
18 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...
ದೇಶ, ವಿದೇಶ, ಕ್ರೀಡೆ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ....
ಭಾರತದ ಚುನಾವಣಾ ವ್ಯವಸ್ಥೆಯನ್ನು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದಲ್ಲಿ ಕಟ್ಟುನಿಟ್ಟಾದ ಚುನಾವಣಾ ಕಾನೂನುಗಳ ಅಗತ್ಯವನ್ನು ಪ್ರತಿಪಾದಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಚುನಾವಣಾ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಅಮೆರಿಕದ ಚುನಾವಣೆಗಳಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದಿರುವುದನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಶ್ನಿಸಿರುವುದನ್ನು ಅವರು ಸ್ಮರಿಸಿದ್ದಾರೆ.
ಬಿ. ನಾಗೇಂದ್ರ ವಜಾಕ್ಕೆ ಬಿಜೆಪಿ–ಜೆಡಿಎಸ್ ಪಟ್ಟು: ಸಂಧಾನ ಮಾತುಕತೆ ವಿಫಲ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ವಜಾಗೊಳಿಸಬೇಕೆಂದು ವಿಪಕ್ಷ ಸದಸ್ಯರು ಬಿಗಿಪಟ್ಟು ಹಿಡಿದ ಕಾರಣ ವಿಧಾನಮಂಡಲದ ಉಭಯ ಸದನಗಳ ಸೋಮವಾರದ ಕಲಾಪದ ಬಹುತೇಕ ಅವಧಿ ಬಲಿಯಾಯಿತು.
ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಿಗೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಿಗೆ ಅವಕಾಶ ಕಲ್ಪಿಸುವಂತೆ ಕೋರಿ, ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 59ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.
ರಾಮಮಂದಿರ ದೇಣಿಗೆ ಕಳವು ಪ್ರಕರಣ: ಟ್ರಸ್ಟ್‌ಗೆ ಅಂತಿಮ ವರದಿ ಸಲ್ಲಿಸಿದ ಎಸ್‌ಐಟಿ
ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದ್ದ ದೇಣಿಗೆ ಹಾಗೂ ಕಾಣಿಕೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಅಂತಿಮ ವರದಿಯನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಉತ್ತರ ಪ್ರದೇಶ ಗೃಹ ಇಲಾಖೆಯು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದೆ ಎಂದು ಸೋಮವಾರ ಅಧಿಕೃತ ಪ್ರಕಟಣೆ ತಿಳಿಸಿದೆ.
ಕ್ಯಾಂಪಸ್ ಟು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ: ಹೇಮಾಂಗ್ ರೋಚಕ ಹಾದಿ..
ನವದೆಹಲಿ: ಭಾರತದಾದ್ಯಂತ 'ಜೆನ್ ಝೀ’ ಪ್ರತಿಭಟನೆಗಳು ಮತ್ತು ಯುವಜನ ಚಳವಳಿಗಳು ರಾಷ್ಟ್ರೀಯ ಗಮನ ಸೆಳೆಯುತ್ತಿರುವ ಈ ಸಂದರ್ಭದಲ್ಲೇ ಬಿಜೆಪಿ ಒಂದು ಪ್ರಮುಖ ಸಾಂಸ್ಥಿಕ ಕ್ರಮವನ್ನು ಕೈಗೊಂಡಿದೆ. ಸಂಸದ ತೇಜಸ್ವಿ ಸೂರ್ಯ ಅವರ ಬದಲಿಗೆ ವಡೋದರಾ ಸಂಸದ ಹೇಮಾಂಗ್ ಜೋಶಿ ಅವರನ್ನು 'ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ'ದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪರೀಕ್ಷೆ ರದ್ದು: ಉಪವಾಸ ಸತ್ಯಾಗ್ರಹ ಹಿಂಪಡೆದ ಜಾರ್ಖಂಡ್ ವಿದ್ಯಾರ್ಥಿ ನಾಯಕ
ರಾಂಚಿ: ಜಾರ್ಖಂಡ್ ಸರ್ಕಾರ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿ ನಾಯಕ ದೇವೇಂದ್ರನಾಥ್ ಮಹತೊ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಕ್ಲಾರೆನ್ಸ್ ಶಾಲೆಯ 500 ವಿದ್ಯಾರ್ಥಿಗಳು, 21 ಸಿಬ್ಬಂದಿಗೆ ಜ್ವರ
ಬೆಂಗಳೂರು: ರಿಚರ್ಡ್ಸ್ ಟೌನ್‌ನ ಕ್ಲಾರೆನ್ಸ್ ಶಾಲೆಯ 500 ವಿದ್ಯಾರ್ಥಿಗಳು, 21 ಸಿಬ್ಬಂದಿಗೆ ಜ್ವರ ಕಾಣಿಸಿಕೊಂಡ ಕಾರಣ ಐದು ದಿನ ರಜೆ ಘೋಷಿಸಲಾಗಿದೆ. ‘ಕ್ಲಾರ್ಕ್ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಸೃಷ್ಟಿಯಾಗಿರುವ ಅನೈರ್ಮಲ್ಯವೇ ಇದಕ್ಕೆ ಕಾರಣ’ ಎಂದು ಶಾಲೆಯ ಆಡಳಿತ ಮಂಡಳಿ ಆರೋಪಿಸಿದೆ.
ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ
ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ. ಅನುಬಂಧ ಅವಾರ್ಡ್ಸ್, ಸೀರಿಯಲ್ ಸಂತೆ, ರಾಜ ರಾಣಿ, ಕ್ವಾಟ್ಲೆ ಕಿಚನ್, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಕನ್ನಡಿಗರ ನೆಚ್ಚಿನ ನಿರೂಪಕಿಯಲ್ಲಿ ಒಬ್ಬರಾಗಿದ್ದರು.
ಆಳ–ಅಗಲ: ಬಾಂಗ್ಲಾ ಪ್ರಧಾನಿ ಭೇಟಿ ಕಗ್ಗಂಟು
ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ಭಾರತಕ್ಕೆ ಭೇಟಿ ನೀಡುವ ವಿಚಾರವು ಈಗ ಗೊಂದಲದಲ್ಲಿ ಸಿಲುಕಿದೆ. ‘ಭಾರತದಲ್ಲಿ ಆಶ್ರಯ ಪಡೆದಿರುವ, ದೇಶದ ಸಾರ್ವಭೌಮತೆಗೆ ಸವಾಲೊಡ್ಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರ ಮಾಡಬೇಕು, ನಂತರವಷ್ಟೇ ಭೇಟಿ’ ಎಂದು ಬಾಂಗ್ಲಾದೇಶ ಪಟ್ಟು ಹಿಡಿದಿದೆ. ತಾರಿಕ್ ರೆಹಮಾನ್ ಮತ್ತು ನರೇಂದ್ರ ಮೋದಿ ಅವರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರೆ ಎಲ್ಲ ಅನುಮಾನ, ಗೊಂದಲಗಳೂ ಬಗೆಹರಿಯುತ್ತವೆ ಎಂದು ಭಾರತ ಆಶಾವಾದ ವ್ಯಕ್ತಪಡಿಸಿದೆ
ಸುತಾರ್, ಜಡೇಜ ಕೈಚಳಕ: ಕುಸಿದ ಲಂಕಾ
ಗಾಲ್: ಸೋಮವಾರ ದಿನದ ಬಹುತೇಕ ಅವಧಿಯಲ್ಲಿ ಆಕಾಶ ಶುಭ್ರವಾಗಿತ್ತು. ಮಳೆ ಬರುವ ಸೂಚನೆಯೂ ಇರಲಿಲ್ಲ. ಈ ವಾತಾವರಣದಲ್ಲಿ ಭಾರತದ ಬೌಲರ್‌ಗಳು ಮೆರೆದರು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 462 ರನ್ (ಭಾನುವಾರ 9ಕ್ಕೆ460) ಗಳಿಸಿ ಆಲೌಟ್ ಆಯಿತು.