WATCH : ಇಟಲಿ ರೆಸ್ಟೋರೆಂಟ್ ನಲ್ಲಿ ಭಾರತೀಯ ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿದ ಬಾಂಗ್ಲಾದೇಶಿ ವೇಟರ್!

ದೆಹಲಿ.ಜೂನ್.24: ಭಾರತ ಮತ್ತು ಭಾರತೀಯ ಗ್ರಾಹಕರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ ಇಟಲಿಯ ರೆಸ್ಟೋರೆಂಟ್ ನ ವೇಟರ್ ಒಬ್ಬನನ್ನು ಭಾರತೀಯ ಮಹಿಳಾ ಪ್ರವಾಸಿಗರ ತಂಡವೊಂದು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಮಹಿಳೆಯರು ಧೈರ್ಯದಿಂದ ವೇಟರ್ ನನ್ನು ಬೆವರಿಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಭಾರತೀಯರ ಪ್ರಶಂಸೆಗೆ ಪಾತ್ರವಾಗಿದೆ.

ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಟಲಿಯ ರೆಸ್ಟೋರೆಂಟ್ವೊಂದಕ್ಕೆ ಭೇಟಿ ನೀಡಿದ್ದ ಭಾರತೀಯ ಮಹಿಳೆಯರ ಗುಂಪಿನೊಂದಿಗೆ ಅಲ್ಲಿನ ವೇಟರ್ ಉದ್ಧಟತನದಿಂದ ವರ್ತಿಸಿದ್ದಾನೆ. ಮಾತಿನ ಚಕಮಕಿ ನಡೆಯುವಾಗ ಆತ ಭಾರತದ ಬಗ್ಗೆ ಅತ್ಯಂತ ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ಪದಗಳನ್ನು ಬಳಸಿದ್ದಲ್ಲದೆ, “ನೀವು ಫ… ಇಂಡಿಯಾದಿಂದ ಬಂದವರು” (You Are From F***ing India) ಎಂದು ಜನಾಂಗೀಯ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.

ವೇಟರ್ ನ ಈ ನಿಂದನೆಯನ್ನು ಸಹಿಸದ ಮಹಿಳೆಯರು, ಅಲ್ಲಿಂದ ಸುಮ್ಮನೆ ಹೊರಟುಹೋಗದೆ ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ದೇಶದ ಬಗ್ಗೆ ಈ ರೀತಿ ಅವಮಾನಕಾರಿಯಾಗಿ ಮಾತನಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ಸಂಪೂರ್ಣ ಹಿನ್ನೆಲೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ, ಮಹಿಳೆಯರು ತಮ್ಮ ದೇಶದ ಗೌರವಕ್ಕಾಗಿ ಪಟ್ಟು ಹಿಡಿದು ಆತನಿಂದ ಕ್ಷಮೆಯಾಚನೆಗೆ ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ವಿವಾದ ತಾರಕಕ್ಕೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ವೇಟರ್ ತಣ್ಣಗಾಗಿದ್ದಾನೆ. ಪೊಲೀಸರ ಸಮ್ಮುಖದಲ್ಲೂ ಮಹಿಳೆಯರು ಆತ ಭಾರತ ದೇಶಕ್ಕೆ ಅಪಮಾನ ಮಾಡಿದ್ದಕ್ಕಾಗಿ ನಿರ್ದಿಷ್ಟವಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ವೇಟರ್, “ನಾನು ಭಾರತವನ್ನು ನಿಂದಿಸಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆ” (I’m sorry for abusing India) ಎಂದು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ. ಇದರೊಂದಿಗೆ ವಿವಾದ ಸದ್ಯಕ್ಕೆ ತಿಳಿಯಾಗಿದೆ.



source https://suddione.com/bangladeshi-waiter-racially-abused-indian-women-in-italian-restaurant/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ