ಎಸ್‌ಐಆರ್ | ಬಾಗಲಕೋಟೆಯಲ್ಲಿ 2,37,554 ಮತದಾರರು ಪಟ್ಟಿಯಿಂದ ಹೊರಕ್ಕೆ

ಎಸ್‌ಐಆರ್ | ಬಾಗಲಕೋಟೆಯಲ್ಲಿ 2,37,554 ಮತದಾರರು ಪಟ್ಟಿಯಿಂದ ಹೊರಕ್ಕೆ

ಎಸ್‌ಐಆರ್ | ಬಾಗಲಕೋಟೆಯಲ್ಲಿ 2,37,554 ಮತದಾರರು ಪಟ್ಟಿಯಿಂದ ಹೊರಕ್ಕೆ

ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಎಎಸ್‌ಡಿಡಿಒ ಅಡಿ 2,37,554 ಮತದಾರರಿದ್ದು, ಇವರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.

ಜಿಲ್ಲೆಯಲ್ಲಿ 16,31,202 ಮತದಾರರಿದ್ದು, ಡಿಜಿಟಲೈಸ್ ಮಾಡುವ ಯಾವುದೇ ಮತದಾರರು ಉಳಿದಿಲ್ಲ. 13,93,648 ಮತದಾರರ ಅರ್ಜಿಗಳನ್ನು ಡಿಜಿಟಲೈಸ್‌ ಮಾಡಲಾಗಿದ್ದು, ಉಳಿದವರು ಎಎಸ್‌ಡಿಡಿಯಡಿ ಗುರುತಿಸಲಾಗಿದೆ.

ನಿಧನರಾದವರು 44,181 ಹಾಗೂ ಡೂಪ್ಲಿಕೇಟ್‌ ಮತದಾರರು 25,739 ಇದ್ದು, ಈ ಮತದಾರರು ಮರಳಿ ಸೇರ್ಪಡೆಯಾಗುವುದಿಲ್ಲ. ಉಳಿದಿರುವ 1,67,643 ಮತದಾರರಿಗೆ ಮರಳಿ ಸೇರ್ಪಡೆ ಅವಕಾಶಗಳಿವೆ.

ಸ್ಥಳಾಂತರಗೊಂಡ ಮತದಾರರ ಸಂಖ್ಯೆ ದಾಖಲೆ ಪ್ರಮಾಣದಲ್ಲಿದ್ದು, 1,45,065 ಸ್ಥಳಾಂತರ ಹೆಸರಿನಲ್ಲಿ ಗುರುತಿಸಿ ಕೈಬಿಡಲಾಗಿದೆ. 21,473 ಮತದಾರರು ಗೈರು ಮತದಾರರಾಗಿದ್ದಾರೆ. ಇತರೆ ವಿಭಾಗದಲ್ಲಿ 1,105 ಮತದಾರರಿದ್ದಾರೆ.

ಜುಲೈ 20ರ ವೇಳೆಗೆ ಮತಗಟ್ಟೆ ಅಧಿಕಾರಿಗಳು ಎಲ್ಲ ಎನ್ಯುಮರೇಷನ್‌ ಅರ್ಜಿಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆ ನಂತರವೂ ಸಾವಿರಾರು ಸಂಖ್ಯೆಯಲ್ಲಿ ಮತದಾರರು ಸ್ಥಳಾಂತರಗೊಂಡಿದ್ದಾರೆ ಎಂದು ಕೈಬಿಟ್ಟಿದ್ದಾರೆ. ಹಾಗಾದರೆ, ಮೊದಲು ತಿಳಿಸಿದಂತೆ ಅರ್ಜಿಗಳನ್ನು ಯಾರಿಗೆ ವಿತರಿಸಿದ್ದರು ಎಂಬುದು ಪಕ್ಷಗಳ ಮುಖಂಡರ ಪ್ರಶ್ನೆಯಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಆದರೆ, ದೊಡ್ಡ ಸಂಖ್ಯೆಯಲ್ಲಿ ಮಂಗಳೂರು, ಉಡುಪಿ ಹಾಗೂ ಬೆಂಗಳೂರಿಗೆ ಹೋಗುತ್ತಾರೆ. ಅವರು ಇಲ್ಲಿ ಲಭ್ಯರಾಗದ್ದರಿಂದ ಸ್ಥಳಾಂತರ ಪಟ್ಟಿಯಲ್ಲಿ ಸೇರಿಸಿರುವುದು ಸರಿ. ಆದರೆ, ಅಲ್ಲಿಯಾದರೂ ಇವರನ್ನು ಸೇರಿಸಿ ಮತದಾರರ ಸಂಖ್ಯೆ ಹೆಚ್ಚಾಗಬೇಕಿತ್ತು. ಅಲ್ಲಿಯೂ ಸ್ಥಳಾಂತರ ಹೆಸರಿನಲ್ಲಿ ಸಂಖ್ಯೆ ಕಡಿಮೆಯಾಗಿದೆ. ಹಾಗಾದರೆ, ಸ್ಥಳಾಂತರಗೊಂಡವರು ಎಲ್ಲಿ ಹೋದರು ಎಂಬುದಕ್ಕೆ ಉತ್ತರ ಸಿಗಬೇಕಿದೆ.

ಸ್ಥಳಾಂತರಗೊಂಡವರ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಪರಿಷ್ಕರಣೆ ಅವಧಿಯನ್ನು ಆ.17ರವರೆಗೆ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಸ್ಥಳಾಂತರಗೊಂಡವರನ್ನು ಪತ್ತೆ ಹಚ್ಚಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-19-1884096209

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ