ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ನಮೂನೆ ಸಲ್ಲಿಸದ 62,854 ಮಂದಿ

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ನಮೂನೆ ಸಲ್ಲಿಸದ 62,854 ಮಂದಿ

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ನಮೂನೆ ಸಲ್ಲಿಸದ 62,854 ಮಂದಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಒಂದು ಹಂತ ಮುಗಿದಿದ್ದು, ಒಟ್ಟು 4,68,657 ಮತದಾರರ ಪೈಕಿ 62,854 ಮತದಾರರು ಗಣತಿ ನಮೂನೆಯನ್ನು ವಾಪಸ್ ಸಲ್ಲಿಸಿಲ್ಲ. ಗಣತಿ ನಮೂನೆ ಸಲ್ಲಿಸಿದವರಲ್ಲಿ 2002ರ ಪಟ್ಟಿಗೆ ಜೋಡಣೆಯಾಗದವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 13,557 ಮಂದಿಗೆ ಜೋಡಣೆ (ಮ್ಯಾಪಿಂಗ್) ಆಗಿಲ್ಲ.

ಮಡಿಕೇರಿ ಮತ್ತು ವಿರಾಜಪೇಟೆ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಎಲ್ಲ 4,68,657 ಮತದಾರರಿಗೆ ಹಾಗೂ ಅವರು ಕುಟುಂಬದವರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ವಿತರಣೆ ಪ್ರಕ್ರಿಯೆಯಲ್ಲಿ ಶೇ 100ರಷ್ಟು ಪ್ರಗತಿಯನ್ನು ಸಾಧಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ 62,854 ಮತದಾರರು ಭರ್ತಿ ಮಾಡಿದ ಗಣತಿ ನಮೂನೆಯನ್ನು ವಾಪಸ್ ಮತಗಟ್ಟೆ ಅಧಿಕಾರಿಗಳಿಗೆ ನೀಡಿಲ್ಲ.

ಈಗ ಈ ಎಲ್ಲ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಇದನ್ನು ನಿರಾಕರಿಸಿರುವ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ‘ಗಣತಿ ನಮೂನೆಯನ್ನು ವಾಪಸ್‌ ಕೊಡದವರ ಹೆಸರನ್ನು ಈಗಲೇ ತೆಗೆದುಹಾಕುವುದಿಲ್ಲ. ಅಷ್ಟೂ ಮಂದಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತೇವೆ. ವಿಚಾರಣೆ ವೇಳೆ ಅವರು ಸಲ್ಲಿಸುವ ದಾಖಲಾತಿಗಳನ್ನು ಪರಿಶೀಲಿಸಿ, ಆ ನಂತರವಷ್ಟೇ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಮತಗಟ್ಟೆ ಅಧಿಕಾರಿಗಳು ಭರ್ತಿ ಮಾಡಿದ ಗಣತಿ ನಮೂನೆ ಸಲ್ಲಿಸದವರಿಗೆ ನೋಟಿಸ್ ನೀಡಿರುವುದಕ್ಕೆ ಅವರಿಂದ ಸ್ವೀಕೃತಿಯನ್ನೂ ಪಡೆಯಲಾಗುತ್ತದೆ. ಹಾಗಾಗಿ, ತರಾತುರಿಯಲ್ಲಿ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವುದಿಲ್ಲ ಎಂದು ಹೇಳಿದರು.

ಇವರಲ್ಲಿ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು. 2 ಕಡೆ ಹೆಸರು ಇರುವವರಿಗೆ ನೋಟಿಸ್ ನೀಡಲಾಗುವುದಿಲ್ಲ. ಮ್ಯಾಪಿಂಗ್ ಆದವರಿಗೆ ಮಾತ್ರವೇ ನೋಟಿಸ್ ನೀಡಲಾಗುತ್ತದೆ. ಈ ಕೆಲಸಕ್ಕಾಗಿ ಹೆಚ್ಚುವರಿಯಾಗಿ ಸಹಾಯಕ ಮತಗಟ್ಟೆ ಅಧಿಕಾರಿಗಳ ನೇಮಕಾತಿಗೂ ಸಿದ್ಧತೆಗಳು ನಡೆದಿವೆ.

ಯಾರು ಯಾರು ಭರ್ತಿ ಮಾಡಿದ ಗಣತಿ ನಮೂನೆಯನ್ನು ವಾಪಸ್ ನೀಡಿಲ್ಲವೋ ಅಂತಹವರ ಪಟ್ಟಿಯನ್ನು ಈಗಾಗಲೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದೆ. ವಾಪಸ್ ನೀಡಿದವರಿಂದ ದಾಖಲಾತಿ ಪಡೆದು ಅವರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮಾಡಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಲ್ಲೂ ಮನವಿ ಸಲ್ಲಿಸಲಾಗಿದೆ. ಮತದಾರರು ವಾಪಸ್ ಕೊಟ್ಟಿರುವ 4,05,803 ಭರ್ತಿ ಮಾಡಿದ ಗಣತಿ ನಮೂನೆಯನ್ನು ಡಿಜಿಟಲೀಕರಣ ಮಾಡಲಾಗಿದೆ.

ವೆಬ್‌ಸೈಟ್‌ನಲ್ಲಿ ಹೆಸರು ಪ್ರಕಟ

ಭರ್ತಿ ಮಾಡಿದ ಗಣತಿ ನಮೂನೆಯನ್ನು ವಾಪಸ್ ಸಲ್ಲಿಸದ 62,854 ಮಂದಿಯ ಹೆಸರನ್ನು https://kodagu.nic.in/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

https://drive.google.com/drive/folders/1ozZpVkJQvBltLlh5BbT9Z0EuOgPszBmA ಮೂಲಕವೂ ನೋಡಬಹುದು.

ವಿರಾಜಪೇಟೆಯಲ್ಲೇ ಹೆಚ್ಚು!

ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಲ್ಲಿಸದವರ ಸಂಖ್ಯೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲೆ ಹೆಚ್ಚು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 29,332 ಮಂದಿ ಗಣತಿ ನಮೂನೆಯನ್ನು ನೀಡಿಲ್ಲವಾದರೆ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 33,522 ಮಂದಿ ಗಣತಿ ನಮೂನೆಯನ್ನು ವಾಪಸ್ ಸಲ್ಲಿಸಿಲ್ಲ.

ತಾಲ್ಲೂಕುವಾರು ಗಮನಿಸಿದರೆ, ಪೊನ್ನಂಪೇಟೆ ತಾಲ್ಲೂಕಿನಲ್ಲೇ ಅತ್ಯಧಿಕ 16,986 ಮಂದಿ ನಮೂನೆ ಸಲ್ಲಿಸಿಲ್ಲ. ನಂತರದ ಸ್ಥಾನದಲ್ಲಿ ಮಡಿಕೇರಿ (14,617), ಕುಶಾಲನಗರ (12,731), ವಿರಾಜಪೇಟೆ (10,488), ಸೋಮವಾರಪೇಟೆ (8,392) ತಾಲ್ಲೂಕುಗಳು ಇವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-51-1552056380

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ