ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಪಾಕಿಸ್ತಾನದ ಬಾಕ್ಸರ್‌ಗೆ ಮೇರಿ ಕೋಮ್‌ ಪ್ರೇರಣೆ!

ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಪಾಕಿಸ್ತಾನದ ಬಾಕ್ಸರ್‌ಗೆ ಮೇರಿ ಕೋಮ್‌ ಪ್ರೇರಣೆ!

ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಪಾಕಿಸ್ತಾನದ ಬಾಕ್ಸರ್‌ಗೆ ಮೇರಿ ಕೋಮ್‌ ಪ್ರೇರಣೆ!

ಗ್ಲಾಸ್ಗೊ: ಭಾರತದ ಅನುಭವಿ ಮಹಿಳಾ ಬಾಕ್ಸರ್‌ ಮತ್ತು ಆರು ಬಾರಿ ವಿಶ್ವಚಾಂಪಿಯನ್‌ ಆಗಿರುವ ಮೇರಿ ಕೋಮ್ ಅವರು ದೇಶದಲ್ಲಿನ ಹಲವು ಬಾಕ್ಸರ್‌ ಮತ್ತು ಕ್ರೀಡಾಪಟುಗಗಳಿಗೆ ಪ್ರೇರಣೆಯಾಗಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ, ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಪಾಕಿಸ್ತಾನದ ಮೊದಲ ಮಹಿಳಾ ಬಾಕ್ಸರ್‌ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಫಾತಿಮಾ ಝಹ್ರಾ ಅವರಿಗೆ ಕೂಡ ಭಾರತದ ಮೇರಿ ಕೋಮ್ ಅವರು ಪ್ರೇರಣೆಯಾಗಿದ್ದಾರೆ.

ಗ್ಲಾಸ್ಗೊ ಕ್ರೀಡಾಕೂಟದ ಮಹಿಳೆಯರ ಬಾಕ್ಸಿಂಗ್‌ನಲ್ಲಿನ 60 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ 22 ವರ್ಷದ ಫಾತಿಮಾ ಝಹ್ರಾ ಅವರು ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಸರ್ಗೋಧಾ ಪ್ರಾಂತ್ಯದವರು. ಪದಕ ಗೆದ್ದ ನಂತರ ಪಿಟಿಐನೊಂದಿಗೆ ಮಾತನಾಡಿದ ಅವರು, ‘ಭಾರತದ ಮೇರಿ ಕೋಮ್ ಅವರಿಂದ ನಾನು ಪ್ರೇರೇಪಿತಳಾಗಿದ್ದೇನೆ’ ಎಂದು ಹೇಳಿದ್ದಾರೆ.

ಕೇವಲ ಅವರ ಸಾಧನೆಯಿಂದ ನಾನು ಪ್ರೇರೇಪಿತಳಾಗಿಲ್ಲ. ಬದಲಾಗಿ ಅವರ ಜೀವನದ ಹಾದಿಯು ನನಗೆ ಸ್ಪೂರ್ತಿ ನೀಡಿದೆ. ಮಣಿಪುರದ ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ ಜನಿಸಿದ ಅವರು ಆರ್ಥಿಕ, ಸಾಮಾಜಿಕ ಮತ್ತು ಸೀಮಿತ ಸಂಪನ್ಮೂಲಗಳಿದ್ದರು ಕೂಡ ಶ್ರೇಷ್ಠ ಬಾಕ್ಸರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ‌

2014ರಲ್ಲಿ ಬಾಲಿವುಡ್‌ನಲ್ಲಿ ಅವರ ಜೀವನಾಧಾರಿತ ಚಲನಚಿತ್ರ ಬಿಡುಗಡೆಯಾಗಿತ್ತು. ಅದು 10 ವರ್ಷದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ನಾನು ಬಾಕ್ಸಿಂಗ್‌ ತರಬೇತಿ ಆರಂಭಿಸಿದ ಬಳಿಕ ಕೂಡ ಆ ಸಿನಿಮಾ ನೋಡುತ್ತಿದೆ. ಅವರ ಮೇಲೆ ನನಗೆ ಅತೀವ ಗೌರವವಿದೆ. ಮುಂದೊಂದು ದಿನ ನಾನು ಕೂಡ ಅವರಂತೆ ಆಗುತ್ತೇನೆ ಎಂದು ಫಾತಿಮಾ ಝಹ್ರಾ ಹೇಳಿಕೊಂಡಿದ್ದಾರೆ.

ಮೇರಿ ಕೋಮ್ ರೀತಿಯಲ್ಲೇ ಆರಂಭದಲ್ಲಿ ನನಗೆ ಕಷ್ಟಗಳು ಎದುರಾದವು. ನಾನು ಬಾಕ್ಸಿಂಗ್‌ ಆಡಲು ನನ್ನ ಕುಟುಂಬವು ವಿರೋಧಿಸಿತ್ತು. ತರಬೇತಿಗೂ ಕಳಿಸುತ್ತಿರಲಿಲ್ಲ. ಆದರೆ, ನಾನು ಅವರನ್ನು ವಿರೋಧಿಸಿ ತರಬೇತಿ ಪಡೆದುಕೊಂಡೆ. ಈಗ ಅವರೆಲ್ಲರೂ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೇರಿ ಕೋಮ್ ಅವರು ಆರು ಬಾರಿ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌, ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ, ಏಷ್ಯನ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ