ಈ ದಿನದ ಪ್ರಮುಖ 10 ಸುದ್ದಿಗಳು: 2026ರ ಆಗಸ್ಟ್‌ 22, ಶನಿವಾರ

ಈ ದಿನದ ಪ್ರಮುಖ 10 ಸುದ್ದಿಗಳು: 2026ರ ಆಗಸ್ಟ್‌ 22, ಶನಿವಾರ

ಈ ದಿನದ ಪ್ರಮುಖ 10 ಸುದ್ದಿಗಳು: 2026ರ ಆಗಸ್ಟ್‌ 22, ಶನಿವಾರ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ.

ದೇವದುರ್ಗದಲ್ಲಿ ನಿಲ್ಲದ ಅಕ್ರಮ ಮರಳು ವ್ಯವಹಾರ

ದೇವದುರ್ಗ: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಾದ್ಯಂತ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಸೋತಿದೆ. ಜಿಲ್ಲಾ ಮತ್ತು ತಾಲ್ಲೂಕು ಮರಳು ಸಮಿತಿಯ ಸದಸ್ಯ ಇಲಾಖೆಗಳ ಸಮನ್ವಯ ಕೊರತೆಯಿಂದ ಅಕ್ರಮ ತಡಿಯುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ದಂದೆ ಕೋರರು ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಾಗಣೆಯಲ್ಲಿ ನಿರತರಾಗಿದ್ದಾರೆ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಜೈಲಿನಿಂದಲೇ ಹಲವರಿಗೆ ಪ್ರಜ್ವಲ್‌ ರೇವಣ್ಣ ಕರೆ: ಪೋಷಕರ ಜತೆ ನಿರಂತರ ಸಂಪರ್ಕ

ಬೆಂಗಳೂರು: ಅತ್ಯಾಚಾರ ಪ್ರಕರಣದ ಸಜಾ ಕೈದಿ ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿದ್ದರೂ ತಮ್ಮ ತಂದೆ, ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಹಾಗೂ ಸ್ನೇಹಿತರ ಜತೆಗೆ ನಿರಂತರವಾಗಿ ಮೊಬೈಲ್‌ ಫೋನ್‌ ಮೂಲಕ ಸಂಭಾಷಣೆ ನಡೆಸಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ವಿಶ್ವಕಪ್ ಹಾಕಿ: ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ

ಆ್ಯಮ್‌ಸ್ಟೆಲ್ವೀನ್: ಸುಮಾರು ಅರ್ಧ ಶತಮಾನದ ಪ್ರಶಸ್ತಿ ಬರವನ್ನು ನೀಗಿಸುವ ಛಲದಲ್ಲಿರುವ ಭಾರತ ಹಾಕಿ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಈಗ ಕಠಿಣ ಸವಾಲು ಎದುರಾಗಿದೆ.  

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಹಣ ನೀಡದೆ ಕೇಂದ್ರ ಸರ್ಕಾರದಿಂದ ತಾರತಮ್ಯ: ಆಡಳಿತ ಪಕ್ಷದ ಸದಸ್ಯರ ವಾಗ್ದಾಳಿ

ಬೆಂಗಳೂರು: ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರೆ, ಗದ್ದಲದ ಮಧ್ಯೆಯೇ ನಡೆದ ಕಲಾಪದಲ್ಲಿ ಆಡಳಿತ ಪಕ್ಷದ ಸದಸ್ಯರು ಮತ್ತು ಸಚಿವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಸಂಪಾದಕೀಯ | PM ಕೇರ್ಸ್‌: ಮುಚ್ಚುಮರೆ ಸಲ್ಲದು, ಸಾರ್ವಜನಿಕ ವಿಶ್ವಾಸಾರ್ಹತೆ ಮುಖ್ಯ

ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವದ ಕೊರತೆ ಢಾಳಾಗಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ‘ಪಿಎಂ ಕೇರ್ಸ್‌’ ನಿಧಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ವಿಶ್ಲೇಷಣೆ: ಚಳವಳಿ ಬೆಳಕಲ್ಲಿ ಶಿಕ್ಷಣ–ಉದ್ಯೋಗ

ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿ ಚಳವಳಿ ನಮ್ಮೆದುರಿಗೆ ಇರಿಸಿದೆ. ಆ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಕಂಡುಕೊಳ್ಳದೆ ಹೋದರೆ ಭವಿಷ್ಯದ ತಲೆಮಾರುಗಳು ನಮ್ಮ ಹೊಣೆಗೇಡಿತನವನ್ನು ಕ್ಷಮಿಸುವುದಿಲ್ಲ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ನುಡಿ ನಮನ | ಕನ್ನಡದ ‘ಸಾಹುಕಾರ್ತಿ’ ಈ ಜಾನಕಿ

1931ರ ಡಿಸೆಂಬರ್ 12ರಂದು ತೇಕುಮಲ್ಲ ವೆಂಕೋಜಿರಾವ್ ಮತ್ತು ಶಚಿದೇವಿ ಜಾನಕಿಯವರಿಗೆ ಜನಿಸಿದ ಸಾಹುಕಾರ್‌ ಜಾನಕಿ ಅವರ ಸಹೋದರಿ ಮತ್ತೊಬ್ಬ ನಟಿಯಾಗಿದ್ದ ಕೃಷ್ಣಕುಮಾರಿ. ಆ ಕಾಲದಲ್ಲೇ ಅವರ ತಂದೆ ಇಂಗ್ಲೆಂಡ್‌ನಲ್ಲಿದ್ದು ಬಂದವರು. ಸಮುದ್ರ ದಾಟಿದ್ದರು ಎನ್ನುವ ಕಾರಣಕ್ಕೆ ಹೆಚ್ಚುಕಮ್ಮಿ ಗುಡಿ-ದೇವಸ್ಥಾನಗಳಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬ ಅದು. ಜಾನಕಿಯವರು ಸಿನಿಮಾಕ್ಕೆ ಬಂದದ್ದು ಒಂದು ಆಯ್ಕೆಯಲ್ಲ, ಅನಿವಾರ್ಯ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಜಂತರ್‌ ಮಂತರ್‌ನಲ್ಲಿ ಮೀಸಲಾತಿ ಹಠಾವೋ ಆಂದೋಲನ: ಹಲವರು ಪೊಲೀಸ್ ವಶಕ್ಕೆ

ನವದೆಹಲಿ: ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಿ, ಆದಾಯ ಆಧಾರಿತ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶುಕ್ರವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಕನ್ನಡ ಅಧ್ಯಯನ ಕೇಂದ್ರಕ್ಕೆ ಹೊಸ ರೂಪ ನೀಡಿದ ಜಿ.ಎಸ್. ಶಿವರುದ್ರಪ್ಪ: ಒಡನಾಡಿಗಳ ಮನದಾಳದ ಮಾತುಗಳಿವು

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿದ ಜಿ.ಎಸ್. ಶಿವರುದ್ರಪ್ಪ ಅವರು, ಆ ವಿಭಾಗವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದರು. ಇದರಿಂದಾಗಿ ಹಲವು ಬಗೆಯ ವಿಚಾರಧಾರೆಗಳು ರೂಪುಗೊಂಡವು..

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಮೇಕೆದಾಟಿನಿಂದ ಕುಡಿಯಲು 5 ಟಿಎಂಸಿ ಉಳಿಸಿ, ಬಾಕಿ ಎಲ್ಲವೂ ತಮಿಳುನಾಡಿಗೆ: ಡಿಕೆಶಿ

ಮಹಾಬಲಿಪುರಂ: ಮೇಕೆದಾಟು ಯೋಜನೆಯಿಂದ ತಮಿಳುನಾಡು ಹಾಗೂ ಪುದುಚೇರಿಯ ಹಿತಾಸಕ್ತಿಯನ್ನು ರಕ್ಷಿಸಲು ಬದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಹೇಳಿದ್ದಾಗಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ