
Actress Ayesha Khan: ನೀಟ್ ಪ್ರತಿಭಟನೆಗೆ ತೆರಳಿದ್ದ 'ದುರಂಧರ್' ನಟಿ ಪೊಲೀಸ್ ವಶಕ್ಕೆ, ಆಯಿಷಾ ಪೋಸ್ಟ್
ನೀಟ್ (NEET) ಪರೀಕ್ಷಾ ಅಕ್ರಮ ವಿರುದ್ಧದ ಪ್ರತಿಭಟನೆಗೆ ಆಗಮಿಸಿದ್ದ ಪ್ಯಾನ್ ಇಂಡಿಯಾ 'ದುರಂಧರ್' ಖ್ಯಾತಿಯ ನಟಿ ಆಯಿಷಾ ಖಾನ್ ಅವರನ್ನು ಬುಧವಾರ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ರಿಲೀಸ್ ನಟಿ ಪೋಸ್ಟ್ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಮತ್ತೊಂದೆಡೆ ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿದಿದೆ.
ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು, ಸಿನಿ ಕಲಾವಿದರೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿ, ಮುಂಬೈ, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ಶುರುವಾಗಿವೆ.
ಇಂದು ಬುಧವಾರ ಮುಂಬೈನಲ್ಲಿ ನಟ ರಣವೀರ್ ಸಿಂಗ್ ನಟನೆಯ 'ದುರಂಧರ್' ಸಿನಿಮಾದ 'ಶರಾರತ್' ಹಾಡಿನ ಮೂಲಕ ಮನೆ ಮಾತಾಗಿದ್ದ ನಟಿ ಆಯಿಷಾ ಖಾನ್ ಅವರು ನೀಟ್ ಅಕ್ರಮ ವಿರುದ್ಧ ಪ್ರತಿಭಟನೆಗೆ ಆಗಮಿಸಿದ್ದರು. ಪ್ರತಿಭಟನಾಕಾರರು ಮತ್ತು ನಟಿ ಸ್ಥಳಕ್ಕೆ ಬಂದಿದ್ದರಷ್ಟೇ. ಅವರನ್ನು ಮಾತನಾಡಲು ಬಿಡದೇ, ಏಕಾಎಕಿ ಪೊಲೀಸರು ನಟಿಯನ್ನು ಕಾರಣ ನೀಡದೇ ವಶಕ್ಕೆ ಪಡೆದಿದ್ದಾರೆ. ಪೊಲೀಸರ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೊಸ್ಟ್ ಹಂಚಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ನೀಟ್ ವಿರುದ್ಧ ದಾದರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ನಾಲ್ಕು ಗಂ ಟೆಗೆ ನಾನು ಸಹ ಅಲ್ಲಿಗೆ ತೆರಳಿದ್ದೆ. ಸ್ಥಳದಲ್ಲಿ ನಾವು ಘೋಷಣೆ ಕೂಗಿರಲಿಲ್ಲ. ಯಾವುದೇ ಆಕ್ರೋಶದ ಮಾತುಗಳಾಡಿರಲಿಲ್ಲ. ಇದೇ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಬಂದು ಇಲ್ಲಿ ಪ್ರತಿಭಟನೆ ಮಾಡಕೂಡದು ಎಂದರು. ಅವರೊಂದಿಗೆ ವಾಗ್ವಾದಕ್ಕೆ ಇಳಿಯದೇ ಪ್ರತಿಭಟನೆ ದಾರಿ ಬಿಟ್ಟು ಬೇರೆ ಏನಿದೆ ಎಂದು ಕೇಳಿದೆವು. ಅವರು ಏನೊಂದು ಮಾತನಾಡದೇ, ಕಾರಣ ಹೇಳದೇ ನನ್ನ, ನನ್ನ ಸಹೋದರ ಹಾಗೂ ಸ್ನೇಹಿತರನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ನಲ್ಲಿ ಕರೆದುಕೊಂಡು ಹೋದರು ಎಂದು ಅವರು ಅಸಮಧಾನ ಹೊರ ಹಾಕಿದ್ದಾರೆ.
ಇದಕ್ಕೂ ಮೊದಲು ಮಹಿಳಾ ಪೊಲೀಸರು ಎಳೆದಾಡಿದ್ದಾರೆ. ನಮ್ಮನ್ನು ಮಾತನಾಡಲು ಬಿಡದೇ ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದ ನೀಟ್ ವಿರುದ್ಧದ ಪ್ರತಿಭಟನೆಗಳು
ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ವಿದ್ಯಾರ್ಥಿಗಳು ಸಂಸತ್ ಭವನ ಚಲೋ ಪ್ರತಿಭಟನೆ ಹಮ್ಮಿಕೊಂಡ ಬಳಿಕ ಸೋಮವಾರ ದೆಹಲಿಯಲ್ಲಿ ವಾತಾವರಣ ಬಿಗುಡಾಯಿಸಿತ್ತು. ಸಾವಿರಾರು ಜನ ಪಾರ್ಲಿಮೆಂಟ್ ಮುತ್ತಿಗೆ ಯತ್ನ ನಡೆಸಿದರು. ವಿದ್ಯಾರ್ಥಿಗಳ ಜೊತೆಗೆ ರಾಜಕಾರಣಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ, ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸುತ್ತಿದ್ದಂತೆ ಪೊಲೀಸ್ ಲಾಠಿ ಪ್ರಹಾರ ನಡೆಸಿದರು. ಅಶ್ರುವಾಯು ಸಿಡಿಸಿದರು. ಈ ಘಟನೆ ಹಿನ್ನೆಲೆ ಸಾರ್ವಜನಿಕವಾಗಿ ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ನೀಟ್ ವಿರುದ್ಧ ನೆನ್ನೆ ಮಂಗಳವಾರ, ಇಂದು ಬುಧವಾರ ಸಹ ದೇಶ ನಾನಾ ಕಡೆಗಳಲ್ಲಿ ನೀಟ್ ಅಕ್ರಮ ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ಪ್ರತಿಭನೆಗಳು ಮುಂದುವರಿದಿವೆ.
View this post on InstagramA post shared by Ayesha Khan (@ayeshaakhan_official)
A post shared by Ayesha Khan (@ayeshaakhan_official)