ವಿಶ್ವ ಅಥ್ಲೆಟಿಕ್ಸ್ ಯು-20 ಚಾಂಪಿಯನ್‌ಷಿಪ್‌: ಜಾವೆಲಿನ್‌ನಲ್ಲಿ ಆಶಿಷ್‌ಗೆ ಬೆಳ್ಳಿ

ವಿಶ್ವ ಅಥ್ಲೆಟಿಕ್ಸ್ ಯು-20 ಚಾಂಪಿಯನ್‌ಷಿಪ್‌: ಜಾವೆಲಿನ್‌ನಲ್ಲಿ ಆಶಿಷ್‌ಗೆ ಬೆಳ್ಳಿ

ವಿಶ್ವ ಅಥ್ಲೆಟಿಕ್ಸ್ ಯು-20 ಚಾಂಪಿಯನ್‌ಷಿಪ್‌: ಜಾವೆಲಿನ್‌ನಲ್ಲಿ ಆಶಿಷ್‌ಗೆ ಬೆಳ್ಳಿ

ಯುಜೀನ್(ಅಮೆರಿಕ): ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೂರನೇ ದಿನದಂದು ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಆಶಿಷ್ ಯಾದವ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕದ ಖಾತೆಯನ್ನು ತೆರೆದಿದೆ.

ಸ್ಪರ್ಧೆಯ ಮೂರನೇ ಸುತ್ತಿನಲ್ಲಿ 74.09 ಮೀಟರ್ ದೂರ ಜಾವೆಲಿನ್ ಎಸೆದ ಯಾದವ್ ಬೆಳ್ಳಿ ಪದಕವನ್ನು ಪಡೆದುಕೊಂಡರು.

ದಕ್ಷಿಣ ಆಫ್ರಿಕಾದ ಜಾನ್-ಹೆಂಡ್ರಿಕ್ ಹೇಮನ್ಸ್ ಅವರು ಕೊನೆಯ ಯತ್ನದಲ್ಲಿ 80.50 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

19 ವರ್ಷದ ಯಾದವ್, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರ ನಂತರ ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎನಿಸಿಕೊಂಡರು.

ಚೋಪ್ರಾ ಅವರು 2016ರಲ್ಲಿ ಪೋಲೆಂಡ್‌ನಲ್ಲಿ ನಡೆದ ಆವೃತ್ತಿಯಲ್ಲಿ 86.48 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಲ್ಲದೆ, ವಿಶ್ವ ಜೂನಿಯರ್ ದಾಖಲೆಯನ್ನು ನಿರ್ಮಿಸಿದ್ದರು.

ಪುರುಷರ ಜಾವೆಲಿನ್ ಎಸೆತ ಫೈನಲ್‌ನಲ್ಲಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ಟಿ. ಧರಣಿಧರನ್ 72.35 ಮೀಟರ್ ಎಸೆದು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ