ಅಮೆರಿಕದಲ್ಲಿ ಪೆಟ್ರೋಲ್ ದರ ಇಳಿಕೆಗೆ ಟ್ರಂಪ್ ತಂತ್ರ:ವೆನೆಜುವೆಲಾ ಜತೆ ತೈಲ ಒಪ್ಪಂದ

ಅಮೆರಿಕದಲ್ಲಿ ಪೆಟ್ರೋಲ್ ದರ ಇಳಿಕೆಗೆ ಟ್ರಂಪ್ ತಂತ್ರ:ವೆನೆಜುವೆಲಾ ಜತೆ ತೈಲ ಒಪ್ಪಂದ

ಅಮೆರಿಕದಲ್ಲಿ ಪೆಟ್ರೋಲ್ ದರ ಇಳಿಕೆಗೆ ಟ್ರಂಪ್ ತಂತ್ರ:ವೆನೆಜುವೆಲಾ ಜತೆ ತೈಲ ಒಪ್ಪಂದ

ವಾಷಿಂಗ್ಟನ್: ಅಮೆರಿಕ ಸರ್ಕಾರವು ವೆನೆಜುವೆಲಾ ಜತೆ ತೈಲ ಒಪ್ಪಂದ ಮಾಡಿಕೊಂಡಿದೆ ಎಂದು ವರದಿ ಆಗಿದೆ.

ವೆನೆಜುವೆಲಾದ 65 ಶತಕೋಟಿ ಬ್ಯಾರೆಲ್ ಪ್ರಮಾಣದ ತೈಲ ಸಂಗ್ರಹದ ಮೇಲೆ ಅಮೆರಿಕಕ್ಕೆ ಬಹುಪಾಲು ನಿಯಂತ್ರಣ ಸಿಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಈ ಐತಿಹಾಸಿಕ ಒಪ್ಪಂದದ ಮುಖಾಂತರ ವೆನೆಜುವೆಲಾಗೆ ಸುಮಾರು 100 ಬಿಲಿಯನ್ ಡಾಲರ್ ಖಾಸಗಿ ಹೂಡಿಕೆ ಹರಿದು ಬರಲಿದೆ. ಇದರಿಂದ ಅಮೆರಿಕದ ತೈಲ ಸಂಗ್ರಹ ಪ್ರಮಾಣವು ಎರಡಕ್ಕಿಂತ ಹೆಚ್ಚು ಪಟ್ಟು ಹೆಚ್ಚಾಗಲಿದೆ ಎಂದು ಸಾಮಾಜಿಕ ಜಾಲತಾಣ ಟ್ರೂಥ್‌ ಸೋಷಿಯಲ್‌ನಲ್ಲಿ ಟ್ರಂಪ್‌ ಪೋಸ್ಟ್‌ ಮಾಡಿದ್ದಾರೆ.

ಜನವರಿಯಲ್ಲಿ ನಿಕೋಲಸ್ ಮಡುರೊ ಅಧಿಕಾರದಿಂದ ಕೆಳಗಿಳಿದ ಬಳಿಕ ವೆನೆಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ನೇತೃತ್ವದಲ್ಲಿ ಈ ಒಪ್ಪಂದ ನಡೆದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ಒಪ್ಪಂದದ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದ್ದಾರೆ.

ವೆನೆಜುವೆಲಾಗೆ 100 ಬಿಲಿಯನ್ ಡಾಲರ್‌ಗೂ ಅಧಿಕ ಖಾಸಗಿ ಹೂಡಿಕೆ ಹಾಗೂ 209 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ತೆರಿಗೆ ಆದಾಯ ಬರಲಿದೆ. ಇದು ದೇಶದ ಆರ್ಥಿಕ ಪುನಶ್ಚೇತನಕ್ಕೆ ನೆರವಾಗಲಿದೆ ಎಂದು ಡೆಲ್ಸಿ ರಾಡ್ರಿಗಸ್ ಹೇಳಿದ್ದಾರೆ.

ಅಮೆರಿಕದಲ್ಲಿ ಇಂಧನ ಬೆಲೆ ಕಡಿತಗೊಳಿಸುವುದು ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯನ್ನು ಕಾಯ್ದುಕೊಳ್ಳುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ