
ಚಿಕ್ಕಬಳ್ಳಾಪುರದಲ್ಲಿ ರಾಸು ವಿಮೆ ಯೋಜನೆಯಡಿ ₹8 ಲಕ್ಷ ಪರಿಹಾರ ವಿತರಣೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನಗರದ ಚಿಮುಲ್ ಶಿಬಿರ ಕಚೇರಿಯಲ್ಲಿ ತಾಲ್ಲೂಕಿನಲ್ಲಿ ಮರಣ ಹೊಂದಿದ ರಾಸುಗಳ 12 ಮಾಲೀಕರಿಗೆ ರಾಸು ವಿಮಾ ಯೋಜನೆಯಡಿ ₹ 8.20 ಲಕ್ಷ ಪರಿಹಾರದ ಚೆಕ್‌ಗಳನ್ನು ಚಿಮುಲ್ ನಿರ್ದೇಶಕ ಎನ್.ಸಿ ವೆಂಕಟೇಶ್ ಶುಕ್ರವಾರ ವಿತರಿಸಿದರು.
ವೆಂಕಟೇಶ್ ಮಾತನಾಡಿ, ರಾಸುಗಳಿಗೆ ವಿಮೆ ಮಾಡಿಸುವುದರಿಂದ ಅಪಘಡಗಳು ನಡೆದಾಗ ರೈತರಿಗೆ ಅನುಕೂಲವಾಗುತ್ತದೆ. ಕೆಲವರು ರಾಸುಗಳನ್ನು ನಂಬಿ ಜೀವನ ನಡೆಸುತ್ತಿರುತ್ತಾರೆ. ರಾಸುಗಳು ಮೃತಪಟ್ಟರೆ ಮತ್ತೊಂದು ರಾಸು ಖರೀದಿಸಲು ವಿಮೆ ನೆರವಾಗಲಿದೆ ಎಂದರು.
ಬರ ಹೆಚ್ಚಿದೆ. ರೈತರು ಒಕ್ಕೂಟದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಾಲು ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.ಉಪ ವ್ಯವಸ್ಥಾಪಕ ಮನೋರಂಜನ್ ರೆಡ್ಡಿ ಬಿ.ಬಿ, ಒಕ್ಕೂಟದ ವಿಸ್ತರಣಾಧಿಕಾರಿಗಳು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-16-181217870