ಮಹಿಳಾ ಮೀಸಲಾತಿ ಮಸೂದೆಗೆ ಸೋಲು : ರಾತ್ರಿ ಭಾಷಣ ಮಾಡಲಿರುವ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರು ಭಾಷಣ ಮಾಡ್ತಾರೆ ಅಂದ್ರೆ ಎಲ್ಲರಿಗೂ ಕುತೂಹಲವಿರುತ್ತದೆ. ಯಾಕಂದ್ರೆ ಬಹಳ ಮುಖ್ಯವಾದ ವಿಚಾರ ಇದ್ದಾಗ ಮಾತ್ರ ಪ್ರಧಾನಿ ಮೋದಿ ಅವರು ಭಾಷಣ ಮಾಡುತ್ತಾರೆ. ಇಂದು ಕೂಡ ಮೋದಿಯವರ ಭಾಷಣದ‌ ಮೇಲೆ‌ ಸಾಕಷ್ಟು ಕುತೂಹಲವಿದೆ. ದೇಶದಲ್ಲಿ ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಮಸೂದೆ ಲೋಕಸಭೆಯಲ್ಲಿ ಸೋತಿರುವ ಹಿನ್ನಲೆಯಲ್ಲಿ ಮೋದಿ ಆವರು ಇಂದು ರಾತ್ರಿ 8.30ಕ್ಕೆ‌ ದೇಶವನ್ನುದ್ದೇಶಿಸಿ ಮಾತನ್ನಾಡಲಿದ್ದಾರೆ.

ಮಹಿಳಾ ಮೀಸಲಾತಿ ಅನುಷ್ಠಾನದ ವಿಷಯ ಹಾಗೂ ವಿರೋಧ ಪಕ್ಷಗಳ ನಡೆಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. 2011 ಜನಗಣತಿಯ ಆಧಾರದ ಮೇಲೆ ನಡೆದ ಸೀಮಾ ನಿರ್ಣಯದ ನಂತರ 2029ರ ಸಂಸತ್ ಚುನಾವಣೆಗೆ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸಲು ಈ ಮಸೂದೆಯಡಿಯಲ್ಲಿ ಲೋಕಸಭಾ ಸ್ಥಾನಗಳನ್ನ ಪ್ರಸ್ತುತ 543 ರಿಂದ 816ಕ್ಕೆ ಹೆಚ್ಚಿಸಬೇಕಾಗಿತ್ತು. ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿತ್ತು. ಆದರೆ 230 ಸಂಸದರು ಅದರ ವಿರುದ್ಧ ಮತ ಚಲಾಯಿಸಿದ್ದಾರೆ.

528 ಸದಸ್ಯರಲ್ಲಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಹೀಗಾಗಿ ಈ ಮಸೂದೆ ಅಂಗೀಕಾರವಾಗಲಿಲ್ಲ. ಕಾಂಗ್ರೆಸ್ ನವರು ವಿರೋಧಿಸಿದ್ದಾರೆ ಎಂದು ಬಿಜೆಪಿಗರು ಗರಂ ಆಗಿದ್ದಾರೆ. ಮುಂದೆ ಮಹಿಳೆಯರು ನಿಮಗೆ ಸರಿಯಾದ ಪಾಠ‌ ಕಲಿಸ್ತಾರೆ ಎಂದು ಕೂಡ ಬಿಜೆಪಿ ನಾಯಕರು ಕಾಂಗ್ರೆಸ್ ನವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಮೋದಿ ಅವರು ಏನು ಮಾತನ್ನಾಡಬಹುದು ಎಂಬ ಕುತೂಹಲವೂ ಜಗತ್ತಿಗೆ ಇದೆ.



source https://suddione.com/womens-reservation-bill-defeated-modi-to-deliver-speech-tonight/

Post a Comment

0 Comments