ಕೆಜಿಎಫ್‌ನಲ್ಲಿ ಹಸು ಕಳವು ಪ್ರಕರಣ, ಇಬ್ಬರ ಬಂಧನ, 14 ಹಸುಗಳ ರಕ್ಷಣೆ

ಕೆಜಿಎಫ್‌ನಲ್ಲಿ ಹಸು ಕಳವು ಪ್ರಕರಣ, ಇಬ್ಬರ ಬಂಧನ, 14 ಹಸುಗಳ ರಕ್ಷಣೆ

ಕೆಜಿಎಫ್‌ನಲ್ಲಿ ಹಸು ಕಳವು ಪ್ರಕರಣ, ಇಬ್ಬರ ಬಂಧನ, 14 ಹಸುಗಳ ರಕ್ಷಣೆ

ಕೆಜಿಎಫ್‌: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಸೀಮೆ ಹಸುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 14 ಹಸುಗಳನ್ನು ರಕ್ಷಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ವೆಂಕಟೇಶ್ (29) ಹಾಗೂ ನಸೀಬ್ (29) ಬಂಧಿತರು. ತಾಲ್ಲೂಕಿನ ಪಾಪೇನಹಳ್ಳಿ, ಗೆನ್ನೇರಹಳ್ಳಿ ಮತ್ತು ಪಂತನಹಳ್ಳಿಯಲ್ಲಿ ಈಚೆಗೆ ಹಸುಗಳು ಕಳ್ಳತನವಾಗಿದ್ದವು. ಈ ಸಂಬಂಧ ಬೇತಮಂಗಲ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ತ್ಯಾಗರಾಜ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಆರೋಪಿಗಳು ಕರ್ನಾಟಕವಲ್ಲದೆ ಆಂಧ್ರಪ್ರದೇಶದ ವಿ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿ, ತಮಿಳುನಾಡಿನ ವ್ಯಾಪನಹಳ್ಳಿ ಹಾಗೂ ಭೂತನಗೆರೆ ಗ್ರಾಮಗಳಿಂದಲೂ ಹಸುಗಳನ್ನು ಕಳ್ಳತನ ಮಾಡಿದ್ದರು. ಈ ಕೃತ್ಯಕ್ಕೆ ಬಳಸಿದ್ದ ಟೆಂಪೊವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಬ್ ಇನ್‌ಸ್ಪೆಕ್ಟರ್‌ ತ್ಯಾಗರಾಜ್, ಸಿಬ್ಬಂದಿ ಅನಿಲ್ ಕುಮಾರ್, ರಾಘವೇಂದ್ರ ನಾಯಕ, ವೇಣುಗೋಪಾಲ್ ,ಶ್ರೀನಿವಾಸ್, ಕೃಷ್ಣಮೂರ್ತಿ , ರವಿಕುಮಾರ್ ಮತ್ತು ಮನೋಹರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-18-789337194

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ