
ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಲಾರಿ, ಚಾಲಕ ಪಾರು
ಹೆಬ್ರಿ: ಉಡುಪಿ– ಹೆಬ್ರಿ– ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 2ನೇ ತಿರುವಿನಲ್ಲಿ ಗುರುವಾರ ರಾತ್ರಿ ಈಚರ್ ಲಾರಿಯೊಂದು ಕಂದಕಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿ ಘಾಟಿಯಿಂದ ಕಂದಕಕ್ಕೆ ಬೀಳುತ್ತಿದ್ದಂತೆ ಕ್ಲೀನರ್ ಜಿಗಿದು ಪಾರಾಗಿದ್ದರು. ಚಾಲಕ ಲಾರಿಯಲ್ಲೇ ಸಿಲುಕಿದ್ದರು. ಲಾರಿಯು ಬ್ಯಾಡಗಿಯಿಂದ ಉಡುಪಿಗೆ ಬಾಳೆಕಾಯಿ ತುಂಬಿಕೊಂಡು ಬರುತ್ತಿತ್ತು. ಕ್ರೇನ್ ಮೂಲಕ ಲಾರಿಯನ್ನು ಶುಕ್ರವಾರ ಮುಂಜಾನೆ ಮೇಲೆತ್ತಲಾಯಿತು. ಬಳಿಕ ಚಾಲಕನನ್ನು ಹೊರ ತೆಗೆಯಲಾಯಿತು. ಸಬ್ ಇನ್‌ಸ್‌ಪೆಕ್ಟರ್ ಲೋಹಿತ್ ಕುಮಾರ್ ಮತ್ತು ತಂಡ ಸ್ಥಳದಲ್ಲಿದ್ದು ಸಹಕಾರ ನೀಡಿದರು.
ಚಾಲಕನ ಬಲಕಾಲು ಪಾದ, 3 ಬೆರಳುಗಳೂ ತುಂಡಾಗಿವೆ. ತಡೆಗೋಡೆ ಇಲ್ಲದೆ ಘಾಟಿಯ ಹಲವೆಡೆ ವಾಹನಗಳು ಕಂದಕಕ್ಕೆ ಉರುಳುವ ಘಟನೆ ಸಂಭವುಸುತ್ತಿವೆ. ಈಚೆಗೆ ಪಿಕ್‌ಅಪ್ ವಾಹನ ಕೂಡ ಅದೇ ಜಾಗದಲ್ಲಿ ಉರುಳಿತ್ತು. ತಡೆಗೋಡೆ ನಿರ್ಮಿಸುವಂತೆ ಸಮಾಜ ಸೇವಕ ಕುಚ್ಚೂರು ಪ್ರಭಾಕರ ಪೂಜಾರಿ ಒತ್ತಾಯಿಸಿದ್ದಾರೆ.