ಬರ ಎದುರಿಸಲು ಸರ್ಕಾರ ಸಮರ್ಥ: ಸಚಿವ ಈಶ್ವರ ಖಂಡ್ರೆ

ಬರ ಎದುರಿಸಲು ಸರ್ಕಾರ ಸಮರ್ಥ: ಸಚಿವ ಈಶ್ವರ ಖಂಡ್ರೆ

ಬರ ಎದುರಿಸಲು ಸರ್ಕಾರ ಸಮರ್ಥ: ಸಚಿವ ಈಶ್ವರ ಖಂಡ್ರೆ

ಬೀದರ್: ಬರ ಎದುರಿಸಲು ಸರ್ಕಾರ ಸಮರ್ಥವಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸರ್ಕಾರ ಜನರೊಂದಿಗೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ತಾಲ್ಲೂಕಿನ ಅಷ್ಟೂರ್, ಚೊಂಡಿ ಗ್ರಾಮಗಳ ರೈತರ ಹೊಲಗಳಲ್ಲಿ ಮಂಗಳವಾರ ಬೆಳೆ ಪರಿಶೀಲಿಸಿ ಮಾತನಾಡಿದರು. ಅಷ್ಟೂರ್ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿದರು.

ಗುಳೆ ತಡೆಗೆ ಸರ್ಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಯಾರೂ ಗುಳೆ ಹೋಗಬಾರದು. ವಿಬಿ ಜಿ ರಾಮ್ ಜಿ ಯಲ್ಲಿ ಈಗಾಗಲೇ ಕೆಲಸ ನೀಡಲಾಗುತ್ತಿದೆ. ಬೀದರ್ ಜಿಲ್ಲೆಯೊಂದರಲ್ಲಿಯೇ 30 ಸಾವಿರ ಜನರಿಗೆ ಕೆಲಸ ಕೊಡಲಾಗಿದೆ. ಈಗಾಗಲೇ ರಾಜ್ಯಕ್ಕೆ ₹48 ಕೋಟಿ ಅನುದಾನವೂ ಬಿಡುಗಡೆ ಮಾಡಲಾಗಿದೆ. ತಂತ್ರಾಂಶದಲ್ಲಿ ಸಣ್ಣಪುಟ್ಟ ದೋಷ ಕಂಡು ಬಂದಿದ್ದು, ಸರಿಪಡಿಸಿ, ಕಾರ್ಮಿಕರಿಗೆ ಕೂಲಿ ಪಾವತಿಸಲು ಸೂಚನೆ ಕೊಡಲಾಗಿದೆ ಎಂದು ಹೇಳಿದರು.

ಈ ಹಿಂದೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿತ್ತು. ಆಗ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ನಿಯಮಗಳಿಗಿಂತ ಎರಡು ಪಟ್ಟು ಅಧಿಕ ಪರಿಹಾರ ವಿತರಿಸಲಾಗಿದೆ. ಈಗಲೂ ಅಗತ್ಯ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮುಖ್ಯಮಂತ್ರಿಯವರು ಬರಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಿದ್ದಾರೆ. ಈ ತಿಂಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಅಧಿವೇಶನದಲ್ಲಿ ಕೂಡ ಚರ್ಚಿಸಲಾಗುವುದು ಎಂದರು.

ಬರಕ್ಕೆ ಸಂಬಂಧಿಸಿದಂತೆ ನಾನು ಕೂಡ ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದೇನೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚನೆ ಕೊಟ್ಟಿರುವೆ. ಪುನಃ ಜಿಲ್ಲೆಯ ಸಮಸ್ಯೆ ಅರಿತುಕೊಳ್ಳಲು ಬಂದಿದ್ದೇನೆ ಎಂದು ತಿಳಿಸಿದರು.

ಬೀದರ್ ಜಿಲ್ಲೆಯಲ್ಲಿ ಕೆಲವು ಕಡೆ ಶೇ 30ರಷ್ಟು, ಮತ್ತೆ ಕೆಲವೆಡೆಗಳಲ್ಲಿ ಶೇ 50ರಷ್ಟು ಕೊರತೆ ಮಳೆಯಾಗಿದೆ. ಸಕಾಲಕ್ಕೆ ಮಳೆ ಬಾರದ ಕಾರಣ ಶೇ 95ರಷ್ಟು ಉದ್ದು,‌ಹೆಸರು ಹಾಳಾಗಿದೆ. ಈಗ ಮಳೆ ಬರುತ್ತಿದ್ದು, ಪರಿಸ್ಥಿತಿ ಸರಿಹೋಗುವ ಆಶಾಭಾವನೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಮನಾಬಾದ್ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳು ವಿಷಪೂರಿತ ತ್ಯಾಜ್ಯವನ್ನು ಮಾಂಜ್ರಾ ಹಾಗೂ ಕಾರಂಜಾ ನದಿಗೆ ಹರಿಸುತ್ತಿದ್ದು, ಇದು ಜನರಿಗೆ ಮಾರಕ. ಇಂಥಹ ಕಾರ್ಖಾನೆಗಳನ್ನು ಮುಚ್ಚಿಸಲು ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ. ಇದರ ಬಗ್ಗೆ ಸಮಗ್ರ ತನಿಖೆಗೂ ಸೂಚನೆ ಕೊಟ್ಟಿರುವೆ ಎಂದು ತಿಳಿಸಿದರು.

ಶಾಸಕ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ್ ಬದೋಲೆ, ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಪಿಡಬ್ಲ್ಯೂಡಿ ಇಇ ಶಿವಶಂಕರ್ ಕಾಮಶೆಟ್ಡಿ, ತಹಸೀಲ್ದಾರ್ ರವೀಂದ್ರ ದಾಮಾ, ತಾಪಂ ಇಒ ಮಾಣಿಕರಾವ್ ಪಾಟೀಲ್ ಮತ್ತಿತರರು ಹಾಜರಿದ್ದರು.

ಬಿಡದಿ ಹೋರಾಟ ರಾಜಕೀಯ ಪ್ರೇರಿತವಾದುದು. ಬಿಡದಿ, ನೈಸ್ ಯೋಜನೆ ಮಾಡಿದ್ದು ಇವರೇ. ಈಗ ಆ ಭಾಗದ ರೈತರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಯೋಜನೆ ಕಾರ್ಯಗೊತಗೊಳಿಸುತ್ತಿದೆ. ವಿರೋಧ ಪಕ್ಷದವರಾಗಿ ವಿರೋಧ ಮಾಡಲಿ ಬಿಡಿ ಎಂದು‌ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ