AI ಎಫೆಕ್ಟ್‌ಗೆ 21 ಸಾವಿರ ಉದ್ಯೋಗಿಗಳ ಬಲಿ! ಒರಾಕಲ್‌ನಿಂದ ಭಾರೀ ಉದ್ಯೋಗ ಕಡಿತ

ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ವೇಗವಾಗಿ ವಿಸ್ತರಿಸುತ್ತಿರುವ ಬೆನ್ನಲ್ಲೇ ಉದ್ಯೋಗ ಭದ್ರತೆ ಕುರಿತ ಆತಂಕವೂ ಹೆಚ್ಚುತ್ತಿದೆ. ಈ ಆತಂಕಕ್ಕೆ ಪುಷ್ಟಿ ನೀಡುವಂತೆ ವಿಶ್ವದ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳಲ್ಲೊಂದಾದ ಒರಾಕಲ್ ಕಳೆದ ಒಂದು ವರ್ಷದಲ್ಲಿ ಸುಮಾರು 21 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ.

ಕಂಪನಿಯ ಇತ್ತೀಚಿನ ವಾರ್ಷಿಕ ಹಣಕಾಸು ವರದಿಯ ಪ್ರಕಾರ, ಉದ್ಯೋಗಿಗಳ ಸಂಖ್ಯೆಯಲ್ಲಿನ ಈ ಭಾರೀ ಕಡಿತಕ್ಕೆ AI ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯೇ ಪ್ರಮುಖ ಕಾರಣವಾಗಿದೆ. ಕಂಪನಿಯ ಹಲವು ಕಾರ್ಯಗಳನ್ನು ಈಗ ಕೃತಕ ಬುದ್ಧಿಮತ್ತೆ ಮೂಲಕ ನಿರ್ವಹಿಸಲಾಗುತ್ತಿದ್ದು, ಇದರ ಪರಿಣಾಮವಾಗಿ ಮಾನವ ಸಂಪನ್ಮೂಲದ ಅವಶ್ಯಕತೆ ಕಡಿಮೆಯಾಗಿದೆ ಎಂದು ಒರಾಕಲ್ ಸ್ಪಷ್ಟಪಡಿಸಿದೆ.

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಕಂಪನಿಯಲ್ಲಿ ಜಾಗತಿಕ ಮಟ್ಟದಲ್ಲಿ 1.62 ಲಕ್ಷ ಉದ್ಯೋಗಿಗಳಿದ್ದರೆ, ಇದೀಗ ಆ ಸಂಖ್ಯೆ 1.41 ಲಕ್ಷಕ್ಕೆ ಇಳಿದಿದೆ. ಉದ್ಯೋಗ ಕಡಿತ ಹಾಗೂ ಪುನರ್‌ರಚನೆ ಪ್ರಕ್ರಿಯೆಗಾಗಿ ಕಂಪನಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ವರದಿಯಾಗಿದೆ.ಒರಾಕಲ್ ಪ್ರಸ್ತುತ Generative AI ಮತ್ತು Cloud Computing ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ. OpenAI ಸೇರಿದಂತೆ ಹಲವು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗಾಗಿ ಆಧುನಿಕ AI ಡೇಟಾ ಸೆಂಟರ್‌ಗಳನ್ನು ನಿರ್ಮಿಸುತ್ತಿದ್ದು, ಈ ಯೋಜನೆಗಳಿಗೆ ಅಗತ್ಯವಿರುವ ಹೂಡಿಕೆಯನ್ನು ಸರಿದೂಗಿಸಲು ವೆಚ್ಚ ಕಡಿತ ಕ್ರಮಗಳನ್ನು ಕೈಗೊಂಡಿದೆ.

ವಿಶೇಷವಾಗಿ ಆರೋಗ್ಯ ಸೇವಾ ತಂತ್ರಜ್ಞಾನ ವಿಭಾಗದಲ್ಲಿ ಹೆಚ್ಚಿನ ಉದ್ಯೋಗ ಕಡಿತ ನಡೆದಿರುವುದು ಗಮನಾರ್ಹ. 2022ರಲ್ಲಿ ಸೆರ್ನರ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಹೆಚ್ಚಾಗಿದ್ದ ಉದ್ಯೋಗಿಗಳ ಸಂಖ್ಯೆ ಇದೀಗ ಮತ್ತೆ ಕುಸಿದಿದೆ.ಒರಾಕಲ್ ಮಾತ್ರವಲ್ಲದೆ, ಗೂಗಲ್, ಮೈಕ್ರೋಸಾಫ್ಟ್, ಮೆಟಾ ಹಾಗೂ ಅಮೆಜಾನ್‌ ಸೇರಿದಂತೆ ಹಲವು ಜಾಗತಿಕ ಟೆಕ್ ಕಂಪನಿಗಳು ಕೂಡ AI ಕೇಂದ್ರಿತ ಕಾರ್ಯತಂತ್ರದತ್ತ ಸಾಗುತ್ತಿದ್ದು, ಸಾಂಪ್ರದಾಯಿಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. AI ಕ್ರಾಂತಿ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದರೂ, ಉದ್ಯೋಗ ಮಾರುಕಟ್ಟೆಗೆ ಹೊಸ ಸವಾಲುಗಳನ್ನು ತಂದೊಡ್ಡುತ್ತಿದೆ.



source https://suddione.com/21-thousand-employees-lost-to-ai-effect-massive-job-cuts-from-oracle/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ