ನಾಲ್ಕು ಭಾಷೆಗಳಲ್ಲಿ ವೀಕ್ಷಿಸಬಹುದು ಸುತನ್ ಗೌಡ ನಿರ್ದೇಶನದ ‘ವಲವಾರ’ ಸಿನಿಮಾ

ನಾಲ್ಕು ಭಾಷೆಗಳಲ್ಲಿ ವೀಕ್ಷಿಸಬಹುದು ಸುತನ್ ಗೌಡ ನಿರ್ದೇಶನದ ‘ವಲವಾರ’ ಸಿನಿಮಾ

ನಾಲ್ಕು ಭಾಷೆಗಳಲ್ಲಿ ವೀಕ್ಷಿಸಬಹುದು ಸುತನ್ ಗೌಡ ನಿರ್ದೇಶನದ ‘ವಲವಾರ’ ಸಿನಿಮಾ

ಸುತನ್ ಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ವಲವಾರ’ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

‘ವಲವಾರ’ ಸಿನಿಮಾ ಮಾರ್ಚ್ 20ರಂದು ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿತು. ಮೊದಲ ಬಾರಿಗೆ ವಲವಾರ ಸಿನಿಮಾ ಸನ್ ನೆಕ್ಸ್ಟ್‌ನಲ್ಲಿ ಪ್ರಸಾರ ಕಂಡಿತು. ನಂತರ ಜೂನ್ 5ರಂದು ZEE5ನಲ್ಲಿ ಕನ್ನಡದಲ್ಲಿ ಮಾತ್ರ ಪ್ರಸಾರಗೊಂಡ ಈ ಸಿನಿಮಾ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಿದೆ.

ಇದರ ಜೊತೆಗೆ ಈಗ ಯೂಟ್ಯೂಬ್‌ನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ‘ವಲವಾರ’ ಸಿನಿಮಾವನ್ನು ನೋಡಬಹುದು.

ಮಲೆನಾಡಿನ ಒಂದು ಹಳ್ಳಿ. ಅಲ್ಲೊಂದು ಬಡ ಕುಟುಂಬ. ‘ಕುಂಡೇಸಿ’(ವೇದಿಕ್‌) ಮತ್ತು ‘ಕೋಸುಡಿ’(ಶಯನ್‌) ಎಂಬ ಅಡ್ಡಹೆಸರು ಇರುವ ಅಣ್ಣತಮ್ಮಂದಿರು. ಇವರ ಅಪ್ಪ (ಮಾಲತೇಶ್‌) ಕೃಷಿಕ. ಅಮ್ಮ(ಹರ್ಷಿತಾ ಗೌಡ) ಮನೆಯಲ್ಲೇ ಇರುವಾಕೆ. ಅಪ್ಪನಿಗೆ ಚಿಕ್ಕ ಮಗನಾದ ‘ಕೋಸುಡಿ’ ಮೇಲೆ ಪ್ರೀತಿ ಹೆಚ್ಚು ಮತ್ತು ‘ಕುಂಡೇಸಿ’ಯನ್ನು ದ್ವೇಷಿಸುವಂತೆಯೇ ಹೊಡೆಯುವಾತ. ಅಪ್ಪನ ಈ ಸಿಟ್ಟಿಗೆ ತುಪ್ಪ ಸುರಿಯುವ ತಮ್ಮ. ಅತ್ತ ಅಮ್ಮನಿಗೆ ‘ವಲವಾರ’ವಿಲ್ಲ. ಇಬ್ಬರಿಗೂ ಪ್ರೀತಿ ಹಂಚುವಾಕೆ. ಗಂಡನ ಭಯದಲ್ಲೇ ಸಂಸಾರ ಸಾಗಿಸುವಾಕೆ. ಇಂತಹ ‘ಕುಂಡೇಸಿ’ ಹಾಗೂ ‘ಕೋಸುಡಿ’ ಮನೆಯ ಗಬ್ಬ ಹಸುವನ್ನು(ಗೌರ) ಮೇಯಿಸಿಕೊಂಡು ಹೊರಟಾಗ ಕಥೆ ತೆರೆದುಕೊಳ್ಳುತ್ತದೆ.

ವೇದಿಕ್‌ ಕೌಶಲ್‌, ಶಯನ್‌, ಮಾಲತೇಶ್‌, ಹರ್ಷಿತಾ ಗೌಡ, ಅಭಯ್‌ ಮತ್ತಿತರರು ವಲವಾರ ಸಿನಿಮಾದಲ್ಲಿ ನಟಿಸಿದ್ದಾರೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ