ಎಐ ಮಾನವಕುಲವನ್ನೇ ನಾಶಪಡಿಸಲಿದೆ: ಜಗತ್ತಿಗೆ ಆಂಥ್ರೊಪಿಕ್ ಸಹ-ಸಂಸ್ಥಾಪಕನ ಶಾಕಿಂಗ್ ಎಚ್ಚರಿಕೆ

ಎಐ ಮಾನವಕುಲವನ್ನೇ ನಾಶಪಡಿಸಲಿದೆ: ಜಗತ್ತಿಗೆ ಆಂಥ್ರೊಪಿಕ್ ಸಹ-ಸಂಸ್ಥಾಪಕನ ಶಾಕಿಂಗ್ ಎಚ್ಚರಿಕೆ

ಎಐ ಮಾನವಕುಲವನ್ನೇ ನಾಶಪಡಿಸಲಿದೆ: ಜಗತ್ತಿಗೆ ಆಂಥ್ರೊಪಿಕ್ ಸಹ-ಸಂಸ್ಥಾಪಕನ ಶಾಕಿಂಗ್ ಎಚ್ಚರಿಕೆ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಇದು ಇಡೀ ಭೂಮಿಯ ಮೇಲಿರುವ ಮಾನವಕುಲವನ್ನೇ ಸಂಪೂರ್ಣವಾಗಿ ನಾಶಪಡಿಸುವ ಸಾಧ್ಯತೆ ಹೊಂದಿದೆ ಎಂದು ಪ್ರಮುಖ ಎಐ ಸಂಸ್ಥೆ 'ಆಂಥ್ರೊಪಿಕ್' (Anthropic) ಸಹ-ಸಂಸ್ಥಾಪಕ ಜ್ಯಾಕ್ ಕ್ಲಾರ್ಕ್ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಎಐ ತಂತ್ರಜ್ಞಾನದಿಂದ ಎದುರಾಗಲಿರುವ ಜಾಗತಿಕ ಅಪಾಯಗಳ ಕುರಿತು ಜಗತ್ತು ಇನ್ನು ಕೂಡ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದಂತೆ ಆಗಲಿದೆ ಜಗತ್ತಿನ ಸ್ಥಿತಿ

ಎಐ ತಂತ್ರಜ್ಞಾನದ ತೀವ್ರ ಬೆಳವಣಿಗೆಗೆ ಜಗತ್ತು ಸಿದ್ಧವಾಗದಿರುವುದನ್ನು ಜ್ಯಾಕ್ ಕ್ಲಾರ್ಕ್ ಅವರು ಕೋವಿಡ್-19 ಸಾಂಕ್ರಾಮಿಕಕ್ಕೆ ಹೋಲಿಸಿದ್ದಾರೆ. "ನಾವು ಹೇಗೆ ಕೊರೋನಾ ಸಾಂಕ್ರಾಮಿಕವನ್ನು ಮುಂಚಿತವಾಗಿ ಊಹಿಸಿ ಸಿದ್ಧರಾಗಲು ವಿಫಲರಾದೆವೋ, ಅದೇ ತಪ್ಪು ಎಐ ವಿಷಯದಲ್ಲೂ ಮರುಕಳಿಸುತ್ತಿದೆ. ಈ ತಂತ್ರಜ್ಞಾನವು ಶೀಘ್ರದಲ್ಲೇ ನಮ್ಮೆಲ್ಲರ ಬುದ್ಧಿವಂತಿಕೆಗಿಂತಲೂ ಹೆಚ್ಚು ಶಕ್ತಿಶಾಲಿಯಾಗಲಿದೆ. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಕೃತಕ ಬುದ್ಧಿಮತ್ತೆ ಜಗತ್ತನ್ನು ಆವರಿಸಿಕೊಂಡ ನಂತರ ಕೇವಲ ಮೂಕಪ್ರೇಕ್ಷಕರಾಗಬೇಕಾಗುತ್ತದೆ" ಎಂದಿದ್ದಾರೆ.

ಮಾನವನ ಅಸ್ತಿತ್ವಕ್ಕೆ ಧಕ್ಕೆ ತರಬಲ್ಲ ಅಪಾಯಗಳು ಇನ್ನೂ ದೂರವಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಾನವಕುಲದ ಸುರಕ್ಷತೆಗಾಗಿ ಎಐ ಅಭಿವೃದ್ಧಿಯ ವೇಗವನ್ನು ಸ್ವಲ್ಪ ತಗ್ಗಿಸುವುದು ಸೂಕ್ತ. ಆದರೆ ಜಗತ್ತಿನ ವಿವಿಧ ದೇಶಗಳು ಮತ್ತು ಸಂಸ್ಥೆಗಳು ಈ ತಂತ್ರಜ್ಞಾನದ ಮೇಲುಗೈ ಸಾಧಿಸಲು ತೀವ್ರ ಪೈಪೋಟಿಗೆ ಬಿದ್ದಿರುವುದರಿಂದ ಇದನ್ನು ತಡೆಯುವುದು ಅಸಾಧ್ಯದ ಮಾತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಂಥ್ರೊಪಿಕ್ ಸಂಸ್ಥೆಯ ಮತ್ತೊಬ್ಬ ಸಹ-ಸಂಸ್ಥಾಪಕ ಡೇರಿಯೊ ಅಮೋಡೆ ಅವರೂ ಸಹ ಇದೇ ರೀತಿಯ ಆತಂಕವನ್ನು ಹೊರಹಾಕಿದ್ದಾರೆ. "ಎಐ ವ್ಯವಸ್ಥೆಯು ಶೀಘ್ರದಲ್ಲೇ ವಿಶ್ವದ ಅತ್ಯಂತ ಬುದ್ಧಿವಂತ ಮಾನವರಿಗಿಂತಲೂ ಮಿಗಿಲಾದ ಪ್ರಾವೀಣ್ಯತೆ ಸಾಧಿಸಲಿದೆ. ಪ್ರಸ್ತುತ ನಮ್ಮ ಜಾಗತಿಕ ವ್ಯವಸ್ಥೆಗಳು ಇದನ್ನು ನಿಯಂತ್ರಿಸಲು ಸಿದ್ಧವಾಗಿಲ್ಲ. ನಾವು 2023ಕ್ಕಿಂತ ಪ್ರಸ್ತುತ 2026ರಲ್ಲಿ ಅತ್ಯಂತ ನೈಜ ಮತ್ತು ಗಂಭೀರವಾದ ಅಪಾಯದ ಅಂಚಿಗೆ ಬಂದು ತಲುಪಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

ನಾನೇ ಈ ತಂತ್ರಜ್ಞಾನ ಕಂಡುಹಿಡಿದಿದ್ದಕ್ಕೆ ವಿಷಾದವಿದೆ

ಎಐ ತಂತ್ರಜ್ಞಾನದ ಪಿತಾಮಹ (Godfather of AI) ಎಂದೇ ಕರೆಯಲ್ಪಡುವ ನೋಬೆಲ್ ಪ್ರಶಸ್ತಿ ವಿಜೇತ ಜೆಫ್ರಿ ಹಿಂಟನ್ ಕೂಡ ಈ ತಂತ್ರಜ್ಞಾನದ ಭೀಕರತೆಯ ಬಗ್ಗೆ ಮಾತನಾಡಿದ್ದಾರೆ. ನನ್ನ ಇಡೀ ಜೀವನವನ್ನು ನಾನು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮುಡಿಪಾಗಿಟ್ಟೆ ಎಂಬುದನ್ನು ನೆನೆದರೆ ಈಗ ನನಗೆ ತೀವ್ರ ವಿಷಾದವಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಹಂತ ತಲುಪಿದ್ದರೂ ಸಹ ಜನ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮಗಿಂತ ಹೆಚ್ಚು ಬುದ್ಧಿವಂತ ತಂತ್ರಜ್ಞಾನವನ್ನು ನಾವೇ ಸೃಷ್ಟಿಸುತ್ತಿರುವ ಇಂತಹ ಪರಿಸ್ಥಿತಿಯನ್ನು ಮಾನವಕುಲ ಹಿಂದೆಂದೂ ಎದುರಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಾನವ ಮತ್ತು ಬುದ್ಧಿವಂತ ಎಐ ಸಿಸ್ಟಮ್‌ಗಳು ಒಟ್ಟಿಗೆ ಹೇಗೆ ಸಹಬಾಳ್ವೆ ನಡೆಸಬೇಕು ಎಂಬ ಸಂಶೋಧನೆಯಲ್ಲಿ ಜಗತ್ತು ಹೂಡಿಕೆ ಮಾಡದಿರುವುದೇ ನಾವು ಮಾಡುತ್ತಿರುವ ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ. "ಒಂದು ವೇಳೆ ನಾವು ಸೃಷ್ಟಿಸುವ ಎಐಗೆ ನಮ್ಮ ಬಗ್ಗೆ ಕಾಳಜಿ ಇಲ್ಲದಂತೆ ನಾವು ರೂಪಿಸಿದರೆ, ಅವು ನಮ್ಮನ್ನು ಭೂಮಿಯಿಂದಲೇ ಸಂಪೂರ್ಣವಾಗಿ ನಿರ್ನಾಮ ಮಾಡಲಿವೆ ಎಂದು ಹಿಂಟನ್ ಆತಂಕ ವ್ಯಕ್ತಪಡಿಸಿದ್ದಾರೆ.

virus america india coronavirus technology

virus america india coronavirus technology

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ