ನವದೆಹಲಿ: ಮಕ್ಕಳ ಕುರಿತಾದ ಅಶ್ಲೀಲ ಚಿತ್ರ ಮತ್ತು ಕಂಟೆಂಟ್ ನ್ನು ಒಂದು ವಾರದೊಳಗೆ ಅಳಿಸಿ ಹಾಕಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಟ್ವಿಟರ್ ಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಟ್ವಿಟರ್ ಎಂ ಡಿ ಗೆ ಈ ಸಂಬಂಧ ಮಹಿಳಾ ಆಯೋಗ ನಿರ್ದೇಶನ ನೀಡಿದೆ.
ಟ್ವಿಟರ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.
ಕಳೆದ ಹಲವು ದಿನಗಳಿಂದ ಟ್ವಿಟರ್ ವಿರುದ್ಧ ದಾಖಲಾಗುತ್ತಿರುವ ಮೊಕದ್ದಮೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರದ ನೂತನ ಐ ಟಿ ಕಾಯ್ದೆ ಜಾರಿಗೊಳಿಸಲು ಟ್ವಿಟರ್ ಅಪಸ್ವರ ಕೂಡ ಎತ್ತಿದೆ
