ನಾನು ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ, ಡಿಕೆಶಿ ಕ್ಷಮೆ ಕೇಳಲಿ: ಶಾಸಕ ಅಭಯ

ನಾನು ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ, ಡಿಕೆಶಿ ಕ್ಷಮೆ ಕೇಳಲಿ: ಶಾಸಕ ಅಭಯ

ನಾನು ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ, ಡಿಕೆಶಿ ಕ್ಷಮೆ ಕೇಳಲಿ: ಶಾಸಕ ಅಭಯ

ಬೆಳಗಾವಿ: 'ನಾನು ಅಲ್ಪಸಂಖ್ಯಾತ ಮತದಾರರನ್ನು ಎಸ್ಐಆರ್ ನಿಂದ ತೆಗೆದುಹಾಕಲು ಹೇಳಿ, ನಂತರ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪೊಪ್ಪಿಕೊಂಡಿದ್ದೇನೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವಲ್ಲ. ಸುಳ್ಳು ಹೇಳಿದ ಅವರು ಕ್ಷಮೆ ಕೇಳಬೇಕು' ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

'ಮತದಾರರ ಪಟ್ಟಿಯಿಂದ ಹೆಸರುಗಳನ್ನು ನೇರವಾಗಿ ತೆಗೆದುಹಾಕುವಂತೆಯೂ ಪತ್ರ ನೀಡಿಲ್ಲ. ನನ್ನ ಪತ್ರದ ಅರ್ಥ ತಿರುಚಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಭಯ ಪಾಟೀಲ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಶಿವಕುಮಾರ್ ಹೇಳಿದ್ದಾರೆ. ನಾನು ಯಾವ ಚುನಾವಣಾ ಅಧಿಕಾರಿಯ ಬಳಿಯೂ ಹೋಗಿ ತಪ್ಪೊಪ್ಪಿಕೊಂಡಿಲ್ಲ. ನೀಡದ ಹೇಳಿಕೆಯನ್ನು ನನ್ನ ಹೆಸರಿಗೆ ಸೇರಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

‘ಪರಿಶೀಲನೆಗೂ, ಹೆಸರು ಅಳಿಸುವುದಕ್ಕೂ ವ್ಯತ್ಯಾಸವಿದೆ’

ಬೂತ್ ಮಟ್ಟದ ಪಕ್ಷದ ಏಜೆಂಟರು ನೀಡಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆ ಮಾಹಿತಿಯನ್ನು ಪರಿಶೀಲಿಸಿ, ಅಕ್ರಮ ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.

'ನನ್ನ ಪತ್ರದಲ್ಲಿ ಹೆಸರು ತೆಗೆದುಹಾಕಲು ನೇರ ಸೂಚನೆ ನೀಡಿಲ್ಲ. ಪತ್ರವನ್ನು ಸರಿಯಾಗಿ ಓದದೆ ಆರೋಪ ಮಾಡಲಾಗುತ್ತಿದೆ. ಬಿಎಲ್‌ಎ–2ಗಳು ಸಲ್ಲಿಸಿದ ಮಾಹಿತಿಯನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತರು ನೀಡಿದ ಪಟ್ಟಿಯೆಂದು ಬಿಂಬಿಸಲಾಗುತ್ತಿದೆ ಎಂದ ಅವರು, ಮತದಾರರ ಅರ್ಹತೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಹೊಣೆ ಎಂದು ಹೇಳಿದರು.

'ಸಮುದಾಯ ಗುರಿಯಾಗಿಸಿದ ಆರೋಪಕ್ಕೆ ನಿರಾಕರಣೆ

ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮವರು ಎಲ್ಲರ ಮನೆಗಳಿಗೂ ಭೇಟಿ ನೀಡಿದ್ದಾರೆ. ಒಂದು ವಿಳಾಸದಲ್ಲಿ ಹೆಚ್ಚಿನ ಮತದಾರರ ಹೆಸರುಗಳಿದ್ದು, ಭೇಟಿಯ ವೇಳೆ ಅಷ್ಟು ಜನರು ಕಂಡುಬರದಿದ್ದಾಗ ಅನುಮಾನ ವ್ಯಕ್ತಪಡಿಸಿ ಪರಿಶೀಲನೆಗೆ ಕೋರಿದ್ದಾರೆ. ಅದಕ್ಕೆ ಸಮುದಾಯದ ಬಣ್ಣ ಹಚ್ಚುವುದು ಸರಿಯಲ್ಲ’ ಎಂದರು.

ಆಕ್ಷೇಪಣೆ ಸಲ್ಲಿಕೆಯ ವಿಧಾನ ಹಾಗೂ ಸಂಖ್ಯಾಮಿತಿಯ ಉಲ್ಲಂಘನೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಬೇಕು ಎಂದು ಪ್ರತಿಕ್ರಿಯಿಸಿದರು.

‘ಅನುಮತಿಗಿಂತ ಹೆಚ್ಚಿನ ಅರ್ಜಿಗಳಿದ್ದರೆ, ನಿಯಮಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಿ. ಸ್ವೀಕರಿಸಬಹುದಾದ ಅರ್ಜಿಗಳ ವಿಚಾರಣೆ ನಡೆಸಲಿ’ ಎಂದರು.

ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪರಿಶೀಲಿಸುವ ಬದಲು ಬಿಜೆಪಿ ವಿರುದ್ಧ ಆರೋಪ ಹೊರಿಸಿ ರಾಜಕೀಯ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ದೂರಿದ ಅವರು, ‘ಅರ್ಹ ಮತದಾರರ ಹೆಸರು ಉಳಿಯಬೇಕು; ಅಕ್ರಮ ನಮೂದುಗಳಿದ್ದರೆ ಪರಿಶೀಲನೆಯ ಮೂಲಕ ಕ್ರಮವಾಗಬೇಕು’ ಎಂದು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ