ಚಲನೆ ಬಳಸಿ ವಿದ್ಯುತ್ ಶಕ್ತಿ ಉತ್ಪಾದಿಸುವ ಯಂತ್ರ ತಯಾರಿಸಿದ 12 ವರ್ಷದ ಬಾಲಕ

ಚಲನೆ ಬಳಸಿ ವಿದ್ಯುತ್ ಶಕ್ತಿ ಉತ್ಪಾದಿಸುವ ಯಂತ್ರ ತಯಾರಿಸಿದ 12 ವರ್ಷದ ಬಾಲಕ

ಚಲನೆ ಬಳಸಿ ವಿದ್ಯುತ್ ಶಕ್ತಿ ಉತ್ಪಾದಿಸುವ ಯಂತ್ರ ತಯಾರಿಸಿದ 12 ವರ್ಷದ ಬಾಲಕ

ಅಮೆರಿಕದ ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾರ್ಥಿ, 12 ವರ್ಷದ ಅಹ್ಮದ್ ಅಬ್ದೆಲ್ಸಲಾಮ್ (Ahmed Abdelsalam) ಎಂಬುವವರು ದಿನನಿತ್ಯದ ಚಲನೆಯನ್ನು ಬಳಸಿಕೊಂಡು ಶುದ್ಧ ವಿದ್ಯುತ್ ಶಕ್ತಿ ಉತ್ಪಾದಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

‘VERDA’ ಆವಿಷ್ಕಾರ ಮತ್ತು ಅದರ ವಿಶೇಷತೆ:

ಅಹ್ಮದ್ ಅವರು ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಗೆ ‘ವರ್ಡಾ’ ಎಂದು ಹೆಸರಿಸಿದ್ದರೆ. ಇದು ‘ಎನರ್ಜಿ ಹಾರ್ವೆಸ್ಟಿಂಗ್’ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ.

ಚಲನೆಯಿಂದ ವಿದ್ಯುತ್: ಮನುಷ್ಯರು ನಡೆಯುವುದು (ಪಾದಚಾರಿ ಮಾರ್ಗಗಳು), ಗಾಳಿಯ ಬೀಸುವಿಕೆ ಹಾಗೂ ಸಾಗರದ ಅಲೆಗಳ ಚಲನೆಯಿಂದ ಉಂಟಾಗುವ ಚಲನಶಕ್ತಿಯನ್ನು (Kinetic Energy) ಗ್ರಹಿಸಿ, ಅದನ್ನು ಬಳಕೆಯಾಗಬಹುದಾದ ಶುದ್ಧ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ.

ವ್ಯರ್ಥವಾಗುವ ಶಕ್ತಿಯ ಬಳಕೆ: ದೈನಂದಿನ ಜೀವನದಲ್ಲಿ ನಮಗೆ ಅರಿವಿಲ್ಲದೇ ವ್ಯರ್ಥವಾಗುವ ಚಲನಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಪರಿಸರ ಸ್ನೇಹಿ ಇಂಧನ ಮೂಲವನ್ನು ಸೃಷ್ಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

3M ಯಂಗ್ ಸೈಂಟಿಸ್ಟ್ ಚಾಲೆಂಜ್‌ಗೆ ಆಯ್ಕೆ:

ಅಹ್ಮದ್ ಅವರ ಈ ಆವಿಷ್ಕಾರವು ಅಮೆರಿಕದ ಪ್ರಸಿದ್ಧ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಾಗಿರುವ '2026ರ 3M ಯಂಗ್ ಸೈಂಟಿಸ್ಟ್ ಚಾಲೆಂಜ್'ನ ಅಂತಿಮ–10 ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದ ಮಿನ್ನೇಸೋಟದಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಅಹ್ಮದ್ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯು ಸುಮಾರು ₹24 ಲಕ್ಷ ನಗದು ಬಹುಮಾನ ಹಾಗೂ ‘ಅಮೆರಿಕದ ಟಾಪ್ ಯಂಗ್ ಸೈಂಟಿಸ್ಟ್’ ಬಹುಮಾನವನ್ನು ಒಳಗೊಂಡಿದೆ.

ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಖ್ಯಾತ ವಿಜ್ಞಾನಿ ಅಹ್ಮದ್ ಜೆವೈಲ್ (Ahmed Zewail) ಅವರ ಸಂಶೋಧನೆಗಳು ತಮಗೆ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ದೊಡ್ಡ ಪ್ರೇರಣೆ ಎಂದು ಅಹ್ಮದ್ ಹೇಳಿದ್ದಾರೆ.

‘ಮುಂದಿನ 15 ವರ್ಷಗಳಲ್ಲಿ ನಾನೊಬ್ಬ ಯಶಸ್ವಿ ಇಂಜಿನಿಯರ್ ಅಥವಾ ಸಂಶೋಧಕನಾಗಿ ಪರಿಸರವನ್ನು ರಕ್ಷಿಸುವ ಮತ್ತು ಜನರ ಜೀವನವನ್ನು ಸುಲಭಗೊಳಿಸುವ ನೂತನ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಆವಿಷ್ಕರಿಸಲು ಬಯಸುತ್ತೇನೆ’ ಎಂದು ಅಹ್ಮದ್ ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ