
ಜಾಕಿ 42 ಟ್ರೇಲರ್ ಬಿಡುಗಡೆ
ಕುದುರೆ ರೇಸ್ ಹಿನ್ನೆಲೆ ಕಥೆ ಹೊಂದಿರುವ ‘ಜಾಕಿ 42’ ಚಿತ್ರದ ಥಿಯೇಟರಿಕಲ್ ಟ್ರೇಲರ್ ಈಚೆಗೆ ಬಿಡುಗಡೆಯಾಯಿತು. ಯಶ್ ಅಭಿನಯದ ‘ಟಾಕ್ಸಿಕ್’ ಪ್ರದರ್ಶನಗೊಂಡ ಚಿತ್ರಮಂದಿರಗಳಲ್ಲೇ ಟ್ರೇಲರ್ ಪ್ರದರ್ಶನಗೊಂಡಿತು.
ಕಿರಣ್ ರಾಜ್ ಮುಖ್ಯಪಾತ್ರದಲ್ಲಿ ಇರುವ ‘ಜಾಕಿ 42’ ಅನ್ನು ಗೋಲ್ಡನ್ ಗೇಟ್ ಸ್ಟುಡಿಯೊ ಬ್ಯಾನರ್‌ನಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿದ್ದಾರೆ. ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. ಚಿತ್ರದ ಎರಡು ಹಾಡು ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ಮತ್ತೊಂದು ಹಾಡು ಬಿಡುಗಡೆ ಸಿದ್ಧತೆ ನಡೆಸಿದೆ. v
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-51-1409632092