‘ನೋವಿನಲ್ಲೂ ಹಾಡುವುದು ಆನಂದ’ ಶಸ್ತ್ರಚಿಕಿತ್ಸೆಗೆ ಒಳಗಾದ ಸೋನು ನಿಗಮ್ ಪೋಸ್ಟ್

‘ನೋವಿನಲ್ಲೂ ಹಾಡುವುದು ಆನಂದ’ ಶಸ್ತ್ರಚಿಕಿತ್ಸೆಗೆ ಒಳಗಾದ ಸೋನು ನಿಗಮ್ ಪೋಸ್ಟ್

‘ನೋವಿನಲ್ಲೂ ಹಾಡುವುದು ಆನಂದ’ ಶಸ್ತ್ರಚಿಕಿತ್ಸೆಗೆ ಒಳಗಾದ ಸೋನು ನಿಗಮ್ ಪೋಸ್ಟ್

ಖ್ಯಾತ ಗಾಯಕ ಸೋನು ನಿಗಮ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಆಪರೇಷನ್ ಥಿಯೇಟರ್‌ನಲ್ಲಿ ಹಾಡೊಂದನ್ನು ಹಾಡುವ ಮೂಲಕ ಸಂಗೀತದ ಮೇಲೆ ಅವರು ಇಟ್ಟಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಂಗೀತದ ಮೇಲಿನ ಅವರ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾತ್ರವಲ್ಲದೆ,  ಶೀಘ್ರದಲ್ಲಿಯೇ ಅವರು ಚೇತರಿಸಿಕೊಂಡು ಬರಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. 

ವೈದ್ಯ ಡಾ. ನೀಲೇಶ್ ಸತ್ಭಾಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ‘ನಮ್ಮ ವೈದ್ಯರ ತಂಡಕ್ಕಾಗಿ ಸೋನು ನಿಗಮ್ ಅವರು ಮೊಹಮ್ಮದ್ ರಫಿ ಅವರ ದುಲಾರಿ ಚಿತ್ರದ ಜನಪ್ರಿಯ ಸುಹಾನಿ ರಾತ್ ಧಲ್ ಚುಕಿ ಹಾಡನ್ನು ಹಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವಿಡಿಯೊವನ್ನು ರಿ–ಶೇರ್ ಮಾಡಿರುವ ಸೋನು ನಿಗಮ್‌, ‘ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರೀತಿಯ ಡಾ. ನೀಲೇಶ್ ಸತ್ಭಾಯ್ ಮತ್ತು ಅವರ ತಂಡಕ್ಕೆ ಒಂದು ಅನಿರೀಕ್ಷಿತ ಸಂಗೀತ ಪ್ರದರ್ಶನ. ನೋವಿನಲ್ಲಿಯೂ ಹಾಡುವುದು ಆನಂದ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಇದು ಸೋನು ನಿಗಮ್ ಅವರು, ಸಂಗೀತದೊಂದಿಗೆ ಹೊಂದಿರುವ ಭಾವಾನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ‘ಸೋನು ಸರ್ ಬೇಗ ಗುಣಮುಖರಾಗಲಿ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ‘ ಶೀಘ್ರ ಚೇತರಿಕೆಗಾಗಿ ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ಕಮೆಂಟ್ ಮಾಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ