ಈ ದಿನದ ಪ್ರಮುಖ 10 ಸುದ್ದಿಗಳು: 2026ರ ಆಗಸ್ಟ್‌ 31, ಸೋಮವಾರ

ಈ ದಿನದ ಪ್ರಮುಖ 10 ಸುದ್ದಿಗಳು: 2026ರ ಆಗಸ್ಟ್‌ 31, ಸೋಮವಾರ

ಈ ದಿನದ ಪ್ರಮುಖ 10 ಸುದ್ದಿಗಳು: 2026ರ ಆಗಸ್ಟ್‌ 31, ಸೋಮವಾರ

ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಗ್ರಾಮ ಪಂಚಾಯತಿ | ಇ-ಸ್ವತ್ತು ಸೇರಿ ಸೇವೆ, ಕಾಮಗಾರಿ ಕುರಿತ ದೂರು ದಾಖಲಿಸಲು ಆನ್‌ಲೈನ್ ವ್ಯವಸ್ಥೆ: ಈಶ್ವರ ಖಂಡ್ರೆ

ಬೆಂಗಳೂರು: ಗ್ರಾಮ ಪಂಚಾಯತಿ ಸೇವೆಗಳಿಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ದಾಖಲಿಸಲು ಗ್ರಾಮೀಣ ಭಾಗದ ಜನರಿಗೆ ಅನುವಾಗುವಂತೆ ಡ್ಯಾಷ್ ಬೋರ್ಡ್ ಆಧಾರಿತ ‘ದೂರು ದಾಖಲು- ಇತ್ಯರ್ಥಕ್ಕೆ ಆನ್ ಲೈನ್ ವ್ಯವಸ್ಥೆ’ ರೂಪಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಚಾಲಕ, ನಿರ್ವಾಹಕ ಬಂಧನ

ನವದೆಹಲಿ: ಚಲಿಸುತ್ತಿದ್ದ ಸ್ಲೀಪರ್‌ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್‌ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ: ಶ್ರೀಲಂಕಾದಿಂದ ಸ್ಥಳಾಂತರ?

ಕೊಲಂಬೊ (ಪಿಟಿಐ): 2027ರಲ್ಲಿ ನಡೆಯಬೇಕಿದ್ದ ಮೊಟ್ಟಮೊದಲ ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಶ್ರೀಲಂಕಾದಿಂದ ಅಂತರರಾಷ್ಟ್ರೀಯ ಕ್ರಿಕೆಟ‌ರ್ ಸಮಿತಿ (ಐಸಿಸಿ) ಹಿಂಪಡೆದಿದೆ. ಶ್ರೀಲಂಕಾ ಕ್ರಿಕೆಟ್ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪದ ಕಾರಣ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಪಾದಕೀಯ: ಜಿಬಿಎ ಮೇಲೆ ಎಸ್‌ಐಆರ್‌ ಕರಿನೆರಳು ನೈಜ ಮತದಾರರ ಹಕ್ಕು ರಕ್ಷಣೆಯಾಗಲಿ

ಬಹಳ ಕಾಲದಿಂದ ಮುಂದಕ್ಕೆ ಹೋಗುತ್ತಲೇ ಇರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ದ ಪಾಲಿಕೆಗಳಿಗೆ ನಡೆಯಬೇಕಾದ ಚುನಾವಣೆಗಳ ಮೇಲೆ ಮತ್ತೊಮ್ಮೆ ಅಪಾಯದ ತೂಗುಗತ್ತಿ ಆಡುತ್ತಿದೆ. ಹಿಂದಿನ ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಕೊನೆಗೊಂಡಿದ್ದು, ಕಳೆದ ಆರು ವರ್ಷಗಳಿಂದ ಚುನಾಯಿತ ಕಾರ್ಪೊರೇಟರ್‌ಗಳು ಇಲ್ಲದ ಸ್ಥಿತಿಯಲ್ಲಿ ಮಹಾನಗರ ಇದೆ.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ : ಕುಮಾರಸ್ವಾಮಿ – ಪ್ರಿಯಾಂಕ್‌ ಜಟಾಪಟಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ನಡುವೆ ಜಟಾಪಟಿ ಮುಂದುವರೆದಿದೆ. ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ‘ಕಾನೂನು ಮೀರಿ ನಾನು ಏನೂ ಮಾಡಿಲ್ಲ’ ಎಂದರು.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಶಿಕ್ಷಿಸುವುದು ಅಸಾಂವಿಧಾನಿಕ: ನ್ಯಾ. ಉಜ್ಜಲ್‌

ನವದೆಹಲಿ (ಪಿಟಿಐ): ‘ವಿದ್ಯಾರ್ಥಿಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಅಥವಾ ಪ್ರಶ್ನೆಗಳನ್ನು ಕೇಳಿದಾಗ, ಅವರಿಗೆ ದಂಡನಾತ್ಮಕ ಕ್ರಮದ ಬೆದರಿಕೆ ಹಾಕಬಾರದು’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌ ಭಾನುವಾರ ಹೇಳಿದರು.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನೇಪಾಳ ಪ್ರವಾಹ | ಸಾವಿನ ಸಂಖ್ಯೆ 768ಕ್ಕೆ ಏರಿಕೆ: ಮುಂದುವರಿದ ಶೋಧ ಕಾರ್ಯಾಚರಣೆ

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಉಂಟಾದ ದಿಢೀರ್‌ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 903ಕ್ಕೆ ಏರಿಕೆಯಾಗಿದೆ. 2,500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಬಂಧನ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್‌ ಅವರನ್ನು ಸಿಐಡಿ ಭಾನುವಾರ ಬಂಧಿಸಿದೆ.

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಆಳ ಅಗಲ | ಹಿಮಾಲಯ: ಮತ್ತೆ ಮತ್ತೆ ವಿಪತ್ತು

ನೇ‍ಪಾಳದಲ್ಲಿ ಹಿಂದೆಂದೂ ಕಾಣದಂಥ ರೀತಿಯ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಕಲ್ಲು ಮಣ್ಣು ಮಿಶ್ರಿತ ಹಿಮಬಂಡೆ ಕುಸಿದು ಕೆಸರಿನ ಹಠಾತ್‌ ಪ್ರವಾಹವೇ ಉಂಟಾಗಿದೆ. ಸತ್ತವರ ಮತ್ತು ಕಣ್ಮರೆಯಾದವರ ನಿಖರ ಸಂಖ್ಯೆಯನ್ನು ತಿಳಿಯುವುದೂ ಕಷ್ಟವಾಗಿದೆ. ಅನಾಹುತಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ತಜ್ಞರು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಬೃಹತ್ ಹಿಮಬಂಡೆ ಮತ್ತು ಅದಕ್ಕೆ ಹೊಂದಿಕೊಂಡ ಪರ್ವತ ಭಾರಿ ಎತ್ತರದಿಂದ ಕೆಳಕ್ಕೆ ಕುಸಿದಿದ್ದೇ ದಿಢೀರ್ ಪ್ರವಾಹಕ್ಕೆ ಕಾರಣ ಎನ್ನಲಾಗುತ್ತಿದೆ. ನೇಪಾಳದಲ್ಲಿ ಮತ್ತು ಹಿಮಾಲಯದ ವ್ಯಾಪ್ತಿಯಲ್ಲಿ ಮುಂದೆಯೂ ಇಂಥ ಪ್ರವಾಹಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದುಲೀಪ್ ಟ್ರೋಫಿ: ವಿದ್ವತ್ ವೇಗದ ಸವಾಲಿಗೆ ಕುಸಿದ ಉತ್ತರ ವಲಯ

ಬೆಂಗಳೂರು: ಭಾನುವಾರ ಬೆಳಿಗ್ಗೆ ದಕ್ಷಿಣ ವಲಯ ತಂಡವು ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಾಗ ಅಚ್ಚರಿ ಮೂಡಿತ್ತು. ಏಕೆಂದರೆ; ಅನುಭವಿ ಬ್ಯಾಟರ್ ಮತ್ತು ಹೋದ ವರ್ಷದ ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್‌ ಹೊಳೆ (699) ಹರಿಸಿದ್ದ ಕರುಣ್ ನಾಯರ್ ಹನ್ನೊಂದರ ಬಳಗದಲ್ಲಿ ಇರಲಿಲ್ಲ. 

ಪೂರ್ತಿಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ