‘ಒರಿಜಿನಲ್ ಮಾನ್‌ಸ್ಟಾರ್’ನಲ್ಲಿ ಶಿವಣ್ಣ: ಕಬ್ಜ ಬಳಿಕ ಆರ್. ಚಂದ್ರು ಹೊಸ ಸಿನಿಮಾ

‘ಒರಿಜಿನಲ್ ಮಾನ್‌ಸ್ಟಾರ್’ನಲ್ಲಿ ಶಿವಣ್ಣ: ಕಬ್ಜ ಬಳಿಕ ಆರ್. ಚಂದ್ರು ಹೊಸ ಸಿನಿಮಾ

‘ಒರಿಜಿನಲ್ ಮಾನ್‌ಸ್ಟಾರ್’ನಲ್ಲಿ ಶಿವಣ್ಣ: ಕಬ್ಜ ಬಳಿಕ ಆರ್. ಚಂದ್ರು ಹೊಸ ಸಿನಿಮಾ

ಕನ್ನಡದ ಖ್ಯಾತ ನಿರ್ದೇಶಕ ಆರ್‌. ಚಂದ್ರು ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ‘ಒರಿಜಿನಲ್ ಮಾನ್‌ಸ್ಟಾರ್’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಆರ್‌. ಚಂದ್ರು ಅವರು, ನಟ ಶಿವರಾಜ್ ಕುಮಾರ್ ಅವರ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಈ ಹಿಂದೆ ಆರ್‌. ಚಂದ್ರು ಅವರು ಶಿವರಾಜ್‌ ಕುಮಾರ್ ನಟನೆಯ ‘ಮೈಲಾರಿ’ ಸಿನಿಮಾವನ್ನು ನಿರ್ದೇಶಿಸಿದ್ದರು. ಈಗ ಮತ್ತೊಮ್ಮೆ ಶಿವಣ್ಣ ಕೈಜೋಡಿಸಿದ್ದಾರೆ. ‘ಕಬ್ಜ’ ಬಳಿಕ ಆರ್ ಚಂದ್ರು ಅವರು ಯಾವುದೇ ಸಿನಿಮಾವನ್ನು ನಿರ್ದೇಶಿಸದೇ ಬರೀ ನಿರ್ಮಾಣ ಮಾಡುತ್ತಿದ್ದರು. ಇದೀಗ ಅವರು ಮತ್ತೊಮ್ಮೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನೂತನ ಸಿನಿಮಾದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಇನ್ನು ಈ ಸಿನಿಮಾದ ತಾರಾಗಣದ ವಿವರಗಳನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ