SIR ಅಕ್ರಮದಲ್ಲಿ ಮೋದಿ ಎ1, ಶಾ ಎ2, ಜ್ಞಾನೇಶ್‌ಕುಮಾರ್‌ ಎ3: ಪ್ರಿಯಾಂಕ್ ಖರ್ಗೆ

SIR ಅಕ್ರಮದಲ್ಲಿ ಮೋದಿ ಎ1, ಶಾ ಎ2, ಜ್ಞಾನೇಶ್‌ಕುಮಾರ್‌ ಎ3: ಪ್ರಿಯಾಂಕ್ ಖರ್ಗೆ

SIR ಅಕ್ರಮದಲ್ಲಿ ಮೋದಿ ಎ1, ಶಾ ಎ2, ಜ್ಞಾನೇಶ್‌ಕುಮಾರ್‌ ಎ3: ಪ್ರಿಯಾಂಕ್ ಖರ್ಗೆ

ಕಲಬುರಗಿ: ‘ಎಸ್‌ಐಆರ್‌ ಅಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಆರೋಪಿ, ಅಮಿತ್‌ ಶಾ 2ನೇ ಆರೋಪಿ ಹಾಗೂ ಜ್ಞಾನೇಶ್‌ಕುಮಾರ್‌ 3ನೇ ಆರೋಪಿ ಆಗಿದ್ದಾರೆ. ಚುನಾವಣಾ ಆಯೋಗದ ಅಕ್ರಮದಲ್ಲಿ ಜ್ಞಾನೇಶ್‌ಕುಮಾರ್‌ ಮೊದಲ ಆರೋಪಿಯಾಗಿದ್ದಾರೆ’ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿನ ನ್ಯೂನತೆಗಳ ಕುರಿತು ಕಾಂಗ್ರೆಸ್‌ ವರಿಷ್ಠರಾದ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಬೇಕಾದದ್ದು ಕೇಂದ್ರ ಚುನಾವನಾ ಆಯುಕ್ತ ಜ್ಞಾನೇಶ್‌ ಕುಮಾರ್‌. ಆದರೆ, ಬಿಜೆಪಿ ಏಕೆ ಪ್ರತಿಕ್ರಿಯಿಸುತ್ತಿದೆ? ಅವರೇನು ಚುನಾವಣಾ ಆಯೋಗದ ವಕ್ತಾರರಾಗಿದ್ದಾರಾ? ಆಯೋಗವನ್ನು ಗುತ್ತಿಗೆಗೆ ಪಡೆದಿದ್ದಾರಾ’ ಎಂದು ಪ್ರಶ್ನಿಸಿದರು.

‘ಎಸ್‌ಐಆರ್‌ ಕುರಿತು ಕಾಂಗ್ರೆಸ್‌ ಏನೇ ಪ್ರಶ್ನೆ ಮಾಡಿದರೂ ಮುಖ್ಯ ಚುನಾವನಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಮಾಧ್ಯಮಗಳ ಮುಂದೆ ಬಂದು ಸಮಜಾಯಿಷಿ ನೀಡುತ್ತಿದ್ದರು. ಕಳೆದ ಎರಡು ತಿಂಗಳಿಂದ ಅವರು ಎಲ್ಲಿ ಮಾಯವಾಗಿದ್ದಾರೆ’ ಎಂದು ಕೇಳಿದರು.‌

‘ಎಸ್‌ಐಆರ್‌ ಭಾಗವಾಗಿ 13.2 ಕೋಟಿ ಮತದಾರರನ್ನು ವಿನಾಕಾರಣ ಮತದಾರರಪಟ್ಟಿಯಿಂದ ತೆಗೆದಿರುವುದು ನಿಜ. ಶೇ15ರಷ್ಟು ಮತದಾರರ ಹೆಸರು ತಪ್ಪಾಗಿ ಡಿಲೀಟ್‌ ಮಾಡಿರುವುದನ್ನು ಕಾಂಗ್ರೆಸ್ ತೋರಿಸಿದೆ. ಇದನ್ನು ಮಾಡಿಸಿದ್ದು ಯಾರು? ಆಗಿದ್ದು ಹೇಗೆ ಎಂದು ಕೇಳುವುದು ತಪ್ಪಾ? ಫಾರಂ–6 ತಿದ್ದುಪಡಿ ಪ್ರಕ್ರಿಯೆಯನ್ನು ಯಾರನ್ನು ಕೇಳಿ ಮಾಡಿದ್ದೀರಿ? ಇಬ್ಬರು ಚುನಾವಣಾ ಆಯುಕ್ತರ ಲಿಖಿತ ಆಕ್ಷೇಪಗಳನ್ನು ಬದಿಗಿರಿಸಿ ಜ್ಞಾನೇಶ್‌ಕುಮಾರ್‌ ಯಾರ ಆದೇಶದಂತೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡರು? ಇದನ್ನು ಕೇಳಬಾರದೇ? ಇವೆಲ್ಲ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕೇಳಿ ತೆಗೆದುಕೊಂಡಿದ್ದೀರಾ? ಅದಕ್ಕೆ ಜ್ಞಾನೇಶ್‌ಕುಮಾರ್‌ ಅವರಿಗೆ ನ್ಯಾಯಾಂಗ ರಕ್ಷಣೆ ಒದಗಿಸಲಾಗಿದೆ’ ಎಂದು ಟೀಕಿಸಿದರು.

‘ಇಸಿಐ, ಇಆರ್‌ಒ ನೆಟ್‌ ಬದಲಿಸಿದ್ದು ಯಾರು? ಜಿಲ್ಲಾ ಚುನಾವಣಾ ಅಧಿಕಾರಿಗಳ ಲಾಗಿನ್‌ ಅಧಿಕಾರ ಮೊಟಕುಗೊಳಿಸಿ ದೆಹಲಿಯಿಂದಲೇ ಮತದಾರರ ಹೆಸರು ಡಿಲೀಟ್ ಮಾಡುವಂಥ ಬದಲಿಸಿದ್ದು ಯಾಕೆ? ನೀವು ರಾಜ್ಯ ಹಾಗೂ ಕೇಂದ್ರ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿದ್ದೀರಿ. ಎನ್‌ಡಿಎ ಮೈತ್ರಿಕೂಟದ ಗೆದಿದ್ದೇ ಶೇ3ರಷ್ಟು ಮತಗಳ ಬಹುಮತದಿಂದ. ಇದೀಗ ಶೇ15ರಷ್ಟು ಮತದಾರರ ಹೆಸರು ತೆಗೆಯಲಾಗಿದೆ. ಇದರ ಹಿಂದೆ ಯಾರಿದ್ದಾರೆ? ಇಂಥ ತರ್ಕಬದ್ಧ ಪ್ರಶ್ನೆಗಳನ್ನು ಕೇಳಿದರೆ, ಬಿಜೆಪಿ ಉತ್ತರಿಸುತ್ತಿದೆಯೇ ವಿನಾ ಚುನಾವಣಾ ಆಯೋಗ ಏಕೆ ಉತ್ತರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇಂಡಿಯಾ ಮೈತ್ರಿಕೂಟವು ಅಣಕು ಸಂಸತ್ ನಡೆಸಿದ್ದು ಪ್ರಜಾಪ್ರಭುತ್ವಕ್ಕೆ ಅವಮಾನ’ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘‌ವಾಯು ಪಡೆ ವಿಮಾನ ಹಾರಿಸುವಾಗ ಅಣಕು ಪ್ರದರ್ಶನ ನಡೆಸಲ್ಲವೇ? ಮತದಾನದ ವೇಳೆ ಇವಿಎಂನಲ್ಲಿ ಅಣಕು ಮತಹಾಕಲ್ಲವೇ? ಅವು ಕೂಡ ಪ್ರಜಾಪ್ರಭುತ್ವಕ್ಕೆ ಅವಮಾನವೇ?’ ಎಂದು ಮರು ಪ್ರಶ್ನಿಸಿದರು.

‘ತನ್ನ ಬಯಲಾಗುತ್ತದೆ ಎಂದು ಬಿಜೆಪಿ ಬೀದಿಗೆ ಇಳಿದು ಸಮರ್ಥನೆಯಲ್ಲಿ ತೊಡಗಿದೆ. ಕಾಂಗ್ರೆಸ್‌ನವರು ಅರಾಜಕತೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಮೋದಿ, ಶಾ ಟೀಕಿಸುತ್ತಿದ್ದಾರೆ. ಸರ್ಕಾರಿ ವಿರೋಧಿ ಹೋರಾಟಕ್ಕೆ ವಿದೇಶಿ ನೆರವು ಬರುತ್ತಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳುತ್ತಿದ್ದಾರೆ. ವಿದೇಶಿ ಬಂಡವಾಳ ತೆಗೆದುಕೊಂಡು ಭಾಗವತ್‌ ಅವರಿಗೆ ರೂಢಿ, ನಮಗಲ್ಲ.ಐಟಿ ಇಡಿ, ಫೆರಾ, ಫೆಮಾ ಎಲ್ಲವೂ ಕೇಂದ್ರ ಸರ್ಕಾರದ ಕೈಯಲ್ಲಿಯೇ ಇದೆಯಲ್ಲವೇ? ವಿದ್ಯಾರ್ಥಿಗಳ ಹೋರಾಟಕ್ಕೂ ವಿದೇಶಿ ಕೈವಾಡವಿದೆ ಎನ್ನುವುದಾದರೆ ನೀವೆಷ್ಟು ಅಸಮರ್ಥರರು, ಅಯೋಗ್ಯರು? ನೀವೆಲ್ಲ ಉದ್ರಿ ಭಾಷಣ ಕೈಬಿಟ್ಟು, ಅದನ್ನು ದಾಖಲೆ ಸಮೇತ ತೋರಿಸಲಿ’ ಎಂದು ಸವಾಲು ಹಾಕಿದರು.

‘ನಾವು ‌ಅಧಿಕಾರದಲ್ಲಿ‌ ಇದ್ದಾಗ ಟಿ.ಎನ್.ಶೇಷನ್ ಅಂಥವರನ್ನು ‌ಚುನಾವಣಾ ಆಯೋಗಕ್ಕೆ ನೇಮಿಸಿದ್ದೇವು, ಜ್ಞಾನೇಶ್‌ಕುಮಾರ್‌ ಅವರನ್ನು ಅಲ್ಲ. ಇದು ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸದ ಪುಕ್ಕಲ, ಹೇಡಿ ಸರ್ಕಾರ. ಇಂಥ ಸರ್ಕಾರ ನೋಡಿಲ್ಲ. ಬರೀ ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತುವುದೇ ಅವರ ಕೆಲಸ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ