ಅರ್ಜೆಂಟೀನಾ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ತಂದೆ ನಿಧನ

ಅರ್ಜೆಂಟೀನಾ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ತಂದೆ ನಿಧನ

ಅರ್ಜೆಂಟೀನಾ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ತಂದೆ ನಿಧನ

ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ತಂದೆ ಮತ್ತು ಅರ್ಜೆಂಟೀನಾ ಫುಟ್‌ಬಾಲ್‌ನ ಧೀರ್ಘಕಾಲದ ಪ್ರತಿನಿಧಿ ಆಗಿದ್ದ ಜಾರ್ಜ್ ಮೆಸ್ಸಿ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಜಾರ್ಜ್ ಮೆಸ್ಸಿ ಅವರು ಬೆಳಗಿನ ಜಾವ ನಿಧನರಾದರು ಎಂದು ರೊಸಾರಿಯೊದ ಸ್ಯಾನಟೋರಿಯೊ ಸೆಂಟ್ರೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕಾರ್ಲೋಸ್ ಮ್ಯಾಕಿ ದೃಢಪಡಿಸಿದ್ದಾರೆ. ಕುಟುಂಬದ ಗೌಪ್ಯತೆ ಗೌರವಿಸುವ ದೃಷ್ಟಿಯಿಂದ ಸಾವಿಗೆ ಕಾರಣದ ಕುರಿತು ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಾರ್ಜ್ ಮೆಸ್ಸಿ ಅವರು ತಮ್ಮ ಮಗ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೆಸ್ಸಿ ಅವರ ಫುಟ್‌ಬಾಲ್ ಪ್ರಯಾಣದ ಆರಂಭದಿಂದಲೂ ಅವರಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ್ದರು. ಮೆಸ್ಸಿ ಅವರು ಬಾರ್ಸಿಲೋನಾ, ಪ್ಯಾರಿಸ್ ಸೇಂಟ್-ಜರ್ಮೈನ್ ಮತ್ತು ಇಂಟರ್ ಮಿಯಾಮಿ ಮುಂತಾದ ಪ್ರಮುಖ ಕ್ಲಬ್‌ಗಳಲ್ಲಿ ಆಡಲು ಜಾರ್ಜ್ ಮೆಸ್ಸಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

‘ನಮ್ಮ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರ ತಂದೆ ಜಾರ್ಜ್ ಮೆಸ್ಸಿ ಅವರ ನಿಧನ ತೀವ್ರ ನೋವುಂಟು ಮಾಡಿದೆ’ ಎಂದು ಅರ್ಜೆಂಟೀನಾದ ಫುಟ್ಬಾಲ್ ಅಸೋಸಿಯೇಷನ್ ​​(AFA) ಸಂತಾಪ ಸೂಚಿಸಿದೆ.

ಲಯೊನೆಲ್ ಮೆಸ್ಸಿ ಅವರು ತಮ್ಮ ತಂದೆಯ ನಿಧನದ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ