ವರಮಹಾಲಕ್ಷ್ಮಿ ಹಬ್ಬ: ಖರೀದಿ ಜೋರು

ವರಮಹಾಲಕ್ಷ್ಮಿ ಹಬ್ಬ: ಖರೀದಿ ಜೋರು

ವರಮಹಾಲಕ್ಷ್ಮಿ ಹಬ್ಬ: ಖರೀದಿ ಜೋರು

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಡಗರದಿಂದ ಆಚರಿಸಲು ನಗರದ ಜನತೆ ಅಗತ್ಯ ಸಿದ್ಧತೆಯನ್ನು ಬುಧವಾರವೇ ನಡೆಸಿದರು. ಬೆಲೆ ಏರಿಕೆಯ ಬಿಸಿಯ ನಡುವೆ ಹೂ, ಹಣ್ಣು, ತರಕಾರಿ ಸೇರಿದಂತೆ ಹಬ್ಬದ ಪರಿಕರ ಖರೀದಿಸಿದರು. ಸಂಜೆ ಸುರಿಯುತ್ತಿದ್ದ ಮಳೆಯಲ್ಲಿಯೇ ವಹಿವಾಟು ನಡೆಸಿದರು.

ಹಬ್ಬದಂದು ಲಕ್ಷ್ಮಿ ಕಳಸ ಕೂರಿಸಿ, ಮುಖವಾಡ ತೊಡಿಸಿ ತರಹೇವಾರಿ ಹೂವು, ಹಣ್ಣುಗಳಿಂದ ಅಲಂಕರಿಸುವುದು ವಾಡಿಕೆ. ಹೀಗಾಗಿ ಹೂವು ಮತ್ತು ಹಣ್ಣಿನ ದರಗಳಲ್ಲಿ ಭಾರಿ ಏರಿಕೆಯಾಗಿತ್ತು. 

ಕನಕಾಂಬರ, ಮಲ್ಲಿಗೆ, ಸೇವಂತಿಗೆ ಹೂಗಳ ಬೆಲೆ ತುಟ್ಟಿಯಾಗಿತ್ತು. ಬೆಳಿಗ್ಗೆ ಕೆ.ಜಿಗೆ ₹3,500ರ ಆಸುಪಾಸು ಇದ್ದ ಕನಕಾಂಬರ ಹೂ ದರ ಸಂಜೆ ವೇಳೆಗೆ ₹4 ಸಾವಿರ ದಾಟಿತ್ತು. ₹450 ನೀಡಿ 100 ಗ್ರಾಂ ಹೂವನ್ನು ಕೊಳ್ಳುವವರ ಸಂಖ್ಯೆ ಹೆಚ್ಚಿತ್ತು. ಕಟ್ಟಿರುವ ಹೂ ಒಂದು ಮಾರಿಗೆ ₹450 ಇತ್ತು. ಮಲ್ಲಿಗೆಯೂ ಕೆ.ಜಿಗೆ ₹1,600 ಇತ್ತು. 

ಲಕ್ಷ್ಮಿ ಮೂರ್ತಿಯ ಸೊಬಗು ಹೆಚ್ಚಿಸುವ ಡೇರೆ ಮತ್ತು ತಾವರೆ ಹೂ ಬೆಲೆ ಜೋಡಿಗೆ ಕ್ರಮವಾಗಿ ₹50 ಮತ್ತು ₹80 ಇತ್ತು. ಸೇವಂತಿಗೆ ಹೂ ಕೆ.ಜಿಗೆ ₹400ರಿಂದ ₹500 ಇದ್ದರೆ, ಸಂಪಿಗೆ ₹400 ಇತ್ತು. ಸುಗಂಧರಾಜ ಕೂಡ ₹400ಕ್ಕೆ ಸಿಗುತ್ತಿತ್ತು. ಹಾರ ಕಟ್ಟಲು ಬಳಸುವ ಪನ್ನೀರು ಎಲೆ ಪ್ರತಿ ಕೆ.ಜಿಗೆ ₹150 ಇದ್ದರೆ, ಮರಳೆ ಹಾಗೂ ಗುಲಾಬಿ ₹600, ಚೆಂಡು ಹೂ ₹320ಕ್ಕೆ ಮಾರಾಟವಾಗುತ್ತಿತ್ತು.  

ಸೀರೆ, ಬಳೆ, ಲಕ್ಷ್ಮಿ ಮುಖವಾಡ ಖರೀದಿ: ದೇವಿಯ ಕಳಸಕ್ಕೆ ಉಡಿಸುವ ಸೀರೆಯ ಖರೀದಿಯಲ್ಲಿ ಮಹಿಳೆಯರು ತೊಡಗಿದ್ದರು. ಚಿಕ್ಕಪೇಟೆಯಲ್ಲಿ ಬಟ್ಟೆ, ಭಾವಚಿತ್ರ, ಮುಖವಾಡಗಳನ್ನು ಖರೀದಿಸಿದರು. ಚಿನ್ನ, ಬೆಳ್ಳಿ ಮುಖವಾಡಗಳನ್ನು ಖರೀದಿಸಲು ಆಭರಣ ಅಂಗಡಿಗಳಲ್ಲೂ ಜನ ಸೇರಿದ್ದರು. ಲಕ್ಷ್ಮಿ ಅಲಂಕಾರಕ್ಕೆ ಹಾಗೂ ಕುಟುಂಬದ ಸದಸ್ಯರು– ಹೆಣ್ಣು ಮಕ್ಕಳಿಗೆ ಅರಿಶಿಣ– ಕುಂಕುಮ ಕೊಡುವ ಸಂಪ್ರದಾಯಕ್ಕಾಗಿ ಬಳೆ ಖರೀದಿಯೂ ಜೋರಿತ್ತು.

ಲಕ್ಷ್ಮಿ ಪ್ರತಿಷ್ಠಾಪನೆಯ ಜೊತೆಗೆ ಹಣ್ಣುಗಳು, ತಿಂಡಿ– ತಿನಿಸು ಇಡುವುದು ವಾಡಿಕೆ. ಹಣ್ಣುಗಳ ಬೆಲೆಯೂ ಹೆಚ್ಚಿತ್ತು. ಸೇಬು ಕೆ.ಜಿಗೆ ₹100ರಿಂದ ₹150, ದಾಳಿಂಬೆ ₹140, ಮರಸೇಬು ₹120, ಮೂಸಂಬಿ ₹60, ಕಿತ್ತಳೆ ಮತ್ತು ಸೀತಾಫಲ ₹80ರಿಂದ ₹100, ಬಾಳೆ ಹಣ್ಣು ₹150, ಡ್ರ್ಯಾಗನ್ ಮತ್ತು ಸಪೋಟ ದರ ₹100 ಇತ್ತು. ಟೊಮೆಟೊ ಹೊರತು ಪಡಿಸಿ ತರಕಾರಿಗಳ ದರವು ಕಳೆದ ವರ್ಷಕ್ಕಿಂತ ಹೆಚ್ಚಿತ್ತು. 

ನಗರದ ವಿವಿಧ ಭಾಗಗಳಲ್ಲಿಯೂ ಖರೀದಿ ಭರಾಟೆ ನಡೆಯಿತು. ಮಲ್ಲೇಶ್ವರ, ಯಶವಂತಪುರ, ಜಯನಗರ, ಶಿವಾಜಿನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಗ್ರಾಹಕರು ಜಮಾಯಿಸಿದ್ದರು. ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. ಕೆ.ಆರ್. ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. 

‘ವ್ಯಾಪಾರ ಚೆನ್ನಾಗಿ ಆಗಿದೆ’ ‘ಮಳೆ ಹೆಚ್ಚು ಆಗಿಲ್ಲ

ಕನಕಾಂಬರ ಮಲ್ಲಿಗೆ ಹೂ ಹೆಚ್ಚು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ ₹1 ಸಾವಿರ ಜಾಸ್ತಿಯಾಗಿದೆ. ಬೆಳಿಗ್ಗೆ ₹3 ಸಾವಿರವಿದ್ದದ್ದು ಸಂಜೆ ವೇಳೆಗೆ ಜಾಸ್ತಿ ಆಗಿದೆ. 50 ಕೆ.ಜಿ. ಹೂ ತಂದಿದ್ದೆ ಖಾಲಿಯಾಯಿತು. ವ್ಯಾಪಾರ ಚೆನ್ನಾಗಿ ಆಗಿದೆ. ಗುರುವಾರ ದರ ಕಡಿಮೆ ಆಗಬಹುದು’ ಎಂದು ಹೂ ವ್ಯಾಪಾರಿ ಕಾಂತರಾಜು ಮತ್ತು ರೋಹಿತ್ ಹೇಳಿದರು. 

ಹೂವಿನ ಹಾರಗಳಿಗೆ ಬೇಡಿಕೆ

ತಾವರೆ ಮಲ್ಲಿಗೆ ನಂದಿಬಟ್ಟಲು ಸೇವಂತಿಗೆ ಹಾರಗಳಿಗೆ ಬೇಡಿಕೆ ಇತ್ತು. ತಾವರೆ ಹಾಗೂ ಗುಲಾಬಿಯ ಒಂದು ಹಾರಕ್ಕೆ ₹1200 ಇದ್ದರೆ ನಂದಿಬಟ್ಟಲು ₹1400 ಮಲ್ಲಿಗೆ  ₹800ರಿಂದ ₹1 ಸಾವಿರಕ್ಕೆ ದೊರೆಯುತ್ತಿತ್ತು. ಸುಗಂಧರಾಜ ಹಾರವೊಂದಕ್ಕೆ ₹800 ನೇರಳೆ ಬಣ್ಣದ ಆರ್ಕಿಡ್‌ ಹೂವಿನ ಹಾರ ₹1 ಸಾವಿರ ಇತ್ತು. ದುಬಾರಿ ಹಾರವನ್ನು ಕೊಳ್ಳಲಾರದವರು ಗಣಗಲ ಹೂ ಅನ್ನು ಮಾರಿಗೆ ₹160 ನೀಡಿ ಕೊಂಡರು. ಇದಲ್ಲದೇ 5 ಅಡಿಯ ಉದ್ದದ ಸೇವಂತಿಗೆ ಹಾರಕ್ಕೆ ₹2 ಸಾವಿರ ನೀಡಿ ಕೊಳ್ಳುವವರೂ ಇದ್ದರು. 

ಹೂವುಗಳ ದರ ಪ್ರತಿ ಕೆ.ಜಿ.ಗೆ (₹ಗಳಲ್ಲಿ)

ತಾವರೆ;80ಕ್ಕೆ ಎರಡು  ಡೇರೆ;50ಕ್ಕೆ ಎರಡು 

ಹಣ್ಣುಗಳ ದರ ಪ್ರತಿ ಕೆ.ಜಿಗೆ

ಏಲಕ್ಕಿ ಬಾಳೆ;120ರಿಂದ 150

ತರಕಾರಿ ದರಗಳು ಪ್ರತಿ ಕೆಜಿಗೆ

ಮಾವಿನ ಎಲೆ;30 (ಕಟ್ಟಿಗೆ) 100

4 ತೆಂಗಿನಕಾಯಿಗೆ(ಚಿಕ್ಕದ್ದು);120

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ