ಯಾದಗಿರಿ | ರಿಯಾಯಿತಿ ದಂಡ ಪಾವತಿಗೆ ನಿರಾಸಕ್ತಿ

ಯಾದಗಿರಿ | ರಿಯಾಯಿತಿ ದಂಡ ಪಾವತಿಗೆ ನಿರಾಸಕ್ತಿ

ಯಾದಗಿರಿ | ರಿಯಾಯಿತಿ ದಂಡ ಪಾವತಿಗೆ ನಿರಾಸಕ್ತಿ

ಯಾದಗಿರಿ: ವಾಹನಗಳ ಮಾಲೀಕರು, ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಪ್ರಕರಣಗಳಿಗೆ ಪೊಲೀಸ್ ಇಲಾಖೆ ಈಚೆಗೆ ಪ್ರಕಟಿಸಿದ್ದ ಶೇ 50ರಷ್ಟು ರಿಯಾಯಿತಿ ಅಡಿ ದಂಡ ಪಾವತಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಚಾರಿ ಇ–ಚಲನ್‌ ಮೂಲಕ ದಾಖಲಾದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿನ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿ, ಪಾವತಿಯಾಗದೆ ಬಾಕಿ ಇರುವ ಪ್ರಕರಣಗಳ ದಂಡದಮೊತ್ತದಲ್ಲಿ ಶೇ 50ರಷ್ಟು ರಿಯಾಯಿ ಕೊಡಲಾಗಿತ್ತು. ಜೂನ್‌ 21ರಿಂದ ಜುಲೈ 10ರವರೆಗೆ ದಂಡ ಪಾವತಿಗೆ ಸಮಯವೂ ಕೊಡಲಾಗಿತ್ತು.

20 ದಿನಗಳ ಅವಧಿಯಲ್ಲಿ ₹1.23 ಲಕ್ಷ ದಂಡವಷ್ಟೇ ಪಾವತಿಯಾಗಿದೆ. ಒಟ್ಟಾರೆ ದಂಡದ ಮೊತ್ತಕ್ಕೆ ಹೋಲಿಸಿದರೆ ಇದು ತೀರ ಕಡಿಮೆಯೇ ಇದೆ.

ಯಾದಗಿರಿ ನಗರದಲ್ಲಿ 12,119 ಇ–ಚಲನ್ ಪ್ರಕರಣಗಳನ್ನು ದಾಖಲಿಸಿ, ₹67.91 ಲಕ್ಷ ದಂಡ ಹಾಕಲಾಗಿತ್ತು. ರಿಯಾಯಿತಿಗೂ ಮುನ್ನ 1,166 ಪ್ರಕರಣಗಳಿಂದ ₹6.40 ಲಕ್ಷ ದಂಡ ವಸೂಲಿ ಮಾಡಲಾಗಿತ್ತು. ಉಳಿದ 10,953 ಪ್ರಕರಣಗಳಿಂದ ₹ 61.51 ಲಕ್ಷ ವಸೂಲಿ ಆಗಬೇಕಿತ್ತು. ಈ ಪೈಕಿ ಆಫ್‌ಲೈನ್‌ನಲ್ಲಿ 323 ಪ್ರಕರಣಗಳಿಂದ ₹ 91,500 ವಸೂಲಿಯಾಗಿದೆ.

ಆನ್‌ಲೈನ್ ಮೂಲಕ 112 ಪ್ರಕರಣಗಳಿಂದ ₹ 32 ಸಾವಿರ ದಂಡ ವಸೂಲಿಯಾಗಿದೆ. ರಿಯಾಯಿತಿ ಅವಧಿಯಲ್ಲಿ ಒಟ್ಟು 435 ಪ್ರಕರಣಗಳಿಂದ ₹1.23 ಲಕ್ಷ ದಂಡ ಸಂಗ್ರಹಿಸಲಾಗಿದೆ. ಇನ್ನೂ ₹60.91 ಲಕ್ಷ ದಂಡ ವಸೂಲಿಯಾಗದೆ ಉಳಿದಿದೆ.

ರಿಯಾಯಿತಿ ದಂಡ ಕಟ್ಟಿಸಿಕೊಳ್ಳಲು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಟ್ರಾಫಿಕ್ ಸಿಬ್ಬಂದಿಗೆ ಪಿಡಿಎ ಯಂತ್ರ ಕೊಟ್ಟು ಆನ್‌ಲೈನ್ ಪಾವತಿಗೂ ಅವಕಾಶ ನೀಡಲಾಗಿತ್ತು. ಆದರೂ ವಾಹನ ಚಾಲಕ ಹಾಗೂ ಮಾಲೀಕರು ದಂಡದ ರಿಯಾಯಿತಿಗೆ ನಿರಾಸಕ್ತಿ ತೋರಿದ್ದಾರೆ.

ನಗರದಲ್ಲಿ ಸಿಗ್ನಲ್ ಜಂಪ್, ತ್ರಿಬಲ್ ರೈಡ್, ಒನ್‌ ವೇ ಬಳಕೆ, ಅತಿ ವೇಗವಾಗಿ ವಾಹನ ಚಾಲನೆ, ರಸ್ತೆ ಬದಿಯಲ್ಲೇ ವಾಹನ ನಿಲುಗಡೆ, ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ, ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ ಮಾಡಿದವರ ಮೇಲೆ ದಂಡ ಹಾಕಲಾಗಿತ್ತು.

ದ್ವಿಚಕ್ರ ವಾಹನದಲ್ಲಿ ಮೂವರ ಸವಾರಿ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಸುರಕ್ಷತಾ ಬೆಲ್ಟ್‌ ಧರಿಸದೆ ವಾಹನ ಚಾಲನೆ, ನಿಗದಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವುದು ಸೇರಿದಂತೆ ಮತ್ತಿತ್ತರೆ ನಿಯಮಗಳನ್ನು ಉಲ್ಲಂಘಿಸಿದ್ದವರ ಮೇಲೂ ದಂಡ ಬಿದಿತ್ತು.

ನಿಯಮ ಉಲ್ಲಂಘನೆ ಅವ್ಯಾಹತ

ನಗರದ ಹಲವೆಡೆಯ ರಸ್ತೆ ಬದಿ, ಮಾರುಕಟ್ಟೆ, ಪಾದಚಾರಿ ಮಾರ್ಗ, ವಾಹನ ನಿಲುಗಡೆ ನಿಷೇಧ ಫಲಕದ ಬಳಿಯೇ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿ ಮಾಡಿ ಸಂಚಾರ ನಿಯಮ ಉಲ್ಲಂಘಿಸುವುದು ಅವ್ಯಾಹತವಾಗಿದೆ.‌

ನೇತಾಜಿ ವೃತ್ತ, ಚಿತ್ತಾಪುರ ರಸ್ತೆ, ರೈಲ್ವೆ ಸ್ಟೇಷನ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಗಾಂಧಿ ವೃತ್ತ, ಹತ್ತಿಕುಣಿ ಕ್ರಾಸ್ ರಸ್ತೆ, ಗಂಜ್ ವೃತ್ತದ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ವಾಹನಗಳನ್ನು ರಸ್ತೆ ಭಾಗದಲ್ಲೇ ನಿಲ್ಲಿಸುತ್ತಾರೆ. ಈ ರಸ್ತೆಗಳಲ್ಲಿ ಓಡಾಡಲು ಜನರು ಪಡಿಪಾಟಲು ಪಡುವಂತೆ ಇದೆ ಎನ್ನುತ್ತಾರೆ ಪಾದಚಾರಿಗಳು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ