ಮಹಿಳಾ ರಿಸರ್ವೇಷನ್ : ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾದ ಬಿಜೆಪಿ..!

ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡೋದಕ್ಕೆ ಬಿಜೆಪಿ ಸಿದ್ಧವಾಗಿದೆ. ಎಲ್ಲಾ ಕಡೆ ಹೋರಾಟಕ್ಕೆ ಕರೆ ನೀಡಿದೆ. ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ ಹೋರಾಟ ನಡೆಯಲಿದೆ. ಕಾಂಗ್ರೆಸ್ ವಿರುದ್ಧ ಪೋಸ್ಟರ್ ಗಳನ್ನು ರಿಲೀಸ್ ಮಾಡಿದೆ.

ಇವರು ಮಹಿಳೆಯರ ವಿರೋಧಿಗಳು, ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಈಗಾಗಲೇ ರಾಮನಗರದಲ್ಲಿ ಹೋರಾಟ ನಡೆದಿದೆ. ಕಾಂಗ್ರೆಸ್ ನ ಈ ಮನಸ್ಥಿತಿ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳಾ‌ಮೀಸಲಾತಿ ವಿಧೇಯಕ ನಿನ್ನೆ ಫೇಲ್ ಆಗಿದೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳ, ಮಹಿಳಾ ಕಾರ್ಯಕರ್ತೆಯರ ಅಪೇಕ್ಷೆ ಇತ್ತು. ಮಹಿಳಾ ವಿಧೇಯಕ ಪಾಸ್ ಆಗ್ಬೇಕು ಎಂಬ ಬಿಲ್ ಪಾಸ್ ಆಗಬೇಕೆಂಬ ಆದೆ ಎಲ್ಲರಿಗೂ ಇತ್ತು. ನಮಗೊಂದು ಆಸೆ ಇತ್ತು. ಹೆಚ್ಚು ಸೀಟುಗಳು ಆಗಬೇಕು, ಪುರುಷರಿಗೂ ಅನ್ಯಾಯ ಆಗಬಾರದು, ಮಹಿಳೆಯರಿಗೂ ಸೀಟುಗಳು ಸಿಗಬೇಕು ಅಂತ.

ಈ ಬಿಲ್ ಗೆ ಮೆಜಾರಿಟಿ ಸಿಗಲಿಲ್ಲ. ಕಾಯ್ತಾ ಇದ್ದಂತ ಮಹಿಳೆಯರಿಗೆ ದುಃಖ ಆಗಿದೆ. ಮುಂದಿನ ಬಾರಿ ಮೋದಿ ಅವರ ಸರ್ಕಾರದಲ್ಲಿಯೇ ಈ ಮೀಸಲಾತಿ ಬರುತ್ತದೆ. ದೇಶದ ಜನ ರಾಹುಲ್ ಗಾಂಧಿಯವರನ್ನು ಕ್ಷಮಿಸೋಲ್ಲ. ದಕ್ಷಿಣ ಭಾರತ, ಉತ್ತರ ಭಾರತ ಅಂತ ಕಥೆ ಹೇಳಿಕೊಂಡು, ಇಂಡಿಯನ್ ಅಲಯನ್ಸ್ ಅನ್ಯಾಯ ಮಾಡ್ತಾ ಇದ್ದಾರೆ. ಇದನ್ನ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ನ್ಯಾಯ ಸಿಗುವಂತ ಕೆಲಸ ಆಗುತ್ತೆ ಎಂಬ ನಂಬಿಕೆ ಇದೆ ಎಂದಿದ್ದಾರೆ.



source https://suddione.com/womens-reservation-bjp-ready-for-statewide-protests-against-congress/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ