ನಮ್ಮೂರಿನ ಭೂಮಿ ಉಚಿತವಾಗಿ ಬೇಡ, ದುಡ್ಡು ಕೊಟ್ಟು ಕೊಳ್ತೀನಿ ಸಾರ್: ಸಿಎಂಗೆ ಬೇಡಿಕೊಂಡ ಟೀಮ್ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್

ನಮ್ಮೂರಿನ ಭೂಮಿ ಉಚಿತವಾಗಿ ಬೇಡ, ದುಡ್ಡು ಕೊಟ್ಟು ಕೊಳ್ತೀನಿ ಸಾರ್: ಸಿಎಂಗೆ ಬೇಡಿಕೊಂಡ ಟೀಮ್ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್

ನಮ್ಮೂರಿನ ಭೂಮಿ ಉಚಿತವಾಗಿ ಬೇಡ, ದುಡ್ಡು ಕೊಟ್ಟು ಕೊಳ್ತೀನಿ ಸಾರ್: ಸಿಎಂಗೆ ಬೇಡಿಕೊಂಡ ಟೀಮ್ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್

Rishabh Pant: ಟೀಮ್ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ತಮ್ಮ ಸ್ವಂತ ರಾಜ್ಯ ಉತ್ತರಾಖಂಡದಲ್ಲಿ ಮನೆ ನಿರ್ಮಾಣಕ್ಕಾಗಿ ದೊಡ್ಡ ಸವಾಲು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಬಳಿ ಬೇಡಿಕೊಂಡಿದ್ದಾರೆ. ಇದು ಇದೀಗ ಕ್ರಿಕೆಟ್‌ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ತಮ್ಮ ಸ್ವಂತ ರಾಜ್ಯವಾದ ಉತ್ತರಾಖಂಡದಲ್ಲಿ ಆಸ್ತಿ ಖರೀದಿಸುವ ವಿಷಯದಲ್ಲಿ ರಿಷಭ್ ಪಂತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಾಗವನ್ನು ಖರೀದಿಸಲು ಕಳೆದ ಮೂರು ವರ್ಷಗಳಿಂದ ಅವರು ಹರಸಾಹಸ ಪಡುತ್ತಿದ್ದಾರೆ. ಅಲ್ಲಿನ ನಿಯಮಗಳು ಕಠಿಣವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಬೇರೆ ದಾರಿಯಿಲ್ಲದೆ ಅವರು ನೇರವಾಗಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಬಳಿ ಹೋಗಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಬೇಡಿಕೊಂಡಿದ್ದಾರೆ.

ರಿಷಭ್ ಪಂತ್ ಮನವಿಗೆ ಸ್ಪಂದಿಸಿದ ಸಿಎಂ

ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ತಮ್ಮ ತವರು ರಾಜ್ಯವಾದ ಉತ್ತರಾಖಂಡದಲ್ಲಿ ಜಾಗ ಖರೀದಿಸಲು ಅನುಕೂಲ ಮಾಡಿಕೊಡುವಂತೆ ಟ್ವಿಟ್‌ ಮೂಲಕ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಭಾವನಾತ್ಮಕ ಮನವಿ ಮಾಡಿಕೊಂಡಿದ್ದು, ಇದಕ್ಕೆ ಸಿಎಂ ಧನಾತ್ಮಕವಾಗಿ ಸ್ಪಂದಿಸಿ ಗಮನ ಸೆಳೆದಿದ್ದಾರೆ.

ರಿಷಬ್ ಪಂತ್ ಟ್ವಿಟ್‌ನಲ್ಲಿ ಏನಿದೆ?

ಸದ್ಯ ಭಾರತ ಕ್ರಿಕೆಟ್ ತಂಡದೊಂದಿಗೆ ವಿದೇಶದಲ್ಲಿದ್ದರೂ ಕೂಡ ತಮ್ಮ ಮಾತೃಭೂಮಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿರುವ 28 ವರ್ಷದ ರಿಷಬ್ ಪಂತ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸುದೀರ್ಘ ಪೋಸ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

'ನಾನು ಉತ್ತರಾಖಂಡದ ಸ್ಥಳೀಯ ನಿವಾಸಿಯಾಗಿದ್ದು, ದೆಹಲಿಯಿಂದ ನನ್ನ ವಾಸಸ್ಥಳವನ್ನು ಉತ್ತರಾಖಂಡಕ್ಕೆ ಬದಲಾಯಿಸಲು ಬಯಸುತ್ತಿದ್ದೇನೆ. ಕಳೆದ 3 ವರ್ಷಗಳಿಂದ ವಾಸಿಸಲು ಸೂಕ್ತವಾದ ಮತ್ತು ವಿಶಾಲವಾದ ಜಾಗವನ್ನು ಹುಡುಕುತ್ತಿದ್ದೇನೆ. ಆದರೆ ಇದುವರೆಗೆ ಯಾವುದೇ ಸರಿಯಾದ ಜಮೀನು ಸಿಕ್ಕಿಲ್ಲ. ನನಗಂತೂ ನನ್ನ ಉತ್ತರಾಖಂಡ ಎಂದರೆ ಅತ್ಯಂತ ಪ್ರೀತಿ. ದಯವಿಟ್ಟು ನನಗೆ ಜಾಗ ಪಡೆದುಕೊಳ್ಳಲು ಸಹಾಯ ಮಾಡಿ,' ಎಂದು ಟ್ವಿಟರ್‌ನಲ್ಲಿ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

'ಹಿಂದೆ ನಾನು ರಾಜ್ಯದ ಪ್ರಚಾರ ರಾಯಭಾರಿಯಾಗಿದ್ದಾಗ ಸಿಗಬೇಕಿದ್ದ ಜಮೀನಿನ ವಿಚಾರವೂ ಬಾಕಿಯಿದೆ. ಎಲ್ಲವನ್ನೂ ಬದಿಗಿಟ್ಟು ಹೇಳುವುದಾದರೆ, ನಾನು ನನ್ನ ಬೆಟ್ಟದ ಜನರ ನಡುವೆ ಮತ್ತೆ ನೆಲೆಸಲು ಬಯಸುತ್ತೇನೆ. ದಯವಿಟ್ಟು ಈ ವಿಷಯದ ಬಗ್ಗೆ ಗಮನ ಕೊಡಿ. ನಿಮ್ಮ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ,' ಎಂದು ಬರೆದುಕೊಂಡಿದ್ದರು.

'ಉಚಿತವಾಗಿ ಬೇಡ, ಹಣ ನೀಡಿ ಖರೀದಿಸುತ್ತೇನೆ'

ತಮ್ಮ ಮನವಿಯ ಕುರಿತು ಸ್ಪಷ್ಟನೆ ನೀಡಿದ ರಿಷಬ್ ಪಂತ್, ತಾವು ಸರ್ಕಾರದಿಂದ ಉಚಿತವಾಗಿ ಅಥವಾ ಉಡುಗೊರೆಯಾಗಿ ಜಾಗವನ್ನು ಕೇಳುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 'ಅಂತಾರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದಾಗ ಗೌರವ ಅಥವಾ ಉಡುಗೊರೆ ಸಿಗುವುದು ಸಂತೋಷದ ವಿಷಯವೇ. ಆದರೆ ಸರ್ಕಾರ ನಿಗದಿಪಡಿಸಿದ ದರದಲ್ಲೇ ನಾನು ಜಾಗವನ್ನು ಖರೀದಿಸಲು ಸಿದ್ಧನಿದ್ದೇನೆ. ನನ್ನ ತವರು ರಾಜ್ಯದಲ್ಲೇ ನನಗಾಗಿ ಮೊದಲ ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆ ಸಾಕು,' ಎಂದು ಮನವಿ ಮಾಡಿಕೊಂಡಿದ್ದಾರೆ.

ಪುಷ್ಕರ್ ಸಿಂಗ್ ಧಾಮಿ ನೀಡಿದ ಭರವಸೆ ಏನು?

ರಿಷಬ್ ಪಂತ್ ಅವರ ಈ ಮನವಿಗೆ ತಕ್ಷಣವೇ ಸ್ಪಂದಿಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಮೊದಲು ಪಂತ್ ಅವರ ಸಾಧನೆ ಮತ್ತು ದೇಶಾಭಿಮಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಆತ್ಮೀಯ ರಿಷಭ್, ನೀವು ಉತ್ತರಾಖಂಡದ ಹೆಮ್ಮೆ. ನಿಮ್ಮ ಅದ್ಭುತ ಕ್ರಿಕೆಟ್ ಸಾಧನೆಯ ಮೂಲಕ ಉತ್ತರಾಖಂಡದ ಹೆಸರನ್ನು ಜಗತ್ತಿನಾದ್ಯಂತ ಬೆಳಗಿಸಿದ್ದೀರಿ. ನಿಮ್ಮ ಮಾತೃಭೂಮಿಯ ಮೇಲಿನ ಪ್ರೀತಿ ಹಾಗೂ ಇಲ್ಲಿಗೆ ಮರಳಿ ಸೇವೆ ಸಲ್ಲಿಸಬೇಕೆಂಬ ನಿಮ್ಮ ಆಸೆ ನಿಜಕ್ಕೂ ಶ್ಲಾಘನೀಯ,' ಎಂದು ಹೇಳಿದ್ದಾರೆ

'ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಲಿದ್ದು, ಸರ್ಕಾರದ ನಿಯಮಗಳು ಮತ್ತು ಕಾಯ್ದೆಗಳ ಪ್ರಕಾರ ನಿಮಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲಿದ್ದಾರೆ,' ಎಂದು ಭರವಸೆ ನೀಡಿದ್ದಾರೆ.

ಉತ್ತರಾಖಂಡದ ರುರ್ಕಿ ಮೂಲದವರಾದ ರಿಷಭ್ ಪಂತ್, ಕ್ರಿಕೆಟ್ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ದೆಹಲಿಗೆ ತೆರಳಿ ತರಬೇತಿ ಪಡೆದಿದ್ದರು. ಪ್ರಸ್ತುತ ಅವರು ದೆಹಲಿಯಲ್ಲೇ ನೆಲೆಸಿದ್ದರು. ಆದರೂ ತಮ್ಮ ಮೂಲ ಜಾಗಕ್ಕೆ ಮರಳಿ ಅಲ್ಲೇ ಸ್ವಂತ ಮನೆ ನಿರ್ಮಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಸರ್ಕಾರದ ಈ ಆಶ್ವಾಸನೆಯಿಂದ ಪಂತ್ ಅವರ ಕನಸಿನ ಮನೆ ನಿರ್ಮಾಣದ ಹಾದಿ ಸುಗಮವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

team india cricketer property

team india cricketer property

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ