‘ನಾನು ನರ್ವಸ್ ಆಗಿ, ಸೀತಾರಾಮ್ ಜಪಿಸುತ್ತಿದ್ದೆ’; ತಂದೆ ಜೊತೆ ಆರ್ಯವೀರ್ ಮಾತು

‘ನಾನು ನರ್ವಸ್ ಆಗಿ, ಸೀತಾರಾಮ್ ಜಪಿಸುತ್ತಿದ್ದೆ’; ತಂದೆ ಜೊತೆ ಆರ್ಯವೀರ್ ಮಾತು

‘ನಾನು ನರ್ವಸ್ ಆಗಿ, ಸೀತಾರಾಮ್ ಜಪಿಸುತ್ತಿದ್ದೆ’; ತಂದೆ ಜೊತೆ ಆರ್ಯವೀರ್ ಮಾತು

ನವದೆಹಲಿ: 19 ವರ್ಷದೊಳಗಿನವರ ಎಸಿಸಿ ಮೆನ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದ ಬಳಿಕ ಭಾರತದ ಯುವ ಬ್ಯಾಟರ್ ಆರ್ಯವೀರ್ ಸೆಹ್ವಾಗ್ ಸಂಭ್ರಮಾಚರಣೆಯ ವೇಳೆ ತಂದೆ ಸೆಹ್ವಾಗ್ ಅವರಿಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದಾರೆ.

ಆರ್ಯವೀರ್ ವಿಡಿಯೊ ಕರೆ ಮಾಡಿರುವ ವಿಡಿಯೊವನ್ನು ವೀರೇಂದ್ರ ಸೆಹ್ವಾಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

‘ಅಪ್ಪಾ, ನನಗೆ ತುಂಬಾ ಆತಂಕವಾಗಿತ್ತು. ಆ ಸಮಯದಲ್ಲಿ ಸೀತಾರಾಮ್, ಸೀತಾರಾಮ್ ಎಂದು ಜಪಿಸುತ್ತಿದ್ದೆ’ ಎಂದು ಆರ್ಯವೀರ್ ವಿಡಿಯೊ ಕರೆಯಲ್ಲಿ ಹೇಳಿರುವುದನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ.

ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಸೆಹ್ವಾಗ್, ಪ್ರಶಸ್ತಿ, ರನ್‌ಗಳು ಮತ್ತು ಟ್ರೋಫಿಗಳಿಗಿಂತಲೂ ಕೆಲವು ಕ್ಷಣಗಳು ಹೆಚ್ಚು ಅಮೂಲ್ಯವಾಗಿರುತ್ತವೆ. ತಂದೆಯಾಗಿ ಇಂತಹ ನೆನಪುಗಳನ್ನು ಜೀವನಪೂರ್ತಿ ಉಳಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

‘ನೀನು ಯಾವಾಗಲೂ ತಾಳ್ಮೆಯಿಂದ ಇರಬೇಕು. ಪರಿಶ್ರಮ ಮತ್ತು ಪ್ರತಿಭೆಯಿಂದ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು’ ಎಂದು ಮಗನಿಗೆ ಹಾರೈಸಿದ್ದಾರೆ.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆರ್ಯವೀರ್ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ಆಡಿರುವ 5 ಪಂದ್ಯಗಳಿಂದ ಮೂರು ಅರ್ಧಶತಕ ಒಂದು ಶತಕ ಸಹಿತ 361 ರನ್ ಕಲೆಹಾಕಿದ್ದರು. ಫೈನಲ್ ಪಂದ್ಯದಲ್ಲೂ 58 ರನ್ ಸಿಡಿಸಿ ಮಿಂಚಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ