ಸಾರಿಗೆ ನಿಗಮಗಳ ನಷ್ಟದ ನೆಪ ಹೇಳಿ ಪ್ರಯಾಣ ದರ ಏರಿಸಿದ ಸರ್ಕಾರ

ಸಾರಿಗೆ ನಿಗಮಗಳ ನಷ್ಟದ ನೆಪ ಹೇಳಿ ಪ್ರಯಾಣ ದರ ಏರಿಸಿದ ಸರ್ಕಾರ

ಸಾರಿಗೆ ನಿಗಮಗಳ ನಷ್ಟದ ನೆಪ ಹೇಳಿ ಪ್ರಯಾಣ ದರ ಏರಿಸಿದ ಸರ್ಕಾರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣದ ಟಿಕೆಟ್‌ ದರವನ್ನು ಶೇ 23ರಷ್ಟು ಮತ್ತು ಬಿಎಂಟಿಸಿ ಟಿಕೆಟ್‌ ದರವನ್ನು ಶೇ 35ರಷ್ಟು ಏರಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಇಂದು ರಾತ್ರಿ ಇಂದಲೇ ಜಾರಿಗೆ ಬರಲಿದೆ.

ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿದ್ದು, ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಈಚೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ದರ ಪರಿಷ್ಕರಣೆ ಮಾಡಲಾಗಿದೆ.

ಈಚೆಗಷ್ಟೇ ಹಾಲಿನ ದರ ಹೆಚ್ಚಳವಾಗಿರುವುದರಿಂದ, ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆಯಾಗಲಿದೆ.

ಬಿಎಂಟಿಸಿ ಬಸ್‌ ಟಿಕೆಟ್‌ ದರದ ಕನಿಷ್ಠ ಮೊತ್ತವನ್ನು ₹ 6ರಿಂದ ₹ 10ಕ್ಕೆ ಹಾಗೂ ಗರಿಷ್ಠ ದರವನ್ನು ₹ 35ರಿಂದ ₹ 40ಕ್ಕೆ ಏರಿಸಲಾಗಿದೆ. ಬಿಎಂಟಿಸಿಯ ವಾಯುವಜ್ರ ಬಸ್‌ ಪ್ರಯಾಣದ ಕನಿಷ್ಠ ದರವನ್ನು ₹ 15ರಿಂದ ₹ 20ಕ್ಕೆ, ಗರಿಷ್ಠ ದರವನ್ನು ₹ 75ರಿಂದ ₹ 90ಕ್ಕೆ ಹೆಚ್ಚಿಸಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ