟೋ ಕಡ್ಡಾಯವಾಗಿ ಪೂಜಿಸಲ್ಪಡುತ್ತದೆ.

ಇಲ್ಲಿರುವ ಸಂಗಮನಾಥೇಶ್ವರ ದೇವಾಲಯವನ್ನು 2014ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಅದೇ ಸಮಯಕ್ಕೆ ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ನಿರ್ಮಿಸಲಾಯಿತು. ಮೊದಲು ಚಿಕ್ಕಗಂಗೂರಿನ ಒಂದು ಮನೆಯಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರು ಫೋಟೋ ಇಟ್ಟು ಪೂಜಿಸುತ್ತಿದ್ದರು. ರಾಘವೇಂದ್ರ ಸ್ವಾಮಿಗಳ ಈ ಬೃಂದಾವನವನ್ನು ಚನ್ನಗಿರಿ ತಾಲ್ಲೂಕಿನ ಚಿಕ್ಕಗಂಗೂರಿನ ಗ್ರಾಮಸ್ಥರು ಹಾಗೂ ಸ್ಥಳೀಯ ಭಕ್ತಾದಿಗಳು ಎಲ್ಲರೂ ಸೇರಿಕೊಂಡು ಮಾಡಿದ್ದಾರೆ. ಚಿಕ್ಕ ಗಂಗೂರು ಈ ಸ್ಥಳದ ದಕ್ಷಿಣಕ್ಕೆ 2 ಕಿ.ಮೀ.ದೂರದಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಇಲ್ಲಿಗೆ ಬಂದು ಕೆಲಸ ನಿರ್ವಹಿಸಿದ ಆಯುರ್ವೇದ ವೈದ್ಯ ಬ್ಯಾರಿ ಸಮುದಾಯದ ಮಹಮ್ಮದ್ ಎನ್ನುವರು 22 ವರ್ಷ ರಾಘವೇಂದ್ರ ಸ್ವಾಮಿಗಳ ಸೇವೆ ಸಲ್ಲಿಸಿದ್ದರು. ಅವರು 2022 ರಲ್ಲಿ ನಿಧನರಾದರು. 2014ರಲ್ಲಿ ಅವರು ಇಲ್ಲಿಂದ ಹೋಗುವ ಸಮಯಕ್ಕೆ ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಕೆಲಸವನ್ನು ಮುಂದುವರೆಸುವ ಕೆಲಸವನ್ನು ಚಂದ್ರಪ್ಪ ಎನ್ನುವ ಸ್ಥಳೀಯ ಭಕ್ತರಿಗೆ ವಹಿಸಿದರು. ಚಿಕ್ಕ ಗಂಗೂರು ಗ್ರಾಮದಿಂದ ಪೂರ್ವಕ್ಕೆ ಇದ್ದ ಸಂಗಮನಾಥೇಶ್ವರ ದೇವಾಲಯದ ಖರಾಬು ಜಮೀನಿನಲ್ಲಿ ಬೃಂದಾವನ ನಿರ್ಮಿಸಲು ತೀರ್ಮಾನಿಸಿ ಅಲ್ಲಿ ಎಲ್ಲಾ ಜನರ ಸಹಕಾರದಿಂದ ಬೃಂದಾವನ ನಿರ್ಮಿಸಲಾಯಿತು.

ಅವರ ನಂತರ ಈ ಬೃಂದಾವನದ ಪೂಜೆ ನಡೆಸಿಕೊಂಡು ಹೋಗುತ್ತಿದ್ದ ಚಂದ್ರಪ್ಪ ಎಂಬುವರು ಕೂಡ ಒಂದು ವರ್ಷದ ಹಿಂದೆ ತೀರಿ ಹೋದರು. ಈಗ ಅವರ ತಮ್ಮನಾದ ಉಮಾಶಂಕರ್ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಯಾವುದೇ ಆದಾಯ ಮೂಲಗಳಿಲ್ಲ. ಭಕ್ತರು ಕೊಡುವ ದೇಣಿಗೆ ದುಡ್ಡಿನಿಂದಲೇ ಎಲ್ಲವೂ ನಡೆಸಬೇಕಾಗಿದೆ. ಅಮಾವಾಸ್ಯೆ ದಿನ ಹಾಗೂ ಪೌರ್ಣಿಮಿ ದಿನ ಇಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಬಯಸುವವರಿಗೆ ಪೂಜಾರಿ ಉಮಾ ಶಂಕರ್ ಅವರ ಮೊಬೈಲ್-8970037815.

‘ತಾಲ್ಲೂಕಿನಲ್ಲಿ ಇರುವ ಈ ಏಕೈಕ ರಾಘವೇಂದ್ರ ಸ್ವಾಮಿ ಮಠವನ್ನು ಎಲ್ಲರೂ ಸೇರಿ ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಭಕ್ತರ ಸಹಕಾರ ಅಗತ್ಯ’ ಎಂದು ದಂತವೈದ್ಯ ಡಾ.ಕೆ.ವಿ.ಸಂತೋಷ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-44-549039728

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ